ಸಿದ್ದಾಪುರ, ಜೂ. ೧೫: ಕಳೆದ ಒಂದು ತಿಂಗಳ ಹಿಂದೆ ಬಾಡಗ ಬಾಣಂಗಾಲ ವ್ಯಾಪ್ತಿಯಲ್ಲಿ ಕಾರ್ಮಿಕರಿಗೆ ಉಪಟಳ ನೀಡುತ್ತಿದ್ದ ಹಾಗೂ ಮಹಿಳೆಯೋರ್ವಳನ್ನು ಕೊಂದಿರುವ ಕಾಡಾನೆಯನ್ನು ಅರಣ್ಯ ಇಲಾಖೆಯು ಸೆರೆ ಹಿಡಿದು ರೇಡಿಯೋ ಕಾಲರ್ ಅಳವಡಿಸಿ, ಧಕ್ಷ ಎಂಬ ಹೆಸರನ್ನಿಟ್ಟು ನಾಗರಹೊಳೆ ರಾಷ್ಟಿçÃಯ ಉದ್ಯಾನಕ್ಕೆ ಸ್ಥಳಾಂತರಿಸಿತ್ತು. ಆದರೆ ಸ್ಥಳಾಂತರಗೊAಡ ಐದು ದಿನಗಳಲ್ಲಿ ಕಾಡಾನೆಯು ಬಾಡಗ ಬಾಣಂಗಾಲಕ್ಕೆ ಹಿಂತಿರುಗಿದೆ. ಹಿಂತಿರುಗಿದ ದಿನದಲ್ಲೇ ಆಟೋ ಸೇರಿದಂತೆ ಇನ್ನಿತರ ವಾಹನಗಳ ಮೇಲೆ ದಾಳಿ ನಡೆಸಿದೆ. ಕಾರ್ಮಿಕರಿಬ್ಬರನ್ನು ಅಟ್ಟಿಸಿಕೊಂಡು ಹೋಗಿದೆ.

ಒಂಟಿ ಸಲಗವು ರೇಡಿಯೋ ಕಾಲರ್ ಅಳವಡಿಸಿ ಸ್ಥಳಾಂತರ ಗೊಂಡು ಹಿಂತಿರುಗಿದ ಬಳಿಕ ಬಾಡಗ ಬಾಣಂಗಾಲ ವ್ಯಾಪ್ತಿಯ ಕಾಫಿ ತೋಟದಲ್ಲಿ ಬೀಡುಬಿಟ್ಟು ಸಿಕ್ಕಿದವರನ್ನು ಅಟ್ಟಿಸಿಕೊಂಡು ಹೋಗುತ್ತಿದೆ. ಈವರೆಗೆ ಐವರು ಕಾರ್ಮಿಕರು ಧಕ್ಷನ ದಾಳಿಯಿಂದ ಪಾರಾಗಿ ಜೀವ ಉಳಿಸಿಕೊಂಡಿದ್ದಾರೆ. ಮಾನವನ ಮೇಲೆ ದಾಳಿಗೆ ಮುಂದಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಧಕ್ಷನನ್ನು ಸೆರೆ ಹಿಡಿದು ಸ್ಥಳಾಂತರಿಸುವ ಬದಲು ಶಿಬಿರದಲ್ಲಿರಿಸುವಂತೆ ಅರಣ್ಯ ಇಲಾಖಾಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರೆ. ಆದರೆ ಅರಣ್ಯ ಇಲಾಖೆಯು ಧಕ್ಷನ ಹಿಂತಿರುಗುವಿಕೆಯನ್ನು ಅರಿತರೂ ಸಿಗ್ನಲ್ ಸಮಸ್ಯೆಯ ನೆಪದಲ್ಲಿ ಮೌನವಹಿಸಿದೆ.

ಅರಣ್ಯ ಇಲಾಖೆಯ ನಿರ್ಲಕ್ಷ್ಯದ ಮೌನಕ್ಕೆ ಬಾಡಗ ಬಾಣಂಗಾಲ ವ್ಯಾಪ್ತಿಯಲ್ಲಿ ಧಕ್ಷನ ದಾಳಿಗೆ ಬಡ ಜೀವ ಬಲಿಯಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಇಲಾಖೆ ವಿರುದ್ದ ದೂರಿದ್ದಾರೆ.

ಪುಂಡಾಟ ಮುಂದುವರೆಸಿದ ಧಕ್ಷ

ಶುಕ್ರವಾರದಂದು ಬಾಡಗ ಬಾಣಂಗಾಲ ಸಮೀಪದ ಚೌಡಿಕಾಡ್ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ದಾಳಿಗೆ ಮುಂದಾಗಿದೆ. ಅದೃಷ್ಟವಶಾತ್ ಕಾರ್ಮಿಕರು ಪಾರಾಗಿದ್ದಾರೆ. ಕಾರ್ಮಿಕರ ಮೇಲೆ ದಾಳಿಗೆ ಮುಂದಾದ ಸಲಗವು ರೋಷದಲ್ಲಿ ಕಾಫಿ ತೋಟದ ಪಂಪ್ ಸೆಟ್ ಕೋಣೆಯ ಬಾಗಿಲನ್ನು ಮುರಿದು ಗೋಡೆಗೆ ಹಾನಿಗೊಳಿಸಿದೆ.

-ವಾಸು