ಕುಶಾಲನಗರ, ಜು. ೫: ಕುಶಾಲನಗರ ಸಮೀಪ ಕೊಪ್ಪ ಬಳಿ ಹೆದ್ದಾರಿಯಲ್ಲಿ ಕಾರೊಂದು ಮಗುಚಿ ಬಿದ್ದ ಘಟನೆ ನಡೆದಿದೆ.

ಯಾರಿಗೂ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಬೈಲಕುಪ್ಪೆ ಲಾಮಾ ಕ್ಯಾಂಪ್ ಬೌದ್ಧ ಭಿಕ್ಷುಗಳು ಕುಶಾಲನಗರದ ವ್ಯಕ್ತಿಯೊಬ್ಬರ ಕಾರನ್ನು ಸೆಲ್ಫ್ ಡ್ರೆöÊವಿಂಗ್‌ಗೆ ಪಡೆದು ಬೈಲಕುಪ್ಪೆ ಕಡೆಗೆ ತೆರಳುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ.

ಚಾಲನೆ ಮಾಡುತ್ತಿದ್ದ ಬೌದ್ಧ ಬಿಕ್ಷು ಅತಿ ವೇಗದಿಂದ ತೆರಳುತ್ತಿದ್ದ ವೇಳೆ ಮೊಬೈಲ್ ಬಳಕೆ ಮಾಡಿದ ಕಾರಣ ಚಾಲಕನ ಹತೋಟಿ ತಪ್ಪಿ ಈ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ರಸ್ತೆ ಬದಿಯಲ್ಲಿ ನಿಂತಿದ್ದ ಮಾರುತಿ ಕಾರಿಗೆ ಅಪಘಾತಕ್ಕೆ ಒಳಗಾದ ಕಾರು ಹಿಂದಿನಿAದ ಡಿಕ್ಕಿ ಆದ ಕಾರಣ ಆ ಕಾರಿಗೆ ಅಲ್ಪ ಸ್ವಲ್ಪ ಹಾನಿ ಉಂಟಾಗಿದೆ.