ಕುಶಾಲನಗರ: ಕೇಂದ್ರದಲ್ಲಿ ಪ್ರಧಾನ ಮಂತ್ರಿಯಾಗಿ ಮೋದಿ ಹಾಗೂ ಸಚಿವರಾಗಿ ಎನ್.ಡಿ.ಎ. ಪ್ರತಿನಿಧಿಗಳು ಪ್ರಮಾಣವಚನ ಸ್ವೀಕರಿಸಿದ ಸಂದರ್ಭ ಕುಶಾಲನಗರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪ್ರಮುಖರು, ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಚೆಟ್ಟಳ್ಳಿ: ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿದ ಹಾಗೂ ಕೇಂದ್ರದಲ್ಲಿ ನರೇಂದ್ರಮೋದಿ ಸಾರಥ್ಯದಲ್ಲಿ ಎನ್‌ಡಿಎ ಸರಕಾರದ ಆಡಳಿತದ ಚುಕ್ಕಾಣಿ ಹಿಡಿದ ಹಿನ್ನೆಲೆ ಚೆಟ್ಟಳ್ಳಿ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ವಿಜಯೋತ್ಸವವನ್ನು ಆಚರಿಸಲಾಯಿತು.
ಬಿಜೆಪಿ ಕಾರ್ಯಕರ್ತರು ಪಕ್ಷದ ಧ್ವಜ ಹಿಡಿದು ಘೋಷಣೆ ಕೂಗುತ್ತಾ ಪಟ್ಟಣದಲ್ಲಿ ಮೆರವಣಿಗೆ ತೆರಳಿ ಮಾನವ ಸರಪಳಿ ನಿರ್ಮಿಸಿ ಸಂಭ್ರಮಿಸಿದರು.
ಸೋಮವಾರಪೇಟೆ ಮಂಡಲ ವಕ್ತಾರ ಬಲ್ಲಾರಂಡ ಕಂಠಿ ಕಾರ್ಯಪ್ಪ ಮಾತನಾಡಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳು ಯಾವುದೇ ಫಲಕಾರಿಯಾಗಲಿಲ್ಲ. ಪಕ್ಷದ ಕಾರ್ಯಕರ್ತರ ಶ್ರಮದ ಫಲವಾಗಿ ಕೇಂದ್ರದಲ್ಲಿ ಎನ್‌ಡಿಎ ಸರಕಾರ ಗೆಲುವನ್ನು ಸಾಧಿಸಿದೆಂದರು.
ಬಿಜೆಪಿ ಹಿರಿಯ ಕಾರ್ಯಕರ್ತ ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿ, ಈ ಬಾರಿಯ ಬಿಜೆಪಿಯ ಮತ ಛಿದ್ರಗೊಳ್ಳುವ ಮೂಲಕ ಬಿಜೆಪಿಯು ಪತನಗೊಳ್ಳಲಿದೆಯೆಂದು ಕಾಂಗ್ರೆಸ್ಸಿಗರು ಭವಿಷ್ಯ ನುಡಿದಿದ್ದರು. ಆದರೆ, ಅದು ಹುಸಿಯಾಗಿ ಎನ್‌ಡಿಎ ಕೇಂದ್ರದ ಚುಕ್ಕಾಣಿ ಹಿಡಿದಿದೆ ಎಂದರು. ಹಿರಿಯ ಕಾರ್ಯಕರ್ತೆ ಮೇರಿ ಅಂಬುದಾಸ್ ಮಾತನಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಹಾಜರಿದ್ದರು.
ಪೊನ್ನಂಪೇಟೆ: ನರೇಂದ್ರ ಮೋದಿ ೩ನೇ ಬಾರಿಗೆ ದೇಶದ ಪ್ರಧಾನಿಯಾದ ಹಿನ್ನೆಲೆ ಹಾಗೂ ಮಾಜಿ ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕೇಂದ್ರದ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಕಾರಣಕ್ಕಾಗಿ ಕೋತೂರಿನಲ್ಲಿ ಜೆಡಿಎಸ್ -ಬಿಜೆಪಿ ಪ್ರಮುಖರು ಹಾಗೂ ಕಾರ್ಯ ಕರ್ತರು ಸಂಭ್ರಮಾಚರಿಸಿದರು.
ಕಾನೂರು-ಕೋತೂರು ಮುಖ್ಯ ರಸ್ತೆಯಲ್ಲಿ ಜಮಾಯಿಸಿದ ಜೆಡಿಎಸ್ ಹಾಗೂ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಜಯ ಘೋಷ ಗಳನ್ನು ಹಾಕುತ್ತಾ ಪಟಾಕಿಯನ್ನು ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭ ಕೊಡಗು ಜಿಲ್ಲಾ ಜೆಡಿಎಸ್ ಮುಖಂಡ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಕೆ.ಆರ್. ಸುರೇಶ್ ಮಾತನಾಡಿ, ದೇಶದ ಪ್ರಧಾನಿಯಾಗಿ ೩ನೇ ಬಾರಿಗೆ ಆಯ್ಕೆಯಾದ ನರೇಂದ್ರ ಮೋದಿಯವರು ಮುಂದಿನ ಐದು ವರ್ಷಗಳಲ್ಲಿ ನಮ್ಮ ದೇಶವನ್ನು ಇನ್ನಷ್ಟು ಬಲಿಷ್ಠವಾಗಿ ರೂಪಿಸ ಲಿದ್ದಾರೆ. ಮೋದಿ ಅವರ ನಾಯಕತ್ವ ರಾಷ್ಟçದ ಘನತೆಯನ್ನೇ ಬದಲಿಸಲಿದೆ ಎಂದು ಹೇಳಿದರಲ್ಲದೆ, ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸಂಪುಟದಲ್ಲಿ ಸ್ಥಾನ ಪಡೆದಿರುವುದರಿಂದ ಅವರ ರಾಜಕೀಯ ಬದುಕಿನ ಮತ್ತೊಂದು ಹೊಸ ಅಧ್ಯಾಯ ಆರಂಭಗೊಳ್ಳಲಿದೆ. ಇದು ಕರ್ನಾಟಕದಲ್ಲಿ ಜೆಡಿಎಸ್ ಪಕ್ಷದ ಬೆಳವಣಿಗೆಯಲ್ಲಿಯೂ ಪ್ರಮುಖ ಪಾತ್ರ ವಹಿಸಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಸಂಭ್ರಮಾಚರಣೆಯಲ್ಲಿ ಕಾನೂರು ಬಿಜೆಪಿ ಮುಖಂಡರಾದ ಎಸ್.ಎಂ. ಬಸಪ್ಪ, ಈಶ, ಸಚಿನ್, ಪವನ್ ಜೆಡಿಎಸ್ ಮುಖಂಡರಾದ ಕೆ.ಆರ್. ಸತೀಶ್, ಪರಮೇಶ್,ಈಶ್ವರ, ಸಂಪತ್ ತನೇಶ್, ಮಂಜುನಾಥ್, ಜೀವನ್, ಉಲ್ಲಾಸ್, ಪವಿ, ರಘು, ಬಸವರಾಜು, ಉಮೇಶ್, ಜನಕ, ಗಣೇಶ್ ಮೊದಲಾದವರು ಹಾಜರಿದ್ದರು.ಸುಂಟಿಕೊಪ್ಪ: ಸುಂಟಿಕೊಪ್ಪ ನರೇಂದ್ರ ಮೋದಿ ೩ನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ನಗರದ ಬಿಜೆಪಿ ಕಾರ್ಯಕರ್ತರು ರಾಮಮಂದಿರದಲ್ಲಿ ಪೂಜೆ ಸಲಿಸಿ ಕನ್ನಡ ವೃತ್ತದ ತನಕ ಮೆರವಣಿಗೆ ಯಲ್ಲಿ ಸಾಗಿ ವಿಜಯೋತ್ಸವ ಆಚರಿಸಿದರು.
ಕನ್ನಡ ವೃತ್ತದಲ್ಲಿ ಬಿಜೆಪಿ ನಾಯಕರುಗಳಿಗೆ ಜಯ ಘೋಷಗಳನ್ನು ಕೂಗಿದರು. ನಂತರ ಸುಂಟಿಕೊಪ್ಪ ಪಟ್ಟಣದ ಅಂಗಡಿ ಮನೆಗಳಿಗೆ ಬಿಜೆಪಿ ಕಾರ್ಯಕರ್ತರು ತೆರಳಿ ಸಿಹಿ ತಿಂಡಿಗಳನ್ನು ಹಂಚುವ ಮೂಲಕ ಸಂಭ್ರಮಾಚರಿಸಿದರು.
ಈ ಸಂದರ್ಭ ಕನ್ನಡ ವೃತ್ತದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್. ಸುನಿಲ್‌ಕುಮಾರ್, ಸುಂಟಿಕೊಪ್ಪ ಸ್ಥಾನೀಯ ಸಮಿತಿ ಅಧ್ಯಕ್ಷ ಧನು ಕಾವೇರಪ್ಪ, ಕಾರ್ಯದರ್ಶಿ ವಿ.ಕೆ. ರಾಜ, ಅಧ್ಯಕ್ಷ ಪ್ರಶಾಂತ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವಿಘ್ನೇಶ್, ಪಂಚಾಯಿತಿ ಸದಸ್ಯರುಗಳಾದ ಬಿ.ಎಂ. ಸುರೇಶ್, ಗೀತಾ, ವಸಂತಿ, ಪಕ್ಷದ ಹಿರಿಯ ಮುಖಂಡ ಡಿ. ನರಸಿಂಹ, ಗ್ರಾ.ಪಂ. ಮಾಜಿ ಅಧ್ಯಕ್ಷೆ ಬಿ.ಐ. ಭವಾನಿ, ಮಾಜಿ ಸದಸ್ಯರುಗಳಾದ ಗೀತಾ, ಆನಂದ, ಹರೀಶ್, ಸಹನಾ, ಹಿರಿಯ ಮುಖಂಡರುಗಳಾದ ಓಡಿಯಪ್ಪ ಸುಧೀಶ್, ಸಿ.ಸಿ. ಸುನೀಲ್ ಹಾಗೂ ಬಿಜೆಪಿ ಕಾರ್ಯರ್ತರು ಇದ್ದರು.ಗುಡ್ಡೆಹೊಸೂರು: ಪ್ರಧಾನಿಯಾಗಿ ಮೋದಿ ಅವರು ಪ್ರಮಾಣವಚನ ಸ್ವೀಕರಿಸಿದ ಸಂದರ್ಭ ಗುಡ್ಡೆಹೊಸೂರು ವೃತ್ತದಲ್ಲಿ ಬೃಹತ್ ಪರದೆ ಅಳವಡಿಸಿ ಸಾರ್ವಜನಿಕರು ವೀಕ್ಷಿಸಲು ಅವಕಾಶ ಮಾಡಲಾಗಿತ್ತು. ಮಳೆಯ ನಡುವೆಯೂ ಬಿ.ಜೆ.ಪಿ. ಪಕ್ಷದ ಅಧಿಕ ಮಂದಿ ಈ ಸಂದರ್ಭ ಹಾಜರಿದ್ದರು.
ಮೋದಿಯವರು ಪ್ರಮಾಣವಚನ ಸ್ವೀಕರಿಸಲು ವೇದಿಕೆಗೆ ಆಗಮಿಸುತ್ತಿದ್ದಂತೆ ನೆರೆದಿದ್ದ ಪಕ್ಷದ ಮುಖಂಡರು, ಕಾರ್ಯಕರ್ತರು ಮೋದಿ ಪರ ಮತ್ತು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿದರು. ನಂತರ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಕೊಡಗು-ಮೈಸೂರು ಕ್ಷೇತ್ರದಲ್ಲಿ ಯದುವೀರ್ ಗೆಲುವು ಸಾಧಿಸಿದ ಹಿನ್ನೆಲೆ ಸಾರ್ವಜನಿಕರಿಗೆ ಮೈಸೂರು ಪಾಕ್ ನೀಡಲಾಯಿತು. ಈ ಸಂದರ್ಭ ಈ ವಿಭಾಗದ ಮಂಡಲ ಕಾರ್ಯವಾಹಕ ಕಾರ್ಯದರ್ಶಿ, ಈ ವಿಭಾಗದ ಶಕ್ತಿ ಕೇಂದ್ರದ ಪ್ರಮುಖರು, ಪಕ್ಷದ ಬೂತ್ ಅಧ್ಯಕ್ಷರುಗಳು, ಗ್ರಾ.ಪಂ ಸದಸ್ಯರುಗಳು, ಬಿ.ಜೆ.ಪಿ.ಯ ಹಿರಿಯ ಮುಖಂಡರು ಮತ್ತು ಜನತಾದಳ ಪ್ರಮುಖರು, ಕಾರ್ಯಕರ್ತರು ಹಾಜರಿದ್ದರು.ನಾಪೋಕ್ಲು: ನಾಪೋಕ್ಲು ಬಿಜೆಪಿ ಶಕ್ತಿ ಕೇಂದ್ರ ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರಿಂದ ನರೇಂದ್ರ ಮೋದಿ ೩ನೇ ಅವಧಿಯಲ್ಲಿ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ವಿಜಯೋತ್ಸವ ಆಚರಿಸಲಾಯಿತು.
ಸ್ಥಳೀಯ ರಾಮಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಇಲ್ಲಿನ ಬಸ್ ನಿಲ್ದಾಣದಲ್ಲಿ, ಪಟಾಕಿ ಸಿಡಿಸಿ, ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ಬಳಿಕ ಮಾತನಾಡಿದ ಬಿಜೆಪಿ ರೈತ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಚಾಳಿಯಂಡ ಜಗದೀಶ್, ಪ್ರಧಾನಿ ನರೇಂದ್ರಮೋದಿ ಅವರಿಗೆ ಶ್ರೀರಾಮನ ಆಶೀರ್ವಾದದಿಂದ ಯಾವುದೇ ಅಡೆತಡೆ ಇಲ್ಲದೆ ಉತ್ತಮ ಆಡಳಿತ ನೀಡುವ ಶಕ್ತಿ ದೊರೆಯಲಿ ಎಂದು ಆಶಿಸಿದರು.
ಮಡಿಕೇರಿ ಗ್ರಾಮಾಂತರ ಮಂಡಲ ಹಿಂದುಳಿದ ವರ್ಗ ಮೋರ್ಚಾ ಅಧ್ಯಕ್ಷ ಬಿ.ಎಂ. ಪ್ರತೀಪ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಹತ್ತು ವರ್ಷಗಳ ಕಾಲ ದೇಶವನ್ನು ಮುನ್ನಡೆಸಿದ್ದಾರೆ. ಮುಂದಿನ ಐದು ವರ್ಷಗಳು ನಿರ್ವಿಘ್ನವಾಗಿ ದೇಶವನ್ನು ಮುನ್ನಡೆಸುವಂತಾಗಲಿ ಎಂದರು.
ಕಾರ್ಯಕ್ರಮದಲ್ಲಿ ಹಿಂದೂ ಸಂಘಟನೆಗಳ ಪ್ರಮುಖ ಕಂಗಾAಡ ಜಾಲಿ ಪೂವಪ್ಪ, ಬಜರಂಗದಳದ ನಾಪೋಕ್ಲು ಘಟಕದ ಅಧ್ಯಕ್ಷ ರಾಧಾಕೃಷ್ಣ ರೈ, ಮಡಿಕೇರಿ ತಾಲೂಕು ಬಿಜೆಪಿ ಅಧ್ಯಕ್ಷ ಪಾಡಿಯಮ್ಮಂಡ ಮನು ಮಹೇಶ್, ಒಬಿಸಿ ಮೋರ್ಚಾ ಕಾರ್ಯದರ್ಶಿ ಸುಕುಮಾರ್, ಮೂವೇರ ಪಟ್ಟು ಪೆಮ್ಮಯ್ಯ, ಎಂ.ಎA. ನರೇಂದ್ರ, ಬಿದ್ದಾಟಂಡ ರೋಜಿ ಚಿಣ್ಣಪ್ಪ, ಕೇಲೇಟಿರ ಸಾಬು ನಾಣಯ್ಯ, ಅರೆಯಡ ನಂದ ನಂಜಪ್ಪ, ಟಿ.ಎ. ಮಿಟ್ಟು, ಚೋಕಿರ ಸಜಿತ್ ಸಂದೇಶ್ ರೈ, ಟಿ.ಕೆ. ಸುಕುಮಾರ, ಚೋಕಿರ ಮಧು, ಪ್ರಕಾಶ್, ದಿಲೀಪ್, ಜೀವನ್, ತೇಜ್, ಮಣಿ ಇನ್ನಿತರರು ಸೇರಿದಂತೆ ಪಾಲ್ಗೊಂಡಿದ್ದರು.ಮಡಿಕೇರಿ: ನರೇಂದ್ರಮೋದಿ ೩ನೇ ಬಾರಿಗೆ ಪ್ರಧಾನಮಂತ್ರಿಯಾದ ಹಿನೆÀ್ನಲೆಯಲ್ಲಿ ಚೆಟ್ಟಿಮಾನಿಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಡಿ. ದಿನೇಶ್ ನೇತೃತ್ವದಲ್ಲಿ ವಿಜಯೋತ್ಸವ ನಡೆಯಿತು.ಪಾಲಿಬೆಟ್ಟ: ನರೇಂದ್ರ ಮೋದಿಯವರು ಮೂರನೇ ಬಾರಿ ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಪಾಲಿಬೆಟ್ಟ ಬಿಜೆಪಿ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಕೇಸರಿ ಬಣ್ಣದ ಪಾಯಸವನ್ನು ಕಾರ್ಯಕರ್ತರುಗಳಿಗೂ, ಹಿತೈಷಿಗಳಿಗೂ ಹಂಚಿದರು.
ಈ ಸಂದರ್ಭ ವೀರಾಜಪೇಟೆ ಮಂಡಲ ಕಾರ್ಯದರ್ಶಿ ಅಜಿತ್ ಕರುಂಬಯ್ಯ, ಶಕ್ತಿ ಕೇಂದ್ರದ ಅಧ್ಯಕ್ಷ ಪವಿತ್ರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ವಿಜು ಸುಬ್ರಮಣಿ, ಶಕ್ತಿ ಕೇಂದ್ರದ ಉಪಾಧ್ಯಕ್ಷ ರಿನೀಶ್ ಪ್ರಮುಖರುಗಳಾದ ಟಿ.ಜಿ. ವಿಜೇಶ್, ಮನು, ಕೆ.ಟಿ. ಆನಂದ, ಕುಟ್ಟಂಡ ವಸಂತ್ ಉಪಸ್ಥಿತರಿದ್ದರು.