ಬೆಂಗಳೂರು, ಜೂ. ೧೩: ಬೆಂಗಳೂರಿನಲ್ಲಿನ ಭಾರತೀಯ ಭೂ ಸೇನಾ ಇಂಜಿನಿಯರಿAಗ್ ವಿಭಾಗದ ಮೆಡ್ರಾಸ್ ಇಂಜಿನಿಯರಿAಗ್ ಗ್ರೂಪ್ (ಎಂ.ಇ.ಜಿ.) ಆಂ್ಯಡ್ ಕೇಂದ್ರಕ್ಕೆ ಸ್ಪೋರ್ಟ್ಸ್ ಕೋಟಾ ಮೂಲಕ ತಾ. ೨೧ ಹಾಗೂ ತಾ. ೨೨ ರಂದು ನೇಮಕಾತಿ ನಡೆಯಲಿದೆ. ಅಕ್ಟೋಬರ್ ೧, ೨೦೦೩ ರಿಂದ ಏಪ್ರಿಲ್ ೧, ೨೦೦೭ ರೊಳಗೆ ಜನಿಸಿರುವವರು ಸ್ಪೋರ್ಟ್ಸ್ ಕೋಟ ಮೂಲಕ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅರ್ಹರಾಗಿರುತ್ತಾರೆ.

ಸೈಲಿಂಗ್, ಈಜು, ಹಾಕಿ, ಬಾಕ್ಸಿಂಗ್, ರೋವಿಂಗ್, ಕಯಾಕಿಂಗ್ ಹಾಗೂ ಕನೋಯಿಂಗ್, ಫುಟ್‌ಬಾಲ್, ವಾಲಿಬಾಲ್, ಬಾಸ್ಕೆಟ್ ಬಾಲ್ ಅಥವಾ ಕಬಡ್ಡಿ ಕ್ರೀಡೆಗಳಲ್ಲಿ ನುರಿತ ಆಸಕ್ತರು ನೇಮಕಾತಿಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಕ್ರೀಡೆಯಲ್ಲಿ ಭಾರತವನ್ನು, ರಾಜ್ಯವನ್ನು, ಖೇಲೋ ಇಂಡಿಯಾ ಕ್ರೀಡೆಯಲ್ಲಿ, ಜಿಲ್ಲಾ, ಕಾಲೇಜು ಅಥವಾ ವಿಶ್ವವಿದ್ಯಾಲಯ ಮಟ್ಟದಲ್ಲಿ ಪ್ರತಿನಿಧಿಸಿದವರಿಗೆ ಆದ್ಯತೆ ಇದೆ.

ನೇಮಕಾತಿಯಲ್ಲಿ ಭಾಗವಹಿಸಲು ಇಚ್ಛಿಸುವವರು ೧೦, ೧೨ನೇ ತರಗತಿಯ ಫಲಿತಾಂಶ ಪತ್ರ ಹಾಗೂ ಸಂಬAಧಿತ ಇತರ ದಾಖಲೆಗಳನ್ನು ಹೊಂದಿರಬೇಕು. ಟಿ.ಸಿ. ಪತ್ರ, ತಹಶೀಲ್ದಾರ್ ನೀಡುವ ಡಾಮಿಸೈಲ್ / ನೇಟಿವಿಟಿ ಪತ್ರ ಹೊಂದಿರಬೇಕು. ಕಳೆದ ೬ ತಿಂಗಳು ಒಳಗಿನ ಪೊಲೀಸ್ ವೆರಿಫಿಕೇಷನ್ ದಾಖಲೆ, ಅಫಿಡವಿಟ್, ಗ್ರಾಮ ಪಂಚಾಯಿತಿ, ಸ್ಥಳೀಯ ಆಡಳಿತ ವತಿಯಿಂದ ಕಳೆದ ೬ ತಿಂಗಳೊಳಗಿನ ‘ಅನ್ ಮ್ಯಾರೀಡ್' ಸರ್ಟಿಫಿಕೇಟ್' (ವಿವಾಹ ಆಗದಿರುವ ಸಂಬAಧ ದಾಖಲೆ), ಆಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಖಾತೆ ವಿವರ, ಕಳೆದ ೨ ವರ್ಷಗಳಿಂದ ದೊರೆತಿರುವ ಕ್ರೀಡಾ ಸಾಧನೆ ಸಂಬAಧ ಪ್ರಮಾಣ ಪತ್ರಗಳನ್ನು ತಪ್ಪದೆ ತರಬೇಕಾಗಿ ಎಂ.ಇ.ಜಿ. ಪ್ರಕಟಣೆ ತಿಳಿಸಿದೆ. ತಾ. ೨೧ ಹಾಗೂ ೨೨ ರಂದು ಬೆಂಗಳೂರಿನ (ಎಸ್.ಪಿ.ಜಿ ಗೇಟ್) ಎಂ.ಇ.ಜಿ. ಆ್ಯಂಡ್ ಸೆಂಟರ್‌ನಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.