ಕೂಡಿಗೆ, ಜೂ. ೧೩: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಕಳೆದ ೨೦ ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಮೆಕ್ಕೆಜೋಳ ಬಿತ್ತನೆಗೆ ಸಮಸ್ಯೆಯಾಗಿದೆ. ಅಧಿಕವಾದ ಮಳೆಯಿಂದಾಗಿ ಭೂಮಿಯ ಹೆಚ್ಚು ಶೀತ ತೇವಾಂಶ ಹೊಂದಿರುವುದರಿAದಾಗಿ ಮೆಕ್ಕೆಜೋಳ ಬಿತ್ತನೆಗೆ ಹಿನ್ನಡೆಯಾಗುತ್ತಿದೆ.

ಕುಶಾಲನಗರ ತಾಲೂಕು ವ್ಯಾಪ್ತಿಯು ಅರೆಮಲೆನಾಡು ಪ್ರದೇಶವಾಗಿದ್ದರೂ ಸಹ ಕಳೆದ ೨೦ ದಿನಗಳಿಂದ ಬೀಳುತ್ತಿರುವ ಮಳೆಯಿಂದಾಗಿ ನೀರು ಜಮೀನಿನಲ್ಲಿ ನಿಲ್ಲುವುದು, ಅಲ್ಲದೆ ಅತಿಯಾದ ಶೀತಾಂಶದಿAದ ಮೆಕ್ಕೆಜೋಳವು ಮೊಳಕೆ ಬರದೆ ಕರಗುವುದರಿಂದಾಗಿ ಈ ವ್ಯಾಪ್ತಿಯ ರೈತರ ಮೆಕ್ಕೆಜೋಳ ಬಿತ್ತನೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

ಈಗಾಗಲೇ ಅನೇಕ ರೈತರು ಬಿತ್ತನೆ ಮಾಡಿದ ಮೆಕ್ಕೆಜೋಳವು ಅತಿಯಾದ ಮಳೆಯಿಂದಾಗಿ ಮತ್ತು ಕೆಲ ಭಾಗದಲ್ಲಿ ನೀರು ನಿಂತ ಪರಿಣಾಮವಾಗಿ ಜಮೀನಿನಲ್ಲಿ ಕೊಳೆತು ಹೋದ ಘಟನೆಯೂ ನಡೆದಿದೆ.

ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚು ಮೆಕ್ಕೆಜೋಳ ಬೆಳೆಯುವ ಪ್ರದೇಶವನ್ನು ಹೊಂದಿರುವ ಗ್ರಾಮಗಳಲ್ಲಿ ಅನೇಕ ರೈತರು ಬಿತ್ತನೆ ಭೂಮಿಯ ಸಿದ್ಧತೆಯೊಂದಿಗೆ ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಎಲ್ಲಾ ಸಲಕರಣೆಗಳ ಜೊತೆಯಲ್ಲಿ ಸಿದ್ಧರಾಗಿದ್ದು, ಮಳೆಯ ಬಿಡುವಿನ ನಂತರ ಬಿತ್ತನೆ ಕಾರ್ಯದಲ್ಲಿ ತೊಡಗಲು ಕಾಯುತ್ತಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ.