ಕೂಡಿಗೆ, ಜೂ. ೧೪: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಸಂಚಾರಿ ಪೊಲೀಸ್ ಠಾಣೆಯ ವತಿಯಿಂದ ನಿಯಮಗಳನ್ನು ಪಾಲನೆ ಮಾಡದ ವಾಹನ ಚಾಲಕರಿಗೆ ದಂಡ ವಿಧಿಸುವುದರ ಜೊತೆಗೆ ಜಾಗೃತಿ ಮೂಡಿಸಲಾಯಿತು.
ವಾಹನ ಸವಾರರ ತಪಾಸಣೆ ಮಾಡಿ ಹೆಲ್ಮೆಟ್ ಹಾಕದೆ ವಾಹನಗಳ ಚಲಾಯಿಸುವವರಿಗೆ, ಅಗತ್ಯ ದಾಖಲೆ ಇಲ್ಲದವರಿಗೆ, ಸೀಟ್ ಬೆಲ್ಟ್ ಇಲ್ಲದೆ ಚಾಲನೆ ಮಾಡುವುದು ಸೇರಿದಂತೆ ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸಿ ಚಾಲಕರಿಗೆ ಮನದಟ್ಟು ಆಗುವ ರೀತಿಯಲ್ಲಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಮೋಹನ್ ರಾಜ್ ಜಾಗೃತಿ ಮೂಡಿಸಿದರು. ಕಳೆದ ಒಂದು ವಾರದಿಂದ ನಿರಂತರ ತಪಾಸಣೆ ಮಾಡಲಾಗುತ್ತಿದೆ.