ಮಡಿಕೇರಿ, ಜೂ. ೧೪: ರಾಷ್ಟಿçÃಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಕಾರ್ಮಿಕ ಆಯುಕ್ತರವರ ಸೂಚನೆ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ, ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನ -೨೦೨೪ ರ ಅಂಗವಾಗಿ ಪಾನ್-ಇಂಡಿಯಾ ರೆಸ್ಕೂö್ಯ ಅಂಡ್ ರಿಹ್ಯಾಬ್ಲಿಟೇಷನ್ ಕಂಪೈನ್ ಆಫ್ ಚೈಲ್ಡ್ ಅಂಡ್ ಅಡೋಲೋಸೆಂಟ್ ಲೇಬರ್ ಅಭಿಯಾನವನ್ನು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳ ಜಂಟಿ ತಂಡದೊAದಿಗೆ ಸೋಮವಾರ ವಿವಿಧ ಸಂಸ್ಥೆಗಳಿಗೆ ಭೇಟಿ ನೀಡಿ ಅನಿರೀಕ್ಷಿತ ತಪಾಸಣೆ ಮಾಡಿ ಕಾನೂನಿನ ಕುರಿತು ಅರಿವು ಮೂಡಿಸಲಾಯಿತು. ಈ ಸಂದರ್ಭ ಹಿರಿಯ ಕಾರ್ಮಿಕ ನಿರೀಕ್ಷಕ ಎಂ.ಎA. ಯತ್ನಟಿ, ಕಾರ್ಯಕ್ರಮ ಸಂಯೋಜಕ ನವೀನ್ ಕುಮಾರ, ಮಕ್ಕಳ ಸಹಾಯವಾಣಿ-೧೦೯೮, ಚೈತ್ರಾ ಕೆ.ಎಸ್ ವಿಷಯ ನಿರ್ವಾಹಕರು, ಮಕ್ಕಳ ಸಹಾಯವಾಣಿ- ೧೦೯೮, ಮಹೇಶ್ (ಪಿಸಿ), ವಿಶೇಷ ಮಕ್ಕಳ ಪೊಲೀಸ್ ಘಟಕ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಆರ್. ಶೀರಾಜ್ ಅಹ್ಮದ್ ಹಾಗೂ ಡಾಟಾ ಎಂಟ್ರಿ ಆಪರೇಟರ್ ಝರೀನಾ ಎಫ್. ಅವರು ಉಪಸ್ಥಿತರಿದ್ದರು. ತಾಲೂಕು ಮಟ್ಟದ ಟಾಸ್ಕ್ಫೋರ್ಸ್ ತಂಡದ ಸದಸ್ಯರು ಪಾಲ್ಗೊಂಡಿದ್ದರು.