ಮಡಿಕೇರಿ, ಜು. ೬ : ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಅವರು ಶನಿವಾರ ನಗರದ ಗಾಂಧಿ ಮೈದಾನದಲ್ಲಿ ವಿಶೇಷಚೇತನರಿಗೆ ಸಾಧನ ಸಲಕರಣೆ ವಿತರಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ೧೦ ಯಂತ್ರಚಾಲಿತ ದ್ವಿಚಕ್ರ ವಾಹನ ರೂ.೯.೯೫ ಲಕ್ಷ ವೆಚ್ಚ, ೯ ಬ್ಯಾಟರಿಚಾಲಿತ ವೀಲ್ ಚೇರ್ ರೂ.೮.೬೪ ಲಕ್ಷ, ೦೩ ಲ್ಯಾಪ್ ಟಾಪ್ ರೂ.೨.೯೦ ಲಕ್ಷ, ೧ ಬ್ರೆöÊಲ್ ಕಿಟ್ ವಿತರಣೆ ರೂ.೦.೨೫ ಲಕ್ಷ, ೩ ಮಂದಿಗೆ ವಿವಾಹ ಪ್ರೋತ್ಸಾಹಧನ ರೂ. ೧.೫೦ ಲಕ್ಷ, ೩೧ ಶ್ರವಣ ಸಾಧನ ವಿತರಣೆ ರೂ. ೪ ಲಕ್ಷ, ವಾಕರ್ ೨, ವಾಕಿಂಗ್ ಸ್ಟಿಕ್ ೨, ಸಿ.ಪಿ.ಚೇರ್ ೨ ಮತ್ತು ವೀಲ್ ಚೇರ್ ೨ ಒಟ್ಟು ೨೭.೨೪ ಲಕ್ಷ ರೂ. ವೆಚ್ಚದ ಸಾಧನ ಸಲಕರಣೆ ವಿಶೇಷ ಚೇತನರಿಗೆ ವಿತರಿಸಿದರು.
ಶಾಸಕ ಡಾ.ಮಂತರ್ ಗೌಡ, ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಮತ್ತು ಶಾಸಕ ಎ.ಎಸ್. ಪೊನ್ನಣ್ಣ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ. ಸಿಇಓ ವರ್ಣಿತ್ ನೇಗಿ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕÀ ನಟರಾಜು, ವಿಶೇಷಚೇತನರ ಅಧಿಕಾರಿ ವಿಮಲ, ಇತರರು ಇದ್ದರು.