*ಗೋಣಿಕೊಪ್ಪ, ಜೂ. ೧೪: ಪ್ರತಿಭೆ ಅನಾವರಣಕ್ಕೆ ಸ್ವಯಂ ಅವಕಾಶದಿಂದ ದಾರಿ ಕಂಡುಕೊಳ್ಳಬೇಕಿದೆ ಎಂದು ಖ್ಯಾತ ಸಂಗೀತಗಾರ ವಿಜಯ ಪ್ರಕಾಶ್ ಹೇಳಿದರು.
ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ದುರ್ಗಾಬೋಜಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಮಾಧ್ಯಮ ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ನೈಜ ಪ್ರತಿಭೆ ಹೊರ ತರಲು ಸ್ವಯಂ ಪ್ರಯತ್ನ ಕೂಡ ಮುಖ್ಯ. ಇಂದಿನ ತಂತ್ರಜ್ಞಾನ ಬೆಳವಣಿಗೆಯಲ್ಲಿ ಸಣ್ಣ ವೀಡಿಯೋ ತುಣುಕು ಕೂಡ ಅವಕಾಶ ತೆರೆದುಕೊಳ್ಳಲಿದೆ. ಸ್ವಯಂ ವೇದಿಕೆಯಿಂದ ವಿಶ್ವಮಟ್ಟದಲ್ಲಿ ಗಮನ ಸೆಳೆಯಲು ಪ್ರಯತ್ನಿಸಬೇಕಿದೆ. ಯಶಸ್ಸು ಕೂಡ ದೊರೆಯಲಿದೆ ಎಂದು ಭರವಸೆ ಮೂಡಿಸಿದರು.
ನೈಜ ಪ್ರತಿಭೆ ಇರುವವರು ಅಡುಗೆ ಮನೆಯಲ್ಲಿಯೇ ಹಾಡಬಹುದು. ಸರಿಗಮಪ ಉಚ್ಚಾರಣೆ ಮೂಲಕ ಹಾಡುಗಾರಿಕೆಗೆ ಅವಕಾಶ ಸಿಗುತ್ತದೆ. ಮನೆಯಲ್ಲಿ ಹಾಡು ಜಿನುಗುವುದರಿಂದ ಹಾಡುಗಾರನಾಗಿ ಬೆಳೆಯಬಹುದು. ತಂತ್ರಜ್ಞಾನದಲ್ಲಿ ತಮ್ಮ ಪ್ರತಿಭೆಗೆ ಪ್ರೋತ್ಸಾಹ ಸಿಗುವಂತೆ ಮಾಡಿಕೊಳ್ಳಬಹುದು. ಸಂಗೀತದಿAದ ಸಾಕಷ್ಟು ಸಾಧಿಸಲು ಅವಕಾಶವಿದೆ. ಮನಸ್ಸಿನಲ್ಲಿ ಹೊಸತನ, ಹೊಸ ಚಿಂತನೆ ಹೊರ ಬರಲು ಸಂಗೀತ ಕೇಳಬೇಕು. ನವರಸದಲ್ಲಿ ಸಂಗೀತ ಕೂಡ ಆತ್ಮರಂಜನೆ ನೀಡುತ್ತದೆ. ಹಾಡುವುದು, ಹಾಡು ಕೇಳುವುದು ಮುಖ್ಯ ಎಂದು ಸಲಹೆ ನೀಡಿದರು.
ಜೀವನಕ್ಕೆ ಸಂಗೀತವನ್ನು ಔಷಧ ರೂಪದಲ್ಲಿ ಬಳಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಸಂಗೀತ ಕೇಳುವುದರಿಂದ ಮನಸ್ಸಿಗೆ ಮತ್ತು ದೇಹಕ್ಕೆ ಮುದ ದೊರೆಯುತ್ತದೆ. ಇದು ಒಂದು ರೀತಿಯ ಔಷಧಿಯಾಗಿದೆ ಎಂಬುವುದು ಸಂಶೋಧನೆ ವರದಿ ಕೂಡ ವ್ಯಕ್ತಪಡಿಸಿದೆ. ಕಲಾವಿದನಿಗಿಂತ ಕಲಾ ರಸಿಕತನ ಶ್ರೇಷ್ಠವಾಗಿದೆ. ಕಲೆಯನ್ನು ಆಸ್ವಾಧಿಸಿದಾಗ ವೈಯಕ್ತಿಕವಾಗಿ ಮಾತ್ರವಲ್ಲದೆ ಸಮಾಜಕ್ಕೂ ಲಾಭ ಎಂದರು.
ಇAದಿನ ಕಾಲಘಟ್ಟದಲ್ಲಿ ಜೀವನದಲ್ಲಿ ಅತಿಯಾದ ವೇಗ ಗಂಡಾAತರ ತಂದೊಡ್ಡುತ್ತಿದೆ. ಭವಿಷ್ಯವನ್ನು ಊಹಿಸದೆ ಅವಶ್ಯಕತೆಗಿಂತ ಹೆಚ್ಚಿನ ವೇಗ ಬದುಕಿಗೆ ಬೇಡ ಎಂಬ ಅರಿವು ಮುಖ್ಯವಾಗ ಬೇಕು. ಬಾನಿಗೊಂದು ಎಲ್ಲೆ ಎಲ್ಲಿದೆ. ನಿನ್ನಾಸೆ ಕೊನೆ ಎಲ್ಲಿದೆ ಎಂಬ ಹಾಡು ಅರ್ಥೈಸಿಕೊಂಡು ಮುಂದುವರಿಯುವ ಅನಿವಾರ್ಯತೆ ಇದೆ. ಇದರಿಂದ ಸಾಕಷ್ಟು ಸಮಸ್ಯೆಗಳನ್ನು ಪರಿಹರಿಸಿ ಕೊಳ್ಳಲು ಸಾಧ್ಯತೆ ಹೆಚ್ಚಿದೆ ಎಂದರು.
ಕೊಡಗು ಜಾಗತಿಕ ಮಟ್ಟದಲ್ಲಿ ಪ್ರವಾಸಿ ತಾಣವಾಗಿ ಗುರುತಿಸಿ ಕೊಂಡಿದೆ. ಇಲ್ಲಿನ ಸಂಪ್ರದಾಯ, ಪದ್ದತಿ, ಸಂಸ್ಕೃತಿ ಎಲ್ಲಿಯೂ ಕಾಣುವುದಿಲ್ಲ. ಇದರಿಂದಾಗಿ ಸಂಸ್ಕೃತಿ ಉಳಿಸುವ ಅವಶ್ಯಕತೆ ಇದೆ ಎಂದರು.
ಪೊನ್ನAಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಪ್ರಧಾನ ಕಾರ್ಯದರ್ಶಿ ಎನ್. ಎನ್. ದಿನೇಶ್, ಖಜಾಂಜಿ ವಿ. ವಿ. ಅರುಣ್ಕುಮಾರ್, ನಿರ್ದೇಶಕರಾದ ಚಿಮ್ಮಣಮಾಡ ದರ್ಶನ್ ದೇವಯ್ಯ, ಜಗದೀಶ್ ಜೋಡುಬೀಟಿ, ಸಿಂಗಿ ಸತೀಶ್, ಎಂ.ಎA. ಚನ್ನನಾಯಕ ಇದ್ದರು.