ಮಡಿಕೇರಿ, ಜೂ. ೧೪: ಮೂಲತಃ ಬಾಳೆಲೆ ಗ್ರಾಮದವರಾದ ಈ ಹಿಂದೆ ಕೊಡಗಿನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಕ್ಯಾಪ್ಟನ್ ಮಲಚೀರ ಅಯ್ಯಪ್ಪ ಅವರು ಕೇಂದ್ರ ಸಿವಿಲ್ ಏವಿಯೇಷನ್ ಇಲಾಖೆಯ ಅಧೀನದ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯೂರಿಟಿಯ ಜಂಟಿ/ವಿಭಾಗೀಯ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಅಯ್ಯಪ್ಪ ಅವರು (೨೦೧೪ ಬ್ಯಾಚ್ ಐ.ಪಿ.ಎಸ್) ಕೊಡಗಿನಲ್ಲಿ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ ಬಳಿಕ ಕರ್ನಾಟಕ ಲೋಕಾಯುಕ್ತದ ಎಸ್.ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಕೇಂದ್ರದ ಸೇವೆಗೆ ಅವರನ್ನು ನಿಯೋಜಿಸಲಾಗಿದೆ.