ಮಡಿಕೇರಿ, ಜೂ. ೧೩: ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ಸ್ಥಳೀಯ ಫೀ.ಮಾ. ಕಾರ್ಯಪ್ಪ ಕಾಲೇಜಿಗೆ ಅವಶ್ಯವಿದ್ದ ಶೌಚಾಲಯವೊಂದನ್ನು ನಿರ್ಮಿಸಿ ನೀಡಲಾಗಿದೆ.

ಈ ದಿನ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪಿ.ಎಲ್. ಧರ್ಮ, ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ, ಮಿಸ್ಟಿಹಿಲ್ಸ್ ಅಧ್ಯಕ್ಷ ಪ್ರಮೋದ್ ರೈ, ನಿ. ಪ್ರಾಂಶುಪಾಲ ಡಾ. ಸಿ.ಬಿ. ರಾಮಚಂದ್ರ, ಕೊಟ್ಟುಕತ್ತಿರ ಯಶೋಧ ಪ್ರಕಾಶ್, ಕುಲಸಚಿವ ಡಾ. ಸೀನಪ್ಪ ಶೌಚಾಲಯ ಕಟ್ಟಡ ಉದ್ಘಾಟಿಸಿದರು.

ಪ್ರಾಂಶುಪಾಲ ಮೇ. ಡಾ. ರಾಘವ ಮಾತನಾಡಿ ಮಿಸ್ಟಿಹಿಲ್ಸ್ ಕಾಲೇಜಿನ ಏಳಿಗೆಗೆ ಕೈ ಜೋಡಿಸುತ್ತಿರುವುದಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಮೋದ್ ರೈ ಮಾತನಾಡಿ ಶೌಚಾಲಯವನ್ನು ರೋಟರಿ ಜಿಲ್ಲಾ ಗ್ರಾಂಟ್‌ನಿAದ ಸುಮಾರು ರೂ. ೧.೮೧ ಲಕ್ಷ ವೆಚ್ಚದಲ್ಲಿ ನಿರ್ಮಿಸಿದುದಾಗಿ ಹೇಳಿದರು. ಸ್ಥಾಪಕ ಅಧ್ಯಕ್ಷ ಬಿ.ಜಿ. ಅನಂತ ಶಯನ ಮಾತನಾಡಿ ಸಂಸ್ಥೆಯು ಎರಡು ದಶಕಗಳಿಂದ ಕಾಲೇಜಿನೊಂದಿಗೆ ಯೋಜನೆ ಗಳನ್ನು, ಕಾರ್ಯಕ್ರಮಗಳನ್ನು ನಡೆಸುತ್ತಿರುವುದಾಗಿ ವಿವರಿಸಿದರು.

ಸ್ಥಳದಲ್ಲಿ ರೋಟರಿ ಉಪ ರಾಜ್ಯಪಾಲ ಡಿ.ಎಂ. ತಿಲಕ್, ಮಾಜಿ ಎ.ಜಿ. ರವೀಂದ್ರ ರೈ, ನಾಮಾಂಕಿತ ಅಧ್ಯಕ್ಷ ಮಧುಸೂದನ್ ಹಾಗೂ ಸದಸ್ಯರು ಹಾಜರಿದ್ದರು.