ಸೋಮವಾರಪೇಟೆ, ಜೂ. ೧೩: ರಕ್ತದಾನದಿಂದ ದಾನಿಗಳ ಆರೋಗ್ಯ ವೃದ್ಧಿಸುತ್ತದೆ. ಈ ನಿಟ್ಟಿನಲ್ಲಿ ನಿಯಮಿತ ರಕ್ತದಾನ ಮಾಡಬೇಕು ಎಂದು ಸೋಮವಾರಪೇಟೆ ಜೆ.ಎಂ.ಎಫ್.ಸಿ.ಯ ಪ್ರಧಾನ ಸಿವಿಲ್ ನ್ಯಾಯಾಧೀಶ ಕೆ. ಗೋಪಾಲಕೃಷ್ಣ ಹೇಳಿದರು.
ಜೇ.ಸಿ.ಐ. ಸೋಮವಾರಪೇಟೆ ಪುಷ್ಪಗಿರಿ, ಕೊಡಗು ಜಿಲ್ಲಾ ರಕ್ತನಿಧಿ ಘಟಕ ಮತ್ತು ಯಡೂರು ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಕ್ತದಾನದಿಂದ ದಾನಿಯ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ದೇಹವು ಪುನರುಜ್ಜೀವಗೊಳ್ಳುತ್ತದೆ ಮತ್ತು ಹೊಸಕೋಶಗಳನ್ನು ಉತ್ಪಾದಿಸುತ್ತದೆ ಮತ್ತು ಅದನ್ನು ತಾಜಾಗೊಳಿಸುತ್ತದೆ. ರಕ್ತದಾನ ಮಾಡುವುದಕ್ಕೆ ಅವಕಾಶ ಸಿಕ್ಕಾಗ ಆರೋಗ್ಯವಂತರು ರಕ್ತದಾನ ಮಾಡಬೇಕು. ತಾನೂ ಕೂಡ ರಕ್ತದಾನಿಯಾಗಿದ್ದೇನೆ ಎಂದರು.
ಕೊಡಗು ಜಿಲ್ಲಾ ರಕ್ತನಿಧಿ ಘಟಕದ ವೈದ್ಯಾಧಿಕಾರಿ ಕರುಂಬಯ್ಯ ಡೆಂಗ್ಯೂ, ಅಪಘಾತ, ಹೆರಿಗೆ ಸೇರಿದಂತೆ ಅನೇಕ ಕಾರಣಗಳಿಗೆ ಜಿಲ್ಲಾಸ್ಪತ್ರೆಗೆ ಹೆಚ್ಚಿನ ರಕ್ತದ ಬೇಡಿಕೆಯಿದೆ. ಜಿಲ್ಲೆಯ ಸಂಘ-ಸAಸ್ಥೆಗಳು ರಕ್ತದ ಬೇಡಿಕೆಯನ್ನು ಪೂರೈಸುತ್ತಿದ್ದಾರೆ. ಅವರಿಗೆ ರಕ್ತನಿಧಿ ಘಟಕ ಚಿರಋಣಿಯಾಗಿದೆ. ರಕ್ತದ ಕೊರತೆಯಿಂದ ಯಾರೂ ಸಹ ಜೀವ ಕಳೆದುಕೊಳ್ಳಬಾರದು. ಇನ್ನೂ ಹೆಚ್ಚಿನ ದಾನಿಗಳು ರಕ್ತದಾನ ಮಾಡಬೇಕು ಎಂದು ಮನವಿ ಮಾಡಿದರು.
ರಕ್ತದಾನದ ಬಗ್ಗೆ ಭಯ, ಮೂಢನಂಬಿಕೆ, ಕೀಳರಿಮೆ ಬೇಡ. ರಕ್ತದಾನ ಮಾಡುವುದರಿಂದ ಹೃದಯ ಸಂಬAಧಿ ಖಾಯಿಲೆಗಳಿಂದ ಬಚಾವಾಗಬಹುದು. ಜೊತೆಯಲ್ಲಿ ಆರೋಗ್ಯವೂ ವೃದ್ಧಿಸುತ್ತದೆ. ಕೊಟ್ಟ ರಕ್ತ ೨೪ ಗಂಟೆಗಳಲ್ಲಿ ದೇಹದಲ್ಲಿ ಉತ್ಪತ್ತಿಯಾಗುತ್ತದೆ. ಆರೋಗ್ಯವಂತರು ೩ ತಿಂಗಳಿಗೊಮ್ಮೆ ಯಾವುದೇ ಆತಂಕವಿಲ್ಲದೆ ರಕ್ತದಾನ ಮಾಡಬಹುದು ಎಂದು ಹೇಳಿದರು.
ಹೆಚ್ಚು ಬಾರಿ ರಕ್ತದಾನ ಮಾಡಿದ ಫೋಟೋ ಗ್ರಾಫರ್ ಸಾಲೋಮನ್ ಡೇವಿಡ್, ವಕೀಲ ಎನ್.ಆರ್. ರೂಪ ಅವರುಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜೇಸಿಐ ಅಧ್ಯಕ್ಷ ಎಸ್.ಆರ್. ವಸಂತ್, ಬಿ.ಟಿ.ಸಿ.ಜಿ. ಕಾಲೇಜಿನ ಪ್ರಾಂಶುಪಾಲೆ ಧನಲಕ್ಷಿö್ಮÃ, ವಕೀಲರ ಸಂಘದ ಅಧ್ಯಕ್ಷ ಕಾಟ್ನಮನೆ ವಿಠಲ್ಗೌಡ, ಸರ್ಕಾರಿ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಮೀನಾಕ್ಷಿ, ಸಂಸ್ಥೆಯ ಕಾರ್ಯದರ್ಶಿ ಜಗದಾಂಭ ಇದ್ದರು. ಶಿಬಿರದಲ್ಲಿ ೬೪ ಮಂದಿ ರಕ್ತದಾನ ಮಾಡಿದರು.