ಮಡಿಕೇರಿ, ಜು. ೫ : ದಕ್ಷಿಣದ ಕಾಶ್ಮೀರ ಎಂಬ ಖ್ಯಾತಿ ಹೊತ್ತಿರುವ ಕೊಡಗು ಜಿಲ್ಲೆ ಸೇನೆ ಹಾಗೂ ಕ್ರೀಡೆಗೆ ನೀಡಿರುವ ಕೊಡುಗೆ ಅಪಾರ., ಅದರಲ್ಲೂ ಕ್ರೀಡೆಯ ತವರೂರು ಎಂದೇ ಕರೆಯಲಾಗುವ ಜಿಲ್ಲೆ ಹಾಕಿ, ಕ್ರಿಕೆಟ್ ಸೇರಿದಂತೆ ಬಹುತೇಕ ಎಲ್ಲ ವಿಭಾಗದ ಕ್ರಿಡೆಯಲ್ಲಿಯೂ ಕೊಡುಗೆ ನೀಡಿದೆ. ಆದರೆ ಸರಕಾರದಿಂದ ಈ ಕ್ರೀಡಾ ಜಿಲ್ಲೆಗೆ ಸಿಗುವ ಸೌಲಭ್ಯಗಳು ಮಾತ್ರ ಅಷ್ಟಕಷ್ಟೇ. ಸರಿಯಾದ ಮೈದಾನ, ವ್ಯವÀಸ್ಥೆಗಳಿಲ್ಲದಿದ್ದರೂ ಇಲ್ಲಿನ ಕ್ರೀಡಾಪಟುಗಳು ಸಾಧನೆ ಮಾಡಿದ್ದಾರೆ, ಮಾಡುತ್ತಲೂ ಇದ್ದಾರೆ. ಇಂತಹ ಸಾಧಕರ ಸಾಧನೆಗಳಿಗೆ ಸಾಕ್ಷಿಯಾಗಿ ನಿಂತಿರುವುದು ಮಡಿಕೇರಿಯ ಜ.ತಿಮ್ಮಯ್ಯ ಜಿಲ್ಲಾ ಕ್ರಿಡಾಂಗಣ(ಮ್ಯಾನ್ಸ್ ಕಾಂಪೌAಡ್).
ಈ ಮೈದಾನದಲ್ಲಿ ಆಡಿದವರು ಭಾರತ ಹಾಕಿ ತಂಡದ ನಾಯಕರಾಗಿಯೂ, ಒಲಂಪಿಯನ್‌ಗಳಾಗಿಯೂ ಹೊರಹೊಮ್ಮಿದ್ದಾರೆ. ಕ್ರಿಕೆಟ್ ಆಡಿದವರು ಅಂತರರಾಷ್ಟಿçÃಯ ಮಟ್ಟದಲ್ಲಿ ಆಟವಾಡಿ ಅರ್ಜುನ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಅಥ್ಲೆಟಿಕ್ಸ್ನಲ್ಲೂ ರಾಷ್ಟç, ಅಂತರರಾಷ್ಟಿçÃಯ ಮಟ್ಟದಲ್ಲಿ ಗಮನ ಸೆಳೆದವರಿದ್ದಾರೆ. ಇಷ್ಟೊಂದು ಸಾಧಕರಿಗೆ ಸ್ಪೂರ್ತಿಯಾಗಿರುವ ಈ ಕ್ರೀಡಾಂಗಣ ಸೌಲಭ್ಯಗಳಿಂದ ವಂಚಿತವಾಗಿ ಸೊರಗುತ್ತಿದೆ. ಇರುವ ವ್ಯವಸ್ಥೆಯಡಿ ಕ್ರೀಡಾಂಗಣವನ್ನು ಉಳಿಸಿಕೊಳ್ಳಲು ಕೂಡ ಹೆಣಗಾಡುವಂತಹ ಪರಿಸ್ಥಿತಿ ಇಲ್ಲಿನ ಕ್ರೀಡಾಪ್ರೇಮಿಗಳದ್ದಾಗಿದೆ. ಯಾವುದೇ ಕಾರ್ಯಕ್ರಮಗಳಾಗಲೀ, ದಸರಾ ಮುಂತಾದ ಉತ್ಸವ ಸಂದರ್ಭದಲ್ಲಿ ಕ್ರೀಡಾಂಗಣವನ್ನು ವಾಹನ ನಿಲುಗಡೆಗೆ ಬಳಸಿಕೊಳ್ಳುತ್ತಿರುವುದರಿಂದ, ಹಾಗೂ ಮೈದಾನದಲ್ಲಿ ಕ್ರೀಡಾಕೂಟಗಳು ನಡೆಸುವ ಸಂದರ್ಭ ವಾಹನಗಳನ್ನು ‘ಟ್ರಾö್ಯಕ್’ ಮೇಲೆಯೇ ಓಡಿಸುವುದರಿಂದ ಹಾಳಾಗುತ್ತಿದೆ. ಇದೀಗ ಈಚೆಗೆ ಅಗ್ನಿವೀರ್ ರ‍್ಯಾಲಿ ನಡೆದ ಸಂದರ್ಭ ಮಳೆಯಿಂದಾಗಿ ಕ್ರೀಡಾಂಗಣ ಸಂಪೂರ್ಣ ಹಾಳಾಗಿದೆ. ಈ ನಡುವೆ ಕ್ರೀಡಾಂಗಣದ ಬದಿಯಲ್ಲಿ ಖಾಸಗಿಯವರು ಯಂತ್ರಗಳನ್ನು ಬಳಸಿ ಮಣ್ಣು ಕೊರೆದಿರುವುದರಿಂದ ಕ್ರೀಡಾಂಗಣದ ರಕ್ಷಣೆಗೆ ನಿರ್ಮಿಸಲಾಗಿರುವ ಆವರಣ ಗೋಡೆ(ಕಾಂಪೌAಡ್) ಕುಸಿದು ಬೀಳುವ ಪರಿಸ್ಥಿತಿ ಉಂಟಾಗಿದೆ. ಗೋಡೆ ಕುಸಿದರೆ ಮೈದಾನ ಕೂಡ ಕುಸಿಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ..!
ಗೋಡೆ ಬಳಿಯಲ್ಲಿ ಬಿರುಕು..!
ಕ್ರೀಡಾಂಗಣದ ರಕ್ಷಣೆಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮೂಲಕ ಸುತ್ತಲೂ ಆವರಣ ಗೋಡೆ ನಿರ್ಮಿಸಲಾಗಿದೆ.
(ಮೊದಲ ಪುಟದಿಂದ) ಮೈದಾನದ ಎಡಭಾಗದಲ್ಲಿರುವ ಗೋಡೆಯ ಮತ್ತೊಂದು ಬದಿಯಲ್ಲಿ ಖಾಸಗಿಯವರ ಜಾಗವಿದ್ದು, ಸನಿಹದಲ್ಲೇ ತೋಡೊಂದು ಹರಿಯುತ್ತದೆ. ಇದೀಗ ಜಾಗದ ಮಾಲೀಕರು ಜಾಗವನ್ನು ಸಮತಟ್ಟು ಮಾಡಿದ್ದು, ಆವರಣ ಗೋಡೆಗೆ ಹೊಂದಿಕೊAಡAತೆ ಮಣ್ಣು ತೆರವು ಮಾಡಿದ್ದಾರೆ. ಅದು ಮೊದಲೇ ಹಾಕಿರುವ ಮಣ್ಣಾಗಿರುವುದರಿಂದ ಸುರಿಯುತ್ತಿರುವ ಮಳೆಗೆ ಬಿರುಕು ಬಿಟ್ಟಿದೆ. ಗೋಡೆಗೆ ಹೊಂದಿಕೊAಡAತೆ ಬಿರುಕು ಕಾಣಿಸಿಕೊಂಡಿದ್ದು, ಕೆಳಗಡೆ ಇಳಿಜಾರು ಪ್ರದೇಶವಾಗಿರುವದರಿಂದ ಗೋಡೆ ಸಹಿತ ಮೈದಾನ ಕೂಡ ಕುಸಿಯುವ ಸಾಧ್ಯತೆಯಿದೆ. ಅಲ್ಲದೆ ಕೆಳಬಾಗದಲ್ಲಿ ಹರಿಯುತ್ತಿರುವ ತೋಡಿನಲ್ಲಿ ಮಳೆಗಾಲದಲ್ಲಿ ನೀರು ರಭಸವಾಗಿ ಹರಿಯುವುದರಿಂದ ಮಣ್ಣು ಸವಕಲು ಉಂಟಾಗಿ, ಕೆಳಗಿನಿಂದಲೇ ಕುಸಿಯುವ ಸಾಧ್ಯತೆ ಕಂಡು ಬರುತ್ತಿದೆ.
ಕೊರೆದಿರುವುದರಿಂದ ಸಮಸ್ಯೆ..!
ತೋಡಿನ ಮತ್ತೊಂದು ಬದಿಯಲ್ಲಿ ಸಮತಟ್ಟು ಮಾಡಿರುವುದರಿಂದ ಯಾವದೇ ಸಮಸ್ಯೆ ಇಲ್ಲ. ಆದರೆ, ಇನ್ನೊಂದು ಬದಿಯಲ್ಲಿ ಮೈದಾನದ ಕಡೆಗೆ ಇರುವ ಇಳಿಜಾರು ಪ್ರದೇಶವನ್ನು ಕೊರೆದಿರುವುದರಿಂದ ಸಮಸ್ಯೆ ಎದುರಾಗಿದೆ. ಈ ಭಾಗವನ್ನು ಕೊರೆಯುವ ಅವಶ್ಯಕತೆಯೂ ಇರಲಿಲ್ಲ. ಅಲ್ಲಿ ಯಾವದೇ ಕಟ್ಟಡ ನಿರ್ಮಾಣ ಕೂಡ ಅಸಾಧ್ಯ..!
ಅನುಮತಿ ಇಲ್ಲದೆ ಕೆಲಸ..!
ಇಲ್ಲಿ ಹರಿಯುವ ತೋಡು ರಾಜಕಾಲುವೆಯಾಗಿದ್ದು, ಸಂಬAಧಿಸಿದ ಆಡಳಿತದಿಂದ ಅನುಮತಿ ಪಡೆಯದೇ ಯಾವದೇ ಕೆಲಸ ಮಾಡುವಂತಿಲ್ಲ. ಆದರೆ ಇಲ್ಲಿ ಮಣ್ಣು ಕೊರೆಯವ ಕೆಲಸಕ್ಕೆ ನಗರಸಭೆಯಿಂದಾಗಲೀ, ಇತರ ಪ್ರಾಧಿಕಾರದಿಂದಾಗಲೀ ಯಾವುದೇ ಅನುಮತಿ ಪಡೆದುಕೊಂಡಿಲ್ಲ. ಕಾಮಗಾರಿ ನಡೆಸುವ ಸಂದರ್ಭ ತೋಡನ್ನು ಮುಚ್ಚಿ ರಸ್ತೆ ಕೂಡ ಮಾಡಲಾಗಿದೆ. ಈ ಬಗ್ಗೆ ಸ್ಥಳೀಯರು ದೂರು ನೀಡಿದ ಹಿನ್ನೆಲೆಯಲ್ಲಿ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರು ಸಂಬAಧಿಸಿದ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಕಾಮಗಾರಿಯನ್ನು ನಿಲ್ಲಿಸಿದ್ದಾರೆ.
ಇಲಾಖೆಯ ಗಮನಕ್ಕೆ ಇಲ್ಲ..!
ಕ್ರೀಡಾಂಗಣದ ಬದಿಯಲ್ಲಿಯೇ ಮಣ್ಣು ಕೊರೆಯುವ ಕೆಲಸ ನಡೆಸಿದ್ದು, ಕೆಲಸ ಮಾಡುವ ಮುನ್ನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸಂಬAಧಿಸಿದ ವಾರ್ಡ್ ಸದಸ್ಯರ ಗಮನಕ್ಕೆ ತರಬೇಕಿತ್ತು. ಆದರೆ, ಯಾರ ಗಮನಕ್ಕೂ ತಾರದೆ ಏಕಾಏಕಿ ಯಂತ್ರಗಳನ್ನು ಬಳಸಿ ಕೆಲಸ ಮಾಡಲಾಗಿದೆ. ಕ್ರೀಡಾ ಇಲಾಖೆಯ ಕಚೇರಿ ಅಲ್ಲಿಯೇ ಸನಿಹದಲ್ಲೇ ಇದ್ದರೂ ವಿಷಯ ಗಮನಕ್ಕೆ ತಾರದೆ ಕೆಲಸ ಮಾಡಲಾಗಿದೆ.
ಜನತೆ ಎಲ್ಲವನ್ನೂ ಸಹಿಸಿಕೊಂಡು ‘ನಮಗ್ಯಾಕೆ ಬೇಕು ಊರ ಉಸಾಬರಿ’ ಎಂಬAತೆ ತಮ್ಮ ಪಾಡಿಗೆ ತಾವಿದ್ದಾರೆ. ಇದು ಹೀಗೇ ಮುಂದುವರಿದರೆ ಮುಂದೊAದು ದಿನ ಮೈದಾನಗಳನ್ನೆಲ್ಲ ಬಗೆದು ಅಲ್ಲಿ ಕಟ್ಟಡ ಕಟ್ಟಿದರೂ ಅಚ್ಚರಿಯಿಲ್ಲ..! ? ಕುಡೆಕಲ್ ಸಂತೋಷ್