ಮಡಿಕೇರಿ, ಜು. ೬: ಜಿಲ್ಲೆಯಲ್ಲಿ ಅಪೂರ್ಣಗೊಂಡಿರುವ ಕಾಮಗಾರಿ ಗಳ ವಸ್ತುಸ್ಥಿತಿಯ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ತ್ರೆöÊಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಲೋಕೋಪಯೋಗಿ ಇಲಾಖೆ ನಡೆಗೆ ಅತೃಪ್ತಿ ವ್ಯಕ್ತಪಡಿಸಿದರು. ಶಾಸಕದ್ವಯರಿಂದಲೂ ಪಿಡಬ್ಲೂö್ಯಡಿ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂಬ ಗಂಭೀರ ಆರೋಪ ಕೇಳಿ ಬಂತು.

ಲೋಕೋಪಯೋಗಿ ಇಲಾಖೆ ಕಾರ್ಯವೈಖರಿ ಸರಿಯಾಗಿಲ್ಲ. ಪರಿಣಾಮ ಹಲವಷ್ಟು ಕಾಮಗಾರಿಗಳು ಇಂದಿಗೂ ಕಾರ್ಯಗತಗೊಳ್ಳದೆ ಅಪೂರ್ಣ ಸ್ಥಿತಿಯಲ್ಲಿದೆ. ಇದಕ್ಕೆ ಕಾರಣವೇನೆಂದು ಅಧಿಕಾರಿಗಳು ಸಮಗ್ರ ವರದಿ ಸಲ್ಲಿಸಬೇಕು. ಅನುದಾನ, ಆಡಳಿತಾತ್ಮಕ, ತಾಂತ್ರಿಕ ಸಮಸ್ಯೆಗಳಿದ್ದರೆ ಅದನ್ನು ಸರಕಾರದ ಮಟ್ಟದಲ್ಲಿ ಚರ್ಚಿಸಿ ಸರಿಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಕೊಡವ ಹೆರಿಟೇಟ್ ವಿಳಂಬ - ಆಕ್ಷೇಪ

ಕೊಡವ ಹೆರಿಟೇಜ್ ಕಟ್ಟಡ ವಿಳಂಬಕ್ಕೆ ಕಾರಣವೇನೆಂದು ಸಚಿವರು ಹಾಗೂ ಶಾಸಕರು ಅಧಿಕಾರಿಗಳನ್ನು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿ ಲೋಕೋಪಯೋಗಿ ಇಲಾಖೆ ಅಭಿಯಂತರ ಸಿದ್ದೇಗೌಡ, ಕೊಡವ ಹೆರಿಟೇಜ್ ಕಾಮಗಾರಿ ಪೂರ್ಣಕ್ಕೆ ರೂ. ೫ ಕೋಟಿ ಅವಶ್ಯಕತೆ ಇದಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಉತ್ತರಿಸಿದರು.

ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಕೊಡವ ಹೆರಿಟೇಜ್ ವಿಳಂಬದ ಕುರಿತು ಸಚಿವರೊಂದಿಗೆ ಮಾತನಾಡಿದ್ದೇನೆ. ಅನುದಾನ ಬಿಡುಗಡೆಗೆ ಸಕಾರಾತ್ಮಕ ಸ್ಪಂದನವೂ ದೊರೆತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರವಾಸೋದ್ಯಮ ಇಲಾಖೆಗೆ ಕಟ್ಟಡ ಹಸ್ತಾಂತರಿಸಲಾಗಿದೆ. ಆದರೆ, ಈ ವಿಷಯ ಲೋಕೋಪಯೋಗಿ ಇಲಾಖೆಯ ಗಮನಕ್ಕೆ ಬಂದಿಲ್ಲ ಎಂದು ಹೇಳಿದರು.

ಸ್ಥಗಿತಗೊಂಡ, ವಿಳಂಬವಾಗುತ್ತಿರುವ ಕಟ್ಟಡ ಕಾಮಗಾರಿಗಳಿಗೆ ವೇಗ ನೀಡಬೇಕು. ಅಪೂರ್ಣ, ವಿಳಂಬಕ್ಕೆ ಲೋಕೋಪಯೋಗಿ ಇಲಾಖೆ ಕಾರಣ ಎಂದು ಬೋಸರಾಜು ನೇರ ಆರೋಪ ಮಾಡಿದರು.

ಪ್ರಗತಿ ಕಾಣದ ತಡೆಗೋಡೆ ಕಾಮಗಾರಿ

ಮಡಿಕೇರಿಯ ಜಿಲ್ಲಾಡಳಿತ ಭವನ ತಡೆಗೋಡೆ ಕೆಲಸ ಏನಾಗುತ್ತಿದೆ? ಜನ ನಮಗೆ ಬೈಯುತ್ತಿದ್ದಾರೆ. ಅರ್ಜಿ ಸಮಿತಿ ಮುಂದೆ ೫ ತಿಂಗಳಲ್ಲಿ ಕಾಮಗಾರಿ ಮುಗಿಸಲಾಗುವುದು ಎಂದಿದ್ದ ಅಧಿಕಾರಿಗಳು ಇಂದಿಗೂ ಪ್ರಗತಿ ತೋರಿಸಿಲ್ಲ. ಕಾಮಗಾರಿ ಮುಕ್ತಾಯದ ವಿಶ್ವಾಸವೂ ಕಂಡು ಬರುತ್ತಿಲ್ಲ. ಟಾರ್ಪಲ್ ಕೆಳಗೆ ಏನು ಕೆಲಸವಾಗುತ್ತಿದೆ ಎಂದು ಶಾಸಕ ಮಂತರ್‌ಗೌಡ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಎ.ಎಸ್. ಪೊನ್ನಣ್ಣ ಮಧ್ಯಪ್ರವೇಶಿಸಿ, ತಡೆಗೋಡೆಯ ಲೋಪದೋಷಕ್ಕೆ ಕಾರಣರಾದ ಅಧಿಕಾರಿಗಳನ್ನು ಅಮಾನತ್ತುಗೊಳಿಸಬೇಕೆಂದು ಒತ್ತಾಯಿಸಿದರು.

ಇದೇ ರೀತಿ ಮುಂದುವರೆದರೆ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಹಾಕುವ ಎಚ್ಚರಿಕೆಯನ್ನು ಸಚಿವ ಬೋಸರಾಜು ನೀಡಿದರು.

ಕಾಟಕೇರಿ, ತೋಮರ-ಕೆದಮುಳ್ಳೂರು ಸೇರಿದಂತೆ ಅನೇಕ ರಸ್ತೆ ಹಾಳಾಗಿ ಹಲವು ಸಮಯ ಕಳೆದರೂ ಕ್ರಮಕೈಗೊಳ್ಳದ ಬಗ್ಗೆ ಆಕ್ಷೇಪಿಸಿದ ಶಾಸಕ ಪೊನ್ನಣ್ಣ, ಭಾಗಮಂಡಲ-ಕರಿಕೆ ರಸ್ತೆಯಲ್ಲಿ ಜಂಗಲ್ ಕಟ್ಟಿಂಗ್ ನಡೆಸಿಲ್ಲ, ಇದರಿಂದ ಸಮಸ್ಯೆಯಾಗುತ್ತಿದೆ ಎಂದರು.

ಮಕ್ಕಂದೂರು-ಮಡಿಕೇರಿ-ಸೋಮವಾರಪೇಟೆ ರಸ್ತೆಗೆ ರಾತ್ರಿ ವೇಳೆ ಡಾಂಬರೀಕರಣ ಮಾಡಲಾಗಿದೆ. ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತಾರದೆ ಈ ಕೆಲಸ ಮಾಡಲಾಗಿದೆ. ಕ್ರಿಯಾಯೋಜನೆ ಯಲ್ಲಿ ಇರದ ಕೆಲಸ ಹೇಗೆ ನಡೆಯಿತು? ಈ ಸಂಬAಧ ಶಿಸ್ತು ಕ್ರಮಕೈಗೊಳ್ಳಬೇಕು. ಲೋಕೋಪಯೋಗಿ ಇಲಾಖೆಯಿಂದ ಜಿಲ್ಲೆ ಉದ್ಧಾರವಾಗಲ್ಲ ಎಂದು ಶಾಸಕ ಮಂತರ್ ಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಕ್ರಿಟಿಕಲ್ ಕೇರ್ ಸೆಂಟರ್ ಸ್ಥಗಿತ-ಬಡ್ಡಿ ಸಹಿತ ವಸೂಲಿ ಎಚ್ಚರಿಕೆ

ಜಿಲ್ಲಾಸ್ಪತ್ರೆ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ

(ಮೊದಲ ಪುಟದಿಂದ) ರೂ. ೨೯ ಕೋಟಿ ವೆಚ್ಚದ ಕ್ರಿಟಿಕಲ್ ಕೇರ್ ಸೆಂಟರ್ ಕಾಮಗಾರಿ ಪುರಾತತ್ವ ಇಲಾ ಖೆಯ ಆಕ್ಷೇಪಣೆ ಹಿನ್ನೆಲೆ ಸ್ಥಗಿತಗೊಂಡಿ ರುವುದಕ್ಕೆ ಸಚಿವರು ಗರಂ ಆದರು.

ನಿರ್ಮಾಣಗೊ ಳ್ಳುತ್ತಿರುವ ಕಟ್ಟಡ ಪಾರಂಪರಿಕ ಕಟ್ಟ ಡದ ೩೦೦ ಮೀಟರ್ ವ್ಯಾಪ್ತಿಯ ಲ್ಲಿರುವ ಕಾರಣ ಪುರಾತತ್ವ ಇಲಾಖೆ ಆಕ್ಷೇಪಣೆ ಮಾಡಿದೆ.

ತಾಂತ್ರಿಕ ಸಮಸ್ಯೆಯ ಬಗ್ಗೆ ಮೊದಲೇ ಅರಿತು ಕೊಂಡು ಮುಂದುವರೆಯ ಬೇಕಾಗಿತ್ತು. ಅದನ್ನು ಬಿಟ್ಟು ರೂ. ೬ ಕೋಟಿಯ ಕೆಲಸವಾದ ನಂತರ ಕಾಮಗಾರಿ ಯನ್ನು ಸ್ಥಗಿತಗೊಳಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಅಧಿಕಾರಿಗಳಿಂದಲೇ ಖರ್ಚು ಮಾಡಿದ ಹಣವನ್ನು ಬಡ್ಡಿ ಸಹಿತ ವಸೂಲಿ ಮಾಡಲಾಗುವುದು ಎಂದು ಸಚಿವರು ಎಚ್ಚರಿಸಿದರು.

ನಮ್ಮೂರಿನಲ್ಲಿ ಕೋಟೆ, ಪಾರಂಪರಿಕ ತಾಣವಿದೆ. ಅಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಈ ಬಗ್ಗೆ ಸಂಬAಧಪಟ್ಟವರಿಗೆ ತಿಳಿಸಿ ಇಚ್ಚಾಶಕ್ತಿ ತೋರಿದರೆ ಕೆಲಸಗಳು ನಡೆಯುತ್ತವೆ ಎಂದು ಬೋಸರಾಜು ಸಲಹೆ ನೀಡಿದರು.

ಡೆಂಗ್ಯೂ ಪರೀಕ್ಷೆ ಹೆಚ್ಚಿಸಿ

ಜಿಲ್ಲೆಯಲ್ಲಿ ಡೆಂಗ್ಯೂ ಜ್ವರದ ಪರೀಕ್ಷೆ ಹೆಚ್ಚಿಸಬೇಕೆಂದು ಉಸ್ತುವಾರಿ ಸಚಿವ ಬೋಸರಾಜು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ನಿರ್ದೇಶನ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಮಾತನಾಡಿ, ಮೇ ತಿಂಗಳಿನಿAದ ಡೆಂಗ್ಯೂ ಪ್ರಕರಣದ ಸಂಖ್ಯೆ ೨೫ ವರದಿಯಾಗಿತ್ತು. ನಂತರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ ಕ್ರಮಕ್ಕೆ ಮುಂದಾದೆವು. ಜಿಲ್ಲೆಯಲ್ಲಿ ನಿಯಂತ್ರಣ ಕ್ರಮಗಳನ್ನು ಕೈಗೊಂಡಿದ್ದೇವೆ. ಆಶಾ ಕಾರ್ಯಕರ್ತೆಯರು ಮನೆಮನೆ ಭೇಟಿ ನೀಡಿ ‘ಲಾರ್ವ ಸರ್ವೆ’ ನಡೆಸುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಪ್ರತಿ ಶುಕ್ರವಾರ ಲಾರ್ವ ನಾಶ ಮಾಡುತ್ತಿದ್ದೇವೆ. ಇದುವರೆಗೂ ಒಟ್ಟು ೯೧೫ ಪರೀಕ್ಷೆ ನಡೆಸಿದ್ದೇವೆ. ೧೦೨ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಪೊನ್ನಂಪೇಟೆ, ಬಾಳೆಲೆ, ಸಿದ್ದಾಪುರ, ಚೆಟ್ಟಳ್ಳಿ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಕರಣ ಕಂಡು ಬಂದಿತ್ತು. ಇದೀಗ ಕಡಿಮೆಯಾಗಿದೆ. ಬೇರೆ ಜಿಲ್ಲೆಯಿಂದ ಬಂದವರಲ್ಲೂ ಸೋಂಕು ಕಾಣಿಸಿಕೊಂಡಿದೆ. ಸ್ಥಳೀಯ ಆಡಳಿತಗಳ ಸಹಕಾರ ಮುಖ್ಯವಾಗಿದೆ. ವಸತಿ ನಿಲಯ, ಸಾರ್ವಜನಿಕ ಪ್ರದೇಶಗಳಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಬೇರೆ ಕಡೆಗಳಿಂದ ಬರುವ ಕಾರ್ಮಿಕರನ್ನು ಪರೀಕ್ಷೆಗೆ ಒಳಪಡಿಸಬೇಕು. ವಸತಿ ನಿಲಯಗಳಲ್ಲಿ ‘ಮೆಷ್' ಅಳವಡಿಸಿ ಸೊಳ್ಳೆ ಬಾರದಂತೆ ಎಚ್ಚರವಹಿಸಬೇಕು. ೧೮ ವರ್ಷಕ್ಕೆ ಕಡಿಮೆ ವಯೋಮಾನದ ೧೩ ಪ್ರಕರಣಗಳು ಪತ್ತೆಯಾಗಿವೆ. ಲಾರ್ವಾಹಾರಿಯಾಗಿರುವ ಮೀನು ಗಳನ್ನು ಕೆರೆ, ಹೊಳೆಗಳಿಗೆ ಬಿಡಬೇಕು. ರಕ್ತದ ಕೊರತೆ ಬಾರದಂತೆ ಶಿಬಿರ ನಡೆಸಲಾಗುತ್ತಿದೆ, ಪ್ಲೇಟ್‌ಲೆಟ್ಸ್ಗಳು ಲಭ್ಯವಿವೆ ಎಂದು ಮಾಹಿತಿ ಒದಗಿಸಿದರು.

ಪರೀಕ್ಷೆ ಕಡಿಮೆಗೊಂಡ ಬಗ್ಗೆ ಸಚಿವರು ಅಧಿಕಾರಿಯನ್ನು ಪ್ರಶ್ನಿಸಿದರು. ಟೆಸ್ಟಿಂಗ್ ಹೆಚ್ಚಿಸಬೇಕು, ಸೋಂಕಿತರಿಗೆ ಸರಿಯಾದ ಚಿಕಿತ್ಸೆ ದೊರೆಯುವಂತಾಗಬೇಕೆAದರು. ಡೆಂಗ್ಯೂ ಸಂಬAಧ ಆರೋಗ್ಯ ಇಲಾಖೆ ಸರಿಯಾಗಿ ಕೆಲಸ ಮಾಡುತ್ತಿಲ್ಲ, ಸುರಕ್ಷತಾ ಕ್ರಮಕೈಗೊಂಡಿಲ್ಲ. ಮಾಹಿತಿಗಳನ್ನು ಸಂಗ್ರಹಿಸಿ ಸಭೆ ನಡೆಸಿ ಸೂಕ್ತ ಕ್ರಮವಹಿಸುವಂತೆ ಸೂಚಿಸಿದರು.

ಶಾಸಕ ಮಂತರ್ ಗೌಡ ಮಾತನಾಡಿ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರ ಮಾಹಿತಿ ಸಂಗ್ರಹ ಮಾಡಬೇಕು. ಅವರ ಆರೋಗ್ಯದ ಬಗ್ಗೆಯೂ ಮಾಹಿತಿ ಪಡೆದುಕೊಂಡು ಆರೋಗ್ಯದ ಮೇಲೆ ನಿಗಾವಹಿಸಬೇಕೆಂದರು.

ವಿಪತ್ತು ತಡೆಗೆ ಅಗತ್ಯ ಕ್ರಮ

ವಿಪತ್ತು ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ವೀಣಾ ಸಭೆಗೆ ಮಾಹಿತಿ ಒದಗಿಸಿದರು.

ಜನವರಿಯಿಂದ ಇಲ್ಲಿಯ ತನಕ ಉತ್ತಮ ಮಳೆಯಾಗಿದೆ, ನೀರಿನ ಕೊರತೆ ಇಲ್ಲ. ಸೂಕ್ಷö್ಮ ಪ್ರದೇಶಗಳನ್ನು ಗುರುತಿಸಲಾಗಿದೆ. ತಾಲೂಕು, ಗ್ರಾಮ ಮಟ್ಟದಲ್ಲಿ ಟಾಸ್ಕ್ಫೋರ್ಸ್ ಸಮಿತಿ ರಚಿಸಲಾಗಿದೆ. ಎನ್.ಡಿ.ಆರ್.ಎಫ್. ಕೂಡ ಬಂದಿದೆ. ಮಳೆಯಿಂದ ತಲಾ ೬ ಮನೆಗಳು ಪೂರ್ಣ, ತೀವ್ರ ಹಾನಿಯಾಗಿವೆ. ೩೦ ಮನೆಗಳು ಭಾಗಶಃ ಹಾನಿಯಾಗಿವೆ ಎಂದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ಜಿಲ್ಲೆಯಲ್ಲಿ ಕೆರೆ, ನದಿ, ಜಲಪಾತ, ಹಿನ್ನೀರು ಪ್ರದೇಶಗಳಲ್ಲಿ ನೀರಿಗಿಳಿಯುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ‘ಗ್ಲಾಸ್ ಬ್ರಿಡ್ಜ್'ಗೂ ನಿರ್ಬಂಧ ಮಾಡಲಾಗಿದೆ. ಪ್ರವಾಹ ಪರಿಸ್ಥಿತಿ ಏರ್ಪಟ್ಟರೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿಗಾವಹಿಸಲಾಗಿದೆ. ಸಂಭವನೀಯ ಭೂಕುಸಿತ ಪ್ರದೇಶಗಳಲ್ಲಿ ನೋಟಿಸ್ ನೀಡಿ ಸ್ಥಳಾಂತರಕ್ಕೆ ಮನವಿ ಮಾಡಿದ್ದೇವೆ ಎಂದರು.

ಮಳೆಗಾಲ ಮುಗಿಯುವ ತನಕ ಅಧಿಕಾರಿ-ಸಿಬ್ಬಂದಿ ರಜೆ ಹಾಕಬಾರದು. ಪರಿಹಾರ ಕೇಂದ್ರಗಳನ್ನು ಗುರುತಿಸಿಟ್ಟುಕೊಳ್ಳಿ ಎಂದು ಸಚಿವರು ನಿರ್ದೇಶಿಸಿದರು.

ಕೋಟ್ಯಂತರ ರೂಪಾಯಿ ವ್ಯಯಿಸಿ ನಿರ್ಮಿಸಿದ ಆಸ್ಪತ್ರೆ ನಿರ್ಮಾಣಗೊಂಡರೂ ಇನ್ನೂ ಸೇವೆ ಲಭ್ಯವಾಗದ ಬಗ್ಗೆ ಆಕ್ಷೇಪಿಸಿದ ಸಚಿವರು ಸದ್ಯಕ್ಕೆ ಪೀಠೋಪಕರಣ ವ್ಯವಸ್ಥೆ ಕಲ್ಪಿಸಿ ಒಳರೋಗಿಗಳ ವಿಭಾಗ ಶುರು ಮಾಡುವಂತೆ ನಿರ್ದೇಶನ ನೀಡಿದರು.

ಫಲಾನುಭವಿಗಳಿಗೆ ಮನೆ ನೀಡಿ

ಮಡಿಕೇರಿ ಶಾಸಕ ಡಾ. ಮಂತರ್‌ಗೌಡ ಮಾತನಾಡಿ, ನೆರೆಯಿಂದ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಿ ನೀಡಲಾಗಿದೆ. ಜಂಬೂರಿನಲ್ಲಿ ೬ ರಿಂದ ೮ ತಿಂಗಳ ಹಿಂದೆ ಇನ್ಫೋಸಿಸ್ ಸಂಸ್ಥೆ ವತಿಯಿಂದ ೨೦೦ ಮನೆ ನಿರ್ಮಾಣ ಕಾರ್ಯ ಮುಕ್ತಾಯಗೊಂಡಿದೆ. ಫಲಾನುಭವಿಗಳನ್ನು ಗುರುತಿಸಿ ಮನೆ ಹಸ್ತಾಂತರ ಮಾಡಬೇಕು ಎಂದರು.

ಈಗಾಗಲೇ ಗುರುತಿಸಿರುವ ಫಲಾನುಭವಿಗಳಿಗೆ ಮೊದಲ ಆದ್ಯತೆಯಲ್ಲಿ ಮನೆ ನೀಡಲು ಕಾರ್ಯೋನ್ಮುಖಗೊಳ್ಳಬೇಕು. ಉಳಿದ ಮನೆಗಳ ಫಲಾನುಭವಿಗಳನ್ನು ಗುರುತಿಸುವ ಕೆಲಸವಾಗಬೇಕು. ಜೊತೆಗೆ ಜಂಬೂರಿನ ಬಡಾವಣೆಯಲ್ಲಿ ಕೆಲವೊಂದು ಸಮಸ್ಯೆಗಳಿದ್ದು, ಅದನ್ನೂ ಪರಿಹರಿಸಬೇಕೆಂದು ಸೂಚನೆ ನೀಡಿದರು. ಅರಣ್ಯ ಇಲಾಖೆ ವತಿಯಿಂದ ವನ್ಯಜೀವಿ-ಮಾನವ ಸಂಘರ್ಷ ತಡೆ ಅರಿವು ಕಾರ್ಯಕ್ರಮದ ಭಿತ್ತಿಪತ್ರವನ್ನು ಸಚಿವ ಬೋಸರಾಜು ಬಿಡುಗಡೆಗೊಳಿಸಿದರು. ಅಬಕಾರಿ ಇಲಾಖೆಗೆ ನಿಯೋಜನೆಗೊಂಡ ಸಿಬ್ಬಂದಿಗೆ ನೇಮಕಾತಿ ಪತ್ರ ವಿತರಿಸಿದರು.

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವರ್ಣಿತ್ ನೇಗಿ, ಕೆ.ಡಿ.ಪಿ. ನಾಮನಿರ್ದೇಶನ ಸದಸ್ಯರುಗಳಾದ ಹಾನಗಲ್ಲು ಸುರೇಶ್, ಸುನಿತಾ ಮಂಜುನಾಥ್, ಲವ ಚಿಣ್ಣಪ್ಪ, ಅಬ್ದುಲ್ ರೆಹಮಾನ್, ಡಾ. ಕಾವೇರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.