ಮಡಿಕೇರಿ, ಜೂ. ೧೩: ರಾಜ್ಯದಲ್ಲಿನ ಎಲ್ಲಾ ಸರಕಾರಿ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಪ್ರತಿ ಸೋಮವಾರದಂದು ತಮ್ಮ ತಮ್ಮ ಕೇಂದ್ರ ಸ್ಥಾನದ ಕಚೇರಿಗಳಲ್ಲೇ ಹಾಜರಿದ್ದು, ಕಾರ್ಯನಿರ್ವಹಿಸುವಂತೆ ಹೊಸ ಸರಕಾರಿ ಆದೇಶ ಜಾರಿಯಾಗಿದೆ.

ಮುಖ್ಯಮಂತ್ರಿಗಳು ಈ ನಿರ್ದೇಶನ ಹೊರಡಿಸಿದ್ದಾರೆ. ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಕಚೇರಿಗಳಲ್ಲೇ ಹಾಜರಿರುವ ಮೂಲಕ ವಿವಿಧ ಕೆಲಸಗಳಿಗೆ ಭೇಟಿ ನೀಡುವ ಸಾರ್ವಜನಿಕರಿಗೆ ಸರಕಾರಿ ಸೇವೆಗಳನ್ನು ಒದಗಿಸಲು ಅಗತ್ಯ ಕ್ರಮವಹಿಸಬೇಕೆಂದು ಸೂಚಿನೆ ನೀಡಲಾಗಿದೆ. ಇದರಂತೆ ತಾ. ೧೦ ರ ಸೋಮವಾರದಿಂದಲೇ ಈ ಕ್ರಮವನ್ನು ಜಾರಿಗೊಳಿಸಲಾಗಿದೆ.

ಕೃಷಿ ಪ್ರಧಾನವಾದ ಸಂಸ್ಕೃತಿಗಳಲ್ಲಿ ಕರ್ನಾಟಕ ಪ್ರಮುಖ ಪಾತ್ರವಹಿಸುತ್ತಿದೆ. ಸಾಮಾನ್ಯವಾಗಿ ಕೃಷಿಕರು ಸೋಮವಾರದ ದಿನದಂದು ಕೃಷಿ ಚಟುವಟಿಕೆಗಳಿಗೆ ಬಿಡುವು ನೀಡಿ ಸಂತೆ, ಪೇಟೆ ಕೆಲಸಗಳಿಗೆ ಹಾಗೂ ಕಚೇರಿಗಳಿಗೆ ಹೋಗುವುದು ಹಿಂದಿನಿAದಲೂ ನಡೆದುಕೊಂಡು ಬಂದಿರುವ ವಾಡಿಕೆಯಾಗಿದೆ.

ಈ ಹಿಂದೆ ಪ್ರತಿ ಸೋಮವಾರದಂದು ತಾಲೂಕು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳಾದಿಯಾಗಿ ಎಲ್ಲರೂ ಸಹ ತಮ್ಮ ತಮ್ಮ ಕೇಂದ್ರ ಸ್ಥಾನದ ಕಚೇರಿಗಳಲ್ಲಿದ್ದು, ಜನರ ಕೆಲಸಗಳನ್ನು ಮಾಡುತ್ತಿದ್ದ ಹಿನ್ನೆಲೆ ರಾಜ್ಯಕ್ಕೆ ಇದೆ. ಆದರೆ, ಕೃಷಿಯೇತರ ಹಿನ್ನೆಲೆಗಳಿಂದ ಅಧಿಕಾರಿಗಳು, ನೌಕರರು ಸರಕಾರಿ ಸೇವೆಗೆ ಬರುವ ಪ್ರಮಾಣ ಹೆಚ್ಚಿದÀ ಮೇಲೆ ಈ ಪದ್ಧತಿಯಲ್ಲಿ ಸ್ವಲ್ಪಮಟ್ಟಿಗೆ ಏರುಪೇರಾಗಿದೆ.

ಈ ಕಾರಣದಿಂದಾಗಿ ಪ್ರತಿ ಇಲಾಖೆಯ ಅಧಿಕಾರಿ, ನೌಕರರು ಕೇಂದ್ರ ಸ್ಥಾನದ ಕಚೇರಿಗಳಲ್ಲಿದ್ದು, ಕಚೇರಿ ಭೇಟಿ ನೀಡುವ ಜನರಿಗೆ ಸರಕಾರಿ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳುವಂತೆ ವಿಧಾನಪರಿಷತ್ ಸದಸ್ಯ ಅಡಗೂರು ಎಚ್. ವಿಶ್ವನಾಥ್ ಅವರು ಮುಖ್ಯಮಂತ್ರಿಗಳಲ್ಲಿ ಕೋರಿದ್ದು, ಇದಕ್ಕೆ ಅಗತ್ಯ ಕ್ರಮವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆಬ್ರವರಿ ೧ ರಂದು ಸರಕಾರದ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್ ಅವರಿಗೆ ಟಿಪ್ಪಣಿ ಮೂಲಕ ಸೂಚನೆ ನೀಡಿದ್ದರು.

ಇದರನ್ವಯ ಸರಕಾರದ ಅಧೀನ ಕಾರ್ಯದರ್ಶಿ

(ಮೊದಲ ಪುಟದಿಂದ) ವಿಮಲಾಕ್ಷಿ ಬಿ. ಅವರು ಫೆ. ೨೬ ರಂದು ಸಂಬAಧಿಸಿದ ಇಲಾಖೆಗಳಿಗೆ ನಿರ್ದೇಶನ ನೀಡಿದ್ದರು. ಇದೀಗ ಈ ಪ್ರಕ್ರಿಯೆಗಳ ಬಳಿಕ ಹೊಸ ಆದೇಶ ಜಾರಿಯಾಗಿದ್ದು, ತಾ. ೧೦ ರ ಸೋಮವಾರದಿಂದ ಕಾರ್ಯರೂಪಕ್ಕೆ ಬಂದಿದೆ. ಈ ಆದೇಶ ಹಲವು ಸಮಯದ ಹಿಂದೆಯೇ ಆಗಿದ್ದರು, ಇದೀಗವಷ್ಟೆ ಕೊಡಗಿನಲ್ಲಿ ಪಾಲನೆಗೆ ಮುಂದಾಗಲಾಗಿದೆ.