ವೀರಾಜಪೇಟೆ, ಜು. ೫: ದಕ್ಷಿಣ ಕೊರಿಯಾದ ಸಿಯೋಲ್‌ನ ಪ್ರತಿಷ್ಠಿತ ಕ್ಯುಂಗ್ ಹೀ ವಿಶ್ವವಿದ್ಯಾಲಯದ ಸಂಶೋಧನಾ ಘಟಕ ಹಾಗೂ ಮ್ಯಾಕ್ಸಿಲೊ ಫೇಶಿಯಲ್ ಸರ್ಜರಿ ವಿಭಾಗದ ಮುಖ್ಯಸ್ಥ ಪ್ರೊ. ಯೋಂಗ್-ಡೇ ಕ್ವಾನ್ ವೀರಾಜಪೇಟೆಯಲ್ಲಿ ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯದ ಬೆಳ್ಳಿ ಮಹೋತ್ಸವದ ಚಟುವಟಿಕೆಗಳ ಅಂಗವಾಗಿ ಭೇಟಿ ನೀಡಿದರು.
ಇದೇ ಸಂದರ್ಭ ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ವಿಶ್ವವಿದ್ಯಾನಿಲಯದ ಪರಸ್ಪರ ಸಹಯೋಗದ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಈ ಸಂದರ್ಭ ಇಂಪ್ಲಾAಟ್ ಡೆಂಟಿಸ್ಟಿç ಮತ್ತು ಮ್ಯಾಕ್ಸಿಲೊಫೇಶಿಯಲ್ ಸರ್ಜರಿಯಲ್ಲಿ ಪರಿಣಿತರು, ಇಂಪ್ಲಾAಟ್ ಬೆಂಬಲಿತ ದಂತ ಪುನರ್ವಸತಿ ಸಾಧಿಸಲು ಸಂಬAಧಿಸಿದ ವಿಷಯಗಳ ಕುರಿತು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರೊಫೆಸರ್ ಕ್ವಾನ್, ಒಪ್ಪಂದದಿAದ ಕೊಡಗಿನ ಸಾಮಾನ್ಯ ಜನತೆಗೆ ವಿಶ್ವದರ್ಜೆಯ ಇಂಪ್ಲಾAಟ್ ಕೃತಕ ದಂತ ಚಿಕಿತ್ಸೆಯನ್ನು ಈಗ ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನೀಡಲಾಗುತ್ತದೆ. ಇಂಪ್ಲಾAಟ್ ಕೃತಕ ದಂತ ಚಿಕಿತ್ಸೆಯಲ್ಲಿ ವಿಶ್ವ ವಿಖ್ಯಾತಿಗಳಿಸಿದೆ ಎಂದರಲ್ಲದೆ ಹಲವು ಜಟಿಲವಾದ ಚಿಕಿತ್ಸಾ ವಿಧಾನಗಳನ್ನು ಕೊಡಗು ದಂತ ವೈದ್ಯಕೀಯ ವಿದ್ಯಾಲಯ ಸ್ನಾತಕೋತರ ಪದವೀಧರರಿಗೆ ತಿಳಿಸಿದರು. ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಸುನಿಲ್ ಮುದ್ದಯ್ಯ ಮಾತನಾಡಿ, ದೇಶದಲ್ಲಿ ಇಂಪ್ಲಾAಟ್ ಡೆಂಟಿಸ್ಟಿçಯಲ್ಲಿ ಛಾಪನ್ನು ನಿರ್ಮಿಸಲು ದಕ್ಷಿಣ ಕೊರಿಯಾ ಸಹಯೋಗವು ಈಗ ಕ್ರಾನಿಯೊಫೇಶಿಯಲ್ ಇಂಪ್ಲಾAಟ್‌ಗಳು ಸೇರಿದಂತೆ ಸುಧಾರಿತ ಇಂಪ್ಲಾAಟಾಲಜಿಯ ಸಂಪೂರ್ಣ ಕ್ಷೇತ್ರವನ್ನು ಒಳಗೊಂಡಿದೆ. ಕೊಡಗು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ರೋಗಿಗಳು ಅತ್ಯುತ್ತಮವಾದ, ಸಂಪೂರ್ಣ ಶ್ರೇಣಿಯ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು, ದಂತ ಮತ್ತು ಮುಖದ ರಚನೆಗಳ ನಷ್ಟವನ್ನು ಪುನರ್ವಸತಿ ಮಾಡಬಹುದು ಎಂದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ಕೆ.ಸಿ. ಪೊನ್ನಪ್ಪ, ಉಪ ಪ್ರಾಂಶುಪಾಲ ಡಾ. ಜಿತೇಶ್, ಇಂಪ್ಲಾAಟ್ ಘಟಕದ ಮುಖ್ಯಸ್ಥ ಡಾ. ವಿನಯ್, ಡಾ. ಬಸವರಾಜ್ ಮತ್ತು ಡಾ. ಅಮಿತ್ ಪಾಲ್ಗೊಂಡಿದ್ದರು.