ಮನುಷ್ಯ ಆರೋಗ್ಯವಾಗಿರಲು, ಸದಾ ಚಟುವಟಿಕೆಯಿಂದಿರಲು ಯೋಗ ಸಹಕಾರಿ. ಮಾನವನ ಅಂತರಾತ್ಮವನ್ನು ಪರಮಾತ್ಮನಲ್ಲಿ ವಿಲೀನಗೊಳಿಸುವ ಪ್ರಕ್ರಿಯೆ ಈ ಯೋಗ. ಮನಸ್ಸನ್ನು ಹತೋಟಿಯಲ್ಲಿಡಲು ಕೂಡ ಈ ಯೋಗ ಸಹಕಾರಿ. ಹಾಗಾಗಿ ಯೋಗ ಎಂಬ ಪದಕ್ಕೆ ಸುಯೋಗ ಬಂದಿದ್ದು, ಇಡೀ ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದೆ. ಹಾಗಾಗಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜೂನ್ ೨೧ ನ್ನು ವಿಶ್ವ ಯೋಗ ದಿನಾಚರಣೆ ಎಂದು ಘೋಷಣೆ ಮಾಡಿದ ಬಳಿಕ ಈ ದಿನವನ್ನು ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದೆ.

ಎಷ್ಟೋ ಮಂದಿ ಯೋಗ ಗುರುಗಳು ಸಾಕಷ್ಟು ಮಂದಿಗೆ ಯೋಗ ಕಲಿಸಿಕೊಟ್ಟಿದ್ದಾರೆ, ಕೊಡುತ್ತಲೂ ಇದ್ದಾರೆ. ಯೋಗ ಶಿಕ್ಷಣದಿಂದ ಎಷ್ಟೋ ಮಂದಿ ಬದುಕನ್ನೂ ಕಟ್ಟಿಕೊಂಡಿದ್ದಾರೆ. ಹೀಗೇ ಗುರುಗಳಿಂದ ಯೋಗ ಕಲಿತವರು ನಮ್ಮ - ನಿಮ್ಮ ನಡುವೆ ಸಾಕಷ್ಟು ಮಂದಿ ಇದ್ದೀರ, ನೀವು ಕೂಡ ನಿಮ್ಮ ಊರು, ಶಾಲೆ, ಸಂಘ - ಸಂಸ್ಥೆಗಳ ಜಾಗಗಳಲ್ಲಿ ಆಸಕ್ತಿ ಇರುವವರಿಗೆ ಯೋಗ ಕಲಿಸಿಕೊಡುತ್ತಿದ್ದೀರ, ಹಾಗಾಗಿ ನೀವುಗಳು ಕಲಿತಿರುವ ಯೋಗದಿಂದಾಗುವ ಉಪಯೋಗಗಳು, ನಿಮ್ಮ ಅನುಭವಗಳು, ನೀವುಗಳು ಕಲಿಸುತ್ತಿರುವ ಯೋಗದ ಮಜಲುಗಳ ಬಗ್ಗೆ ನಮಗೆ ಬರೆದು ಕಳುಹಿಸಿ.

ನಿಮ್ಮಿಂದಾಗಿ ಇನ್ನೂ ಒಂದಿಷ್ಟು ಮಂದಿಗೆ ಯೋಗದ ಪರಿಚಯವಾಗಲಿ, ಅವರೂ ಕೂಡ ಯೋಗ ಕಲಿಯುವಂತಾಗಿ ಅವರ ಬಾಳು ಕೂಡಾ ಸುಯೋಗವಾಗಲಿ, ಆರೋಗ್ಯವಂತ ಬದುಕು ಲಭಿಸಲಿ.

ನೀವುಗಳು ಕಲಿಸುತ್ತಿರುವ ಯೋಗದ ಬಗ್ಗೆ ೧೫೦ ಪದಗಳಿಗೆ ಮೀರದಂತೆ ಯೋಗದ ಭಂಗಿಯ ಚಿತ್ರದೊಂದಿಗೆ ನಮಗೆ ಕಳುಹಿಸಿಕೊಡಿ. ನಿಮ್ಮ ಭಾವಚಿತ್ರ ಕೂಡಾ ಇರಲಿ.

ನಿಮ್ಮ ಬರಹಗಳನ್ನು ೨೦.೦೬.೨೦೨೪ರ ಒಳಗಡೆ ವಾಟ್ಸಾö್ಯಪ್ ಸಂಖ್ಯೆ : ೭೪೮೩೫೬೩೭೫೬ ಇಲ್ಲಿಗೆ ಕಳುಹಿಸಿಕೊಡಿ.

ನಿಮ್ಮ ಪ್ರೀತಿಯ

ಜಿ. ಚಿದ್ವಿಲಾಸ್, ಸಂಪಾದಕ