ಪೊನ್ನAಪೇಟೆ, ಜೂ. ೧೪: ಭಾರತೀಯ ಭಾಷಾ ಸಂಸ್ಥಾನ ಉನ್ನತ ಶಿಕ್ಷಣ ಇಲಾಖೆ, ಶಿಕ್ಷಣ ಸಚಿವಾಲಯ, ಭಾರತ ಸರ್ಕಾರ ಇವರ ವತಿಯಿಂದ ಮೈಸೂರಿನಲ್ಲಿ ಆಯೋಜಿಸಲಾಗಿದ್ದ ಭಾರತೀಯ ಶಾಸ್ತಿçÃಯ ಭಾಷೆಗಳ ರಾಷ್ಟಿçÃಯ ಸಮ್ಮೇಳನ(ಸಿ.ಸಿ.ಎಲ್.ಐ-೨೪)ದಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜಿನ ಕನ್ನಡ ಭಾಷಾ ಉಪನ್ಯಾಸಕಿ ಡಾ. ಮುಲ್ಲೇಂಗಡ ರೇವತಿ ಪೂವಯ್ಯ ಅವರು ಆಹ್ವಾನಿತ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ‘ಕನ್ನಡ ಜನಪದದೊಳಗಣ ಕೊಡವ ಜಾನಪದ’ ಎಂಬ ವಿಷಯದಲ್ಲಿ ವಿಚಾರ ಮಂಡಿಸಿದರು.
ತಾ. ೧೧ ರಂದು ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ಸಭಾಂಗಣದಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ದೇಶದ ವಿವಿಧ ರಾಜ್ಯಗಳ, ವಿವಿಧ ಭಾಷೆಯ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದು, ವಿಷಯ ಮಂಡಿಸಿದರು. ಡಾ. ರೇವತಿ ಪೂವಯ್ಯ ಅವರು ಕನ್ನಡ ಜನಪದದೊಳಗಣ ಕೊಡವ ಜಾನಪದ ಎಂಬ ವಿಷಯವಾಗಿ ವಿಚಾರ ಮಂಡಿಸಿ ಗಮನ ಸೆಳೆದರು.