ಚೆಟ್ಟಳ್ಳಿ, ಜು. ೬ : ರಾಜಕೀಯ ನಂಟು ಹೊಂದಿರುವ ಭೂಮಾಫಿಯಾಗಳು ವಾಣಿಜ್ಯ ದುರುದ್ದೇಶಕ್ಕಾಗಿ ಆದಿಮಸಂಜಾತ ಕೊಡವರ ಪವಿತ್ರ ಕೊಡವ ಲ್ಯಾಂಡ್ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಜಿಲ್ಲೆಯಲ್ಲಿ ಕಪ್ಪು ಹಣ ಚಲಾವಣೆಯಾಗುತ್ತಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಆರೋಪಿಸಿದ್ದಾರೆ.

ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಸಿಎನ್‌ಸಿ ವತಿಯಿಂದ ಚೆಟ್ಟಳ್ಳಿ ಪಟ್ಟಣದಲ್ಲಿ ನಡೆದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಭೂಮಾಫಿಯಾಗಳು ಕಪ್ಪು ಹಣವನ್ನು ಬಿಳಿ ಮಾಡಲು ಕೊಡವ ಲ್ಯಾಂಡ್ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೊಡಗಿನಲ್ಲಿ ಕಾಫಿ ತೋಟಗಳ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಜಿಲ್ಲೆಯ ಇತರೆಡೆಯಂತೆ ಕಕ್ಕಬ್ಬೆ ನಾಲಡಿ ಪೂಮಾಲೆ ಎಸ್ಟೇಟ್‌ನ ೩೦೦ ಎಕರೆ ಜಾಗವನ್ನು ಭೂಪರಿವರ್ತನೆ ಮಾಡಲು ಹುನ್ನಾರ ನಡೆದಿದೆ. ಜನರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದರೂ, ದೆಹಲಿ ಮತ್ತು ಮುಂಬೈ ಭಾಗದ ರಾಜಕೀಯ ಸಂಕುಲಗಳು ಭೂಮಾಫಿಯಾದ ಪರವಾಗಿ ರೆಸಾರ್ಟ್ ನಿರ್ಮಾಣದ ಅನುಮತಿಗೆ ಪ್ರಭಾವ ಬೀರುತ್ತಿದ್ದಾರೆ. ಮರಂದೋಡು ಗ್ರಾಮದ ಮೇರಿಯಂಡ ಅಂಗಡಿ ಪ್ರದೇಶದಲ್ಲಿ ಭತ್ತದ ಗದ್ದೆ ಮತ್ತು ಪರ್ವತ ಕೊರೆದು ಟೌನ್‌ಶಿಪ್‌ಗಾಗಿ ಭೂಪರಿವರ್ತನೆಯಾಗುತ್ತಿದ್ದು, ಕೊಡವ ಲ್ಯಾಂಡ್‌ನ ಕಾವೇರಿ ಒಡಲು ನಾಶವಾಗುತ್ತಿದೆ.

ಸಿದ್ದಾಪುರದ ೨೪೦೦ ಎಕರೆ ಕಾಫಿ ತೋಟಗಳು ಭೂಪರಿವರ್ತನೆಯಾ ಗುತ್ತಿವೆ ಎಂದರು. ಇದಕ್ಕಾಗಿ ವ್ಯಾಪಕ ಜನಜಾಗೃತಿ ಅಗತ್ಯವಾಗಿದ್ದು, ಜಿಲ್ಲೆಯಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು.

ಪೊರಿಮಂಡ ಧನು ದೇವಯ್ಯ, ಪಳಂಗAಡ ಗೀತಾ ಸುಬ್ಬಯ್ಯ, ಪಳಂಗAಡ ಸುಮಿ ಅಪ್ಪಯ್ಯ, ಮುಳ್ಳಂಡ ಸುಶೀಲಾ ತಮ್ಮಯ್ಯ, ಚೋಳಪಂಡ ಗಂಗಮ್ಮ ಕಾಳಯ್ಯ, ಕೆಚ್ಚೇಟ್ಟಿರ ರತಿ ಕಾರ್ಯಪ್ಪ, ಅಡಿಕೇರ ಶಾಂತಿಜಯ, ಬಲ್ಲಾರಂಡ ಮಲ್ಲಿಗೆ ಚಿಣ್ಣಪ್ಪ, ಚೋಳಪಂಡ ಜ್ಯೋತಿ ನಾಣಯ್ಯ, ಲೆ.ಕ. ನಂದಿನೆವAಡ ಪಾರ್ವತಿ ನಾಚಪ್ಪ, ಬಿದ್ದಂಡ ಮಾದಯ್ಯ, ಚೋಳಪಂಡ ಪೂವಯ್ಯ, ಬಟ್ಟೀರ ಎಂ. ಪೂಣಚ್ಚ, ಪೊರಿಮಂಡ ದಿನಮಣಿ ಪೂವಯ್ಯ, ಮುಳ್ಳಂಡ ರತ್ತು ಚಂಗಪ್ಪ, ಮುಳ್ಳಂಡ ಸನ್ನಿ ಅಯ್ಯಪ್ಪ, ಬಲ್ಲಾರಂಡ ಚಿಣ್ಣಪ್ಪ, ಕೊಕ್ಕೆರ ಮಾದಪ್ಪ, ಬಲ್ಲಾರಂಡ ಅಚ್ಚಯ್ಯ, ಚೋಳಪಂಡ ನಾಣಯ್ಯ, ಮೂಕೊಂಡ ದಿಲೀಪ್, ಕೂಪದೀರ ಸಾಬು, ಪುತ್ತರಿರ ಕರುಣ್ ಕಾಳಯ್ಯ, ಪುತ್ತರಿರ ಸುರೇಶ್ ಅಚಯ್ಯ, ಪುತ್ತರಿರ ರಾಬಿನ್ ಚಂಗಪ್ಪ, ಕಡೇಮಾಡ ವಿನ್ಸಿ ಅಪ್ಪಯ್ಯ, ಪುತ್ತರಿರ ರವಿ ಮಂದಣ್ಣ, ಪುತ್ತರಿರ ರಾಜೇಶ್ ಮುತ್ತಪ್ಪ, ಪುತ್ತರಿರ ದೇವಿ ದೇವಯ್ಯ, ಐಚೆಟ್ಟೀರ ಪ್ರಮೋದ್, ಕೊಂಗೇಟಿರ ರಾಯ್ ಚಂಗಪ್ಪ, ಬಟ್ಟೀರ ಮಂದಣ್ಣ, ಕೊಂಗೇಟೀರ ರಾಣಾ ಪೂವಯ್ಯ, ಮೂಕೊಂಡ ದಿಪೀಕ, ಮಚ್ಚಂಡ ಕಟ್ಟಿ, ಬಟ್ಟೀರ ಉತ್ತಯ್ಯ, ಬಟ್ಟೀರ ಕಾಳಪ್ಪ, ಬದಲೇರ ಕೌಶಿಕ್, ಬಲ್ಲಾರಂಡ ದೇವಿ ದೇವಯ್ಯ, ಕೆಚ್ಚೇಟಿರ ನಿಶಾನ್ ಪೂವಯ್ಯ, ಅಡಿಕೇರ ಜಯಾ ಮುತ್ತಪ್ಪ, ಕಾಣತಂಡ ಸಾಸು ಚರ್ಮಣ, ಚೋಳಪಂಡ ಸಾಸು, ಮುಳ್ಳಂಡ ಪೂವಯ್ಯ, ಚೆಟ್ರಂಡ ಕೌಶಿಕ್ ಕಾರ್ಯಪ್ಪ, ಬಟ್ಟೀರ ಗಿರೀಶ್, ಬಟ್ಟೀರ ರಾಜ ಉತ್ತಯ್ಯ, ಬಲ್ಲಾರಂಡ ನಾಣಯ್ಯ ಹಾಜರಿದ್ದರು.