ಮಡಿಕೇರಿ, ಜು. ೬: ಇಲ್ಲಿನ ಸಂತ ಜೋಸೆಫರ ಶಾಲೆ ಬಳಿಯಿಂದ ಮುತ್ತಪ್ಪ ದೇವಾಲಯ ಕಡೆಗೆ ತೆರಳುವ ರಸ್ತೆಯ ಕೂಡು ರಸ್ತೆಯ ಬದಿಯಲ್ಲಿ ಅಳವಡಿಸಲಾಗಿರುವ ವಿದ್ಯುತ್ ಕಂಬದ ಬುಡ ಸಂಪೂರ್ಣ ದುಸ್ಥಿತಿಗೀಡಾಗಿದ್ದು ಇಂದೋ, ನಾಳೆಯೋ ಬುಡ ಮೇಲಾಗುವ ಹಂತದಲ್ಲಿದೆ. ವಿದ್ಯುತ್ ಕಂಬದ ಬುಡದಲ್ಲಿನ ಮಣ್ಣು ಸಂಪೂರ್ಣ ಕೊಚ್ಚಿ ಹೋಗಿದ್ದು, ದೊಡ್ಡ ಹೊಂಡವಾಗಿ ಮಾರ್ಪಟ್ಟಿದೆ. ಕಂಬ ಅಲುಗಾಡುತಿದ್ದು, ಯಾವುದೇ ಸಮಯದಲ್ಲಿ ಕುಸಿದು ಬೀಳುವ ಹಂತದಲ್ಲಿದೆ. ಈ ಬಗ್ಗೆ ನಗರಸಭೆ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲವೆAದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಶಾಲಾ ಮಕ್ಕಳಿಗೆ ತೊಂದರೆ ಆಗುವ ಮುನ್ನ ಕಂಬವನ್ನು ತೆರವುಗೊಳಿಸುವಂತೆ ಆಗ್ರಹಿಸಿದ್ದಾರೆ.