ಮಡಿಕೇರಿ, ಜೂ. ೧೩: ರೆಸಾರ್ಟ್ ಹಾಗೂ ವಿಲ್ಲಾ ನಿರ್ಮಾಣದ ಉದ್ದೇಶದಿಂದ ಭಾರಿ ವಾಹನಗಳ ಸಂಚಾರದಿAದ ರಸ್ತೆ ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪಿಸಿರುವ ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ೧ನೇ ಮೊಣ್ಣಂಗೇರಿಯ ಫೈರಿಂಗ್ ರೇಂಜ್ ರಸ್ತೆಯ ನಿವಾಸಿಗಳು ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಇಲ್ಲದಿದ್ದಲ್ಲಿ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮಸ್ಥ ಉಮೇಶ್ ಗುಡ್ಡೆಮನೆ, ಗಾಳಿಬೀಡಿಗೆ ಸಂಪರ್ಕ ಕಲ್ಪಿಸುವ ಒಂದೂವರೆ ಕಿ.ಮೀ. ಈ ರಸ್ತೆಯ ನಡುವೆ ೨೫ ಕುಟುಂಬಗಳು ವಾಸಿಸುತ್ತಿದ್ದು, ಸುಮಾರು ೧೨೫ ಜನಸಂಖ್ಯೆಯನ್ನು ಹೊಂದಿದೆ. ಕಳೆದ ಕೆಲವು ತಿಂಗಳುಗಳಿAದ ಇಲ್ಲಿ ಹೊರರಾಜ್ಯದವರಿಗೆ ಸೇರಿದ ರೆಸಾರ್ಟ್ ಹಾಗೂ ವಿಲ್ಲಾ ನಿರ್ಮಾಣವಾಗುತ್ತಿದೆ. ಕಿರಿದಾದ ಈ ರಸ್ತೆಯಲ್ಲಿ ೧೦ ಚಕ್ರದ ಭಾರಿ ವಾಹನಗಳು ಓಡಾಟ ನಡೆಸುತ್ತಿರುವುದರಿಂದ ರಸ್ತೆ ಕಿತ್ತು ಬಂದು ನಡೆದಾಡಲು ಯೋಗ್ಯವಲ್ಲದ ಸ್ಥಿತಿಗೆ ತಲುಪಿದೆ. ಇದರಿಂದ ಸ್ಥಳೀಯರಿಗೆ ತೀವ್ರ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಸ್ಥಳೀಯ ಗ್ರಾ.ಪಂ. ಹಾಗೂ ಶಾಸಕರಿಗೆ ಮನವಿ ನೀಡಿ ಕ್ರಮಕ್ಕೆ ಒತ್ತಾಯಿಸಿದ್ದೆವು. ಆ ಸಂದರ್ಭ ಅಧಿಕಾರಿಗಳಿಗೆ ಕ್ರಮಕೈಗೊಳ್ಳುವಂತೆ ಶಾಸಕರು ಸೂಚಿಸಿದ್ದರು. ನಂತರ ಸಭೆ ನಡೆಸಿ ರೆಸಾರ್ಟ್ಗೆ ಸಂಬAಧಿಸಿ ದವರು ರಸ್ತೆ ಸರಿಪಡಿಸುವ ಭರವಸೆಯನ್ನು ನೀಡಿದ್ದರು. ಆದರೆ, ಈವರೆಗೆ ಕೆಲಸ ನಡೆದಿಲ್ಲ. ಅಲ್ಲದೆ ಬೀದಿ ದೀಪವೂ ಹಾಳಾಗಿದೆ ಎಂದು ತಿಳಿಸಿದರು. ರಸ್ತೆ ಸರಿಪಡಿಸಲು ೭ ದಿನಗಳ ಗಡುವನ್ನು ನೀಡಲಾಗಿದ್ದು, ಅನಂತರವೂ ಸಮರ್ಪಕವಾಗಿ ಸ್ಪಂದಿಸದೆ ರಸ್ತೆ ಸರಿಪಡಿಸದಿದ್ದಲ್ಲಿ ಗ್ರಾಮಸ್ಥರೆಲ್ಲ ಒಗ್ಗೂಡಿ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿ ದರು. ಗೋಷ್ಠಿಯಲ್ಲಿ ಗ್ರಾಮಸ್ಥರಾದ ಯಾಲದಾಳು ಧನಂಜಯ, ಶರತ್, ಎ.ಡಿ. ಗಣಪತಿ, ಯಾಲದಾಳು ಉತ್ತಪ್ಪ, ದೀಕ್ಷಿತ್ ಹಾಜರಿದ್ದರು.