ಪೊನ್ನಂಪೇಟೆ, ಜೂ. ೧೫: ಬಿಟ್ಟಂಗಾಲ ಸಮೀಪದ ಬಾಳುಗೋಡು ಗ್ರಾಮದ ನಿವಾಸಿ ಮೂರೀರ ಸಿ. ಸೀಮ ಅವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆದುಕೊಂಡಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಪ್ರಾಧ್ಯಾಪಕಿ ಡಾ.ಕೋಡಿರ ಮೀನಾಕ್ಷಿ ಲೋಕೇಶ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ‘ಕೊಡಗಿನ ಕೊಡವ ಭಾಷಿಕ ಸಮುದಾಯಗಳ ಚಾರಿತ್ರಿಕ ಅಧ್ಯಯನ - ಸಮಾಜ ಮತ್ತು ಸಂಸ್ಕೃತಿ’ ಎಂಬ ಮಹಾಪ್ರಬಂಧಕ್ಕೆ ಸೀಮ ಅವರಿಗೆ ಡಾಕ್ಟರೇಟ್ ದೊರಕಿದ್ದು, ಪ್ರಸ್ತುತ ಇವರು ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದು, ಮೂರೀರ ಚಿಟ್ಟಿಯಪ್ಪ ಹಾಗೂ ಮಲ್ಲಿಗೆ ದಂಪತಿ ಪುತ್ರಿ.