ಮಡಿಕೇರಿ, ಜೂ. ೧೪ : ರಾಜ್ಯದಲ್ಲಿ ಹೊಟೇಲ್, ರೆಸ್ಟೋರೆಂಟ್ ಹಾಗೂ ಲಘು ಉಪಹಾರ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ರಾಜ್ಯಾದ್ಯಂತ ತಪಾಸಣೆ ನಡೆಸಿ ಕ್ರಮಕೈಗೊಳ್ಳಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಮೂಲಕ ಸೂಚನೆ ನೀಡಲಾಗಿದೆ. ಇಂತಹ ಕೇಂದ್ರಗಳಲ್ಲಿ ಸ್ವಚ್ಛತೆ ಇಲ್ಲದಿರುವುದು, ಕಲುಷಿತ ವಿಷಾಹಾರ ಸೇವನೆ, ಕಲಬೆರೆಕೆ ಪದಾರ್ಥಗಳು, ಅವಧಿ ಮೀರಿದ ಪದಾರ್ಥಗಳನ್ನು ಉಪಯೋಗಿಸುತ್ತಿರುವ ಘಟನೆಗಳು ಸಂಭವಿಸುತ್ತಿರುವ ಬಗ್ಗೆ ಮಾಧ್ಯಮ ಹಾಗೂ ಸಾಮಾಜಿಕ ಜಾಲ ತಾಣದಲ್ಲಿ ವರದಿಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಉತ್ತಮ ಗುಣಮಟ್ಟ, ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಹೊಟೇಲ್, ರೆಸ್ಟೋರೆಂಟ್ ಹಾಗೂ ಲಘು ಉಪಹಾರ ಕೇಂದ್ರಗಳಲ್ಲಿ ತಪಾಸಣೆ ನಡೆಸಿ, ಅಗತ್ಯ ಕ್ರಮಕೈಗೊಳ್ಳಲು ಸೂಚಿಸಲಾಗಿದೆ. ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಡಾ. ಕೆ. ವೈಷ್ಣವಿ ಅವರ ಪತ್ರವನ್ನು ಉಲ್ಲೇಖಿಸಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತರು ಈ ಆದೇಶ ಹೊರಡಿಸಿದ್ದಾರೆ.
ಆಹಾರ ಸುರಕ್ಷತೆ : ರಾಜ್ಯಾದ್ಯಂತ ತಪಾಸಣೆ
(ಮೊದಲ ಪುಟದಿಂದ)
ಕೆಲವು ನಿಯಮಗಳು
ಇತ್ತೀಚೆಗೆ ಇಲಾಖೆ ಅಧಿಕಾರಿಗಳು ಹೊಟೇಲುಗಳಲ್ಲಿ ಹೆಚ್ಚಿನ ತಪಾಸಣೆ ನಡೆಸುತ್ತಿದ್ದಾರೆ. ಎಲ್ಲರೂ ಈSSಂI ಐiಛಿeಟಿse ಮತ್ತು ಈಔSಖಿಂಅ ಖಿಡಿಚಿiಟಿiಟಿg ಅeಡಿಣiಜಿiಛಿಚಿಣe ಇಟ್ಟುಕೊಂಡಿರಬೇಕು. ಇದಲ್ಲದೆ ಎಲ್ಲಾ ಪದಾರ್ಥಗಳ ಅವಧಿ ಮೀರುವ ದಿನಾಂಕದ ಕಡೆ ಹೆಚ್ಚಿನ ಗಮನ ಕೊಡಬೇಕು. ಯಾವುದೇ ಪದಾರ್ಥವನ್ನು ಖರೀದಿ ಮಾಡುವಾಗ ಅದರ ಮುಕ್ತಾಯದ ದಿನಾಂಕ ಹತ್ತಿರವಿದ್ದರೆ ಅಂದರೆ ಒಂದು ವಾರದಲ್ಲಿ ಮುಗಿಯಲಿದೆ ಎಂದು ತಿಳಿದರೆ ಅದನ್ನು ಖರೀದಿ ಮಾಡದಿರುವುದು ಒಳ್ಳೆಯದು. ಹಾಗೆಯೇ ಸ್ಟೋರ್‌ನಲ್ಲಿ ಮೊದಲು ಖರೀದಿಸಿದ ವಸ್ತುಗಳನ್ನು ಮೊದಲು ಬಳಕೆ ಮಾಡುವ (ಈiಡಿsಣ Iಟಿ ಈiಡಿsಣ ಔuಣ) ರೀತಿಯಲ್ಲಿ ಜೋಡಿಸಿಟ್ಟಿರಬೇಕು. ಇಲ್ಲದಿದ್ದರೆ ಕಾರ್ಮಿಕರು ಗಮನಿಸದೆ ಉಪಯೋಗಿಸದೆ ಹಾಗೆ ಉಳಿದ ಕೆಲವು ಪದಾರ್ಥಗಳು ಅವಧಿ ಮೀರುವ ಸಾಧ್ಯತೆಯಿರುತ್ತದೆ.
ಕಾರ್ಮಿಕರ ವೈದ್ಯಕೀಯ ತಪಾಸಣೆ ಕಡ್ಡಾಯವಾಗಿ ಮಾಡಿಸಿಟ್ಟಿರಬೇಕು. ಹಾಗೂ ಅದರ ದಾಖಲೆಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಆಗಿಂದಾಗ್ಗೆ ಕೀಟ ನಾಶಕ ಸಿಂಪಡಿಸಿ ಅದರ ವರದಿಯನ್ನು ಇಟ್ಟುಕೊಳ್ಳುವುದು ಸೂಕ್ತ. ಇವೆಲ್ಲವೂ ಅಧಿಕಾರಿಗಳ ತಪಾಸಣೆಯ ಸಂದರ್ಭದಲ್ಲಿ ಅಗತ್ಯವಿರುವುದರಿಂದ ಇವೆಲ್ಲದರ ಕಡೆ ಹೆಚ್ಚಿನ ಗಮನ ಕೊಡಬೇಕಿದೆ.