ಸುಂಟಿಕೊಪ್ಪ, ಜೂ. ೧೪: ಇಲ್ಲಿನ ಪೊಲೀಸ್ ಠಾಣಾ ವತಿಯಿಂದ ಶಾಲಾ-ಕಾಲೇಜು ಮಕ್ಕಳಿಗೆ ರಸ್ತೆ ನಿಯಮ ಪಾಲಿಸುವಂತೆ ಜಾಗೃತಿ ಮೂಡಿಸಲಾಯಿತು. ಸಂಜೆ ವೇಳೆ ಶಾಲೆ-ಕಾಲೇಜು ಬಿಡುವ ಸಂದರ್ಭ ಶಾಲಾ ಮಕ್ಕಳಿಗೆ, ದ್ವಿಚಕ್ರ ಸವಾರರಿಗೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ತಿಳಿಸಿದರು.
ಸುಂಟಿಕೊಪ್ಪ ಠಾಣಾಧಿಕಾರಿ ಎಂ.ಸಿ ಶ್ರೀಧರ್ ವಾಹನ ಚಾಲಕರನ್ನು ಉದ್ದೇಶಿಸಿ ಮಾತನಾಡಿ, ವಾಹನ ಚಾಲನೆ ಮಾಡುವಾಗ ಚಾಲಕರು ಚಾಲನಾ ಪರವಾನಿಗೆ ಕಡ್ಡಾಯವಾಗಿ ಹೊಂದಿರಬೇಕು. ಆಟೋ ಚಾಲಕರು ಮಕ್ಕಳನ್ನು ಮಿತಿಗಿಂತ ಅಧಿಕ ಸಂಖ್ಯೆಯಲ್ಲಿ ಕರೆದೊಯ್ಯುವುದು ಕಂಡುಬAದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಮೊಬೈಲ್ ಬಳಸುವುದರಿಂದ ಈಗಾಗಲೇ ಚಾಲಕರು, ಪ್ರಯಾಣಿಕರು ತಮ್ಮ ಅಮೂಲ್ಯವಾದ ಪ್ರಾಣವನ್ನು ಕಳೆದುಕೊಂಡಿದ್ದಾರೆ. ದ್ವಿಚಕ್ರ ಸವಾರರು ತಾವು ಹೆಲ್ಮೆಟ್ ಹಾಕುವುದರೊಂದಿಗೆ ಹಿಂಬದಿ ಸವಾರರು ಹೆಲ್ಮೆಟ್ ಹಾಕುವುದು ಕಡ್ಡಾಯ. ಹಾಗೆಯೇ ಕಾರು ಚಾಲಕರು ಸೀಟ್ ಬೆಲ್ಟ್ ಹಾಕುವುದರೊಂದಿಗೆ ರಸ್ತೆ ನಿಯಮವನ್ನು ಪಾಲಿಸಿ ಇತರ ಚಾಲಕರಿಗೆ ಮಾದರಿಯಾಗಬೇಕು ಎಂದರು.
ಈ ಸಂದರ್ಭ ಕ್ರೆöÊಂ ಪಿ.ಎಸ್.ಐ. ನಾಗರಾಜು, ಪೊಲೀಸ್ ಸಿಬ್ಬಂದಿಗಳಾದ ಕೆ.ಆರ್. ಜಗದೀಶ್. ಪ್ರವೀಣ್, ಹೊನ್ನರಾಜಪ್ಪ, ಅಭಿಷೇಕ್, ಶಾಲಾ ಶಿಕ್ಷಕರು ಹಾಜರಿದ್ದರು.