(ಹೆಚ್.ಕೆ. ಜಗದೀಶ್)
ಗೋಣಿಕೊಪ್ಪಲು, ಜೂ. ೧೫: ಹಿಟ್ ಅಂಡ್ ರನ್ ಪ್ರಕರಣದಲ್ಲಿ ಅಮಾಯಕ ಪಾದಚಾರಿಯ ಜೀವ ತೆಗೆದ ಕೆಎಸ್‌ಆರ್‌ಟಿಸಿ ಬಸ್ ಚಾಲಕನನ್ನು ೨೪ ಗಂಟೆಯಲ್ಲಿ ಪತ್ತೆಹಚ್ಚುವ ಮೂಲಕ ಆರೋಪಿ ಬಸ್ ಚಾಲಕ ಕೆಆರ್ ನಗರ ತಾಲೂಕಿನ ಕೃಷ್ಣೇಗೌಡನನ್ನು ಬಸ್ ಸಹಿತ ದಸ್ತಗಿರಿ ಮಾಡುವಲ್ಲಿ ಗೋಣಿಕೊಪ್ಪ ಪೊಲೀಸರು ಯಶಸ್ವಿಯಾಗಿದ್ದಾರೆ. ಮೂಲತಃ ಕುಟ್ಟ ಸಮೀಪದ ಪಲ್ಲೇರಿ ಭಾಗದಲ್ಲಿ ಕೂಲಿ ಕಾರ್ಮಿಕನಾಗಿ ಕಾಫಿ ತೋಟದ ಲೈನ್ ಮನೆಯಲ್ಲಿ ವಾಸವಾಗಿದ್ದ ಯರವರ ನೋಂಜ (೪೫) ಎಂಬಾತ ಕಳೆದ ೨ ದಿನಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟ ದುರ್ಧೈವಿಯಾಗಿದ್ದಾನೆ.
ಯರವರ ನೋಂಜ ದಕ್ಷಿಣ ಕೊಡಗಿನ ಪಲ್ಲೇರಿಯಿಂದ ಗೋಣಿಕೊಪ್ಪ ನಗರಕ್ಕೆ ಆಗಮಿಸಿ ತನ್ನ ಸಂಬAಧಿಕರ ಮನೆಯಲ್ಲಿ ದೇವರ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಾತೂರು ಬಳಿ ಇರುವ ಸಂಬAಧಿಕರ ಮನೆಯಲ್ಲಿ ಉಳಿಯುವ ಸಲುವಾಗಿ ಗೋಣಿ ಕೊಪ್ಪ ನಗರದಿಂದ ಹಾತೂರು ಬಳಿಗೆ ಕಾಲ್ನಡಿಗೆಯಲ್ಲಿಯೇ ತೆರಳುತ್ತಿದ್ದ. ಸಂಜೆ ೭.೩೦ರ ಸುಮಾರಿಗೆ ನಗರದಲ್ಲಿ ಬಿರುಸಿನ ಮಳೆ ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಆರಂಭವಾಗಿದ್ದು ಮಳೆ, ಗಾಳಿಗೆ ಕೆಲ ಕಾಲ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ರಸ್ತೆ ಬದಿಯಲ್ಲಿಯೇ ತೆರಳುತ್ತಿದ್ದ ನೋಂಜ ಕೈಕೇರಿ ದಾಟಿ ಹಾತೂರು ಬಳಿಯ ಇಳಿಜಾರಿನ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ವೀರಾಜಪೇಟೆಯಿಂದ ಮೈಸೂರಿಗೆ ತೆರಳುತ್ತಿದ್ದ ಹುಣಸೂರು ಡಿಪೋಗೆ ಸೇರಿದ ಕೆಎಸ್‌ಆರ್‌ಟಿಸಿ ಬಸ್ ಎದುರು ಬದಿಯಿಂದ ಆಗಮಿಸಿದೆ. ಈ ವೇಳೆ ಪಾದಚಾರಿಯನ್ನು ಗಮನಿಸದ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಕೃಷ್ಣೇಗೌಡ ಎಂಬಾತ ಪಾದಚಾರಿ ಕಾರ್ಮಿಕ ನೋಂಜನಿಗೆ ಡಿಕ್ಕಿಪಡಿಸಿ ನಿಲ್ಲಿಸದೆ ಪರಾರಿಯಾಗಿ ದ್ದಾನೆ. ಡಿಕ್ಕಿಯಾದ ರಭಸಕ್ಕೆ ರಸ್ತೆ ಬದಿಯಲ್ಲಿ ಕುಸಿದು ಬಿದ್ದ ನೋಂಜ ಸ್ಥಳದಲ್ಲಿಯೇ ಮೃತಪಟ್ಟಿದ್ದ.
ಮಾಹಿತಿ ತಿಳಿಯುತ್ತಿದ್ದಂತೆಯೇ ಗಸ್ತಿನಲ್ಲಿದ್ದ ಹೈವೆ ಪೆಟ್ರೋಲ್ ಪೊಲೀಸ್ ವಾಹನವು ಹಾತೂರು ಬಳಿಗೆ ತೆರಳಿ ಮೃತವ್ಯಕ್ತಿಯನ್ನು ಗೋಣಿಕೊಪ್ಪ ಆಸ್ಪತ್ರೆಗೆ ಸಾಗಿಸುವ ಕೆಲಸ ನಿರ್ವಹಿಸಿದೆ. ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣವನ್ನು ದಾಖಲಿಸಿಕೊಂಡ ಸಬ್‌ಇನ್ಸ್ಪೆಕ್ಟರ್ ರೂಪಾದೇವಿ ಬೀರಾದಾರ್ ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ. ತಮ್ಮ ಹಿರಿಯ ಅಧಿಕಾರಿ ಡಿವೈಎಸ್ಪಿ ಮೋಹನ್ ಕುಮಾರ್ ಹಾಗೂ ವೃತ್ತ ನಿರೀಕ್ಷಕ ಶಿವರಾಜ್ ಆರ್. ಮುಧೋಳ್ ಅವರಿಗೆ ಮಾಹಿತಿ ನೀಡಿದ್ದಾರೆ. ಹಿರಿಯ ಅಧಿಕಾರಿಗಳ ನಿರ್ದೇಶನ ದಂತೆ ಕಾರ್ಯಪ್ರವೃತ್ತರಾದ ಠಾಣಾಧಿಕಾರಿ ರೂಪಾದೇವಿ ಬೀರಾದಾರ್ ಗೋಣಿಕೊಪ್ಪ ನಗರ ಠಾಣೆಯ ಅನುಭವಿ ಕ್ರೆöÊಂ ಸಿಬ್ಬಂದಿಗಳಾದ ತೇಜಸ್‌ಕುಮಾರ್ ಹಾಗೂ ಎಂ. ಚಂದ್ರಶೇಖರ್ ಅವರಿಗೆ ಪ್ರಕರಣದ ಬಗ್ಗೆ ವಿವರ ನೀಡಿ ಆರೋಪಿಯ ಪತ್ತೆಗಾಗಿ ನಿರ್ದೇಶನ ನೀಡಿದ್ದರು.
ಹಿರಿಯ ಅಧಿಕಾರಿಗಳ ಆದೇಶದ ಹಿನೆÀ್ನಲೆಯಲ್ಲಿ ಕಾರ್ಯ ಪ್ರವೃತ್ತರಾದ ತೇಜಸ್‌ಕುಮಾರ್, ಎಂ. ಚಂದ್ರಶೇಖರ್, ಹಾಗೂ ಹನೀಫ್ ಆರೋಪಿಯ ಪತ್ತೆಗಾಗಿ ವೀರಾಜಪೇಟೆ, ಮೈಸೂರು ಹಾಗೂ ಪಿರಿಯಾಪಟ್ಟಣ ಭಾಗಕ್ಕೆ ತೆರಳಿದ್ದಾರೆ. ಹಿರಿಯ ಅಧಿಕಾರಿಗಳ ಮಾರ್ಗ ದರ್ಶನದಲ್ಲಿ ಅಪಘಾತ ಪಡಿಸಿದ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಕೃಷ್ಣೇಗೌಡ ಹಾಗೂ ಸರ್ಕಾರಿ ಬಸ್ಸನ್ನು ದಸ್ತಗಿರಿ ಮಾಡಿ ೨೪ ಗಂಟೆಯಲ್ಲಿ ಅಧಿಕಾರಿಗಳ ಮುಂದೆ ಹಾಜರುಪಡಿಸುವಲ್ಲಿ ಯಶಸ್ವಿ ಯಾಗಿದ್ದಾರೆ. ಪೊಲೀಸ್ ಅಧಿಕಾರಿಗಳ ಸಕಾಲಿಕ ಕ್ರಮದಿಂದ ಅಮಾಯಕನ ಜೀವ ಬಲಿ ಪಡೆದಿದ್ದ ಬಸ್ ಹಾಗೂ ಚಾಲಕನನ್ನು ವಶಕ್ಕೆ ಪಡೆಯುವ ಮೂಲಕ ಇಲಾಖೆಯು ತನ್ನ ಕಾರ್ಯವನ್ನು ಯಶಸ್ವಿ ಗೊಳಿಸಿದೆ.