ಚೆಯ್ಯAಡಾಣೆ, ಜು. ೬: ಕಣ್ಣುಕುಕ್ಕುವ ಪ್ರಖರ ಲೈಟ್‌ಗಳನ್ನು ಅಳವಡಿಸಿದ್ದ ವಾಹನ ಚಾಲಕರಿಗೆ ನಾಪೋಕ್ಲುವಿನಲ್ಲಿ ಪೊಲೀಸರು ಜಾಗೃತಿ ಮೂಡಿಸುವುದರ ಜೊತೆಗೆ ದಂಡ ವಿಧಿಸಿದರು.
ನಾಪೋಕ್ಲು ಪಟ್ಟಣದಲ್ಲಿ ಠಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ತಪಾಸಣೆ ನಡೆಸಿದ ಪೊಲೀಸರು ನಿಯಮ ಉಲ್ಲಂಘಿÀಸಿ ಕಣ್ಣುಕುಕ್ಕುವ ಎಲ್ ಇಡಿ ಲೈಟ್ ಅಳವಡಿಸಿದ್ದ ವಾಹನ ಚಾಲಕರಿಗೆ ಜಾಗೃತಿ ಮೂಡಿಸುವುದರ ಜೊತೆಗೆ ದಂಡವನ್ನು ವಿಧಿಸಿ ಲೈಟ್ ತೆರವುಗೊಳಿಸುವಂತೆ ಸೂಚಿಸಿದರು.
ಕೂಡಲೇ ಎಲ್‌ಇಡಿ ಬಲ್ಬ್ ಅಳವಡಿಸಿದ್ದ ವಾಹನ ಚಾಲಕರು ಬಲ್ಬ್ಗಳನ್ನು ತೆರವುಗೊಳಿಸಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಎಚ್ಚರಿಕೆ ನೀಡಿದರು.
ಇದೇ ಸಂದರ್ಭ ಪೊಲೀಸರೊಂದಿಗೆ ಚಾಲಕರು, ನಾವು ಯಾವುದೇ ನಿಯಮ ಉಲ್ಲಂಘಿಸಿ ಬಲ್ಬ್ಗಳನ್ನು ಅಳವಡಿಸಿಲ್ಲ. ಇತ್ತೀಚೆಗೆ ಬರುವ ಎಲ್ಲಾ ಕಂಪನಿಗಳ ವಾಹನಗಳಲ್ಲೂ ಎಲ್‌ಇಡಿ ಬಲ್ಬ್ ಅಳವಡಿಸಿಕೊಳ್ಳಲಾಗುತ್ತಿದೆ. ನಾವು ದಂಡ ಕಟ್ಟಲು ತಯಾರಿಲ್ಲ ಎಂದು ಪೊಲೀಸರ ಜೊತೆ ವಾಗ್ವಾದ ನಡೆಸಿದ ಘಟನೆಯೂ ನಡೆಯಿತು. ಇದಕ್ಕೆ ಪ್ರತಿಕ್ರಿಯಿಸಿದ ಠಾಣಾಧಿಕಾರಿ ಮಂಜುನಾಥ್ ಎಲ್‌ಇಡಿ ಬಲ್ಬ್ ಅಳವಡಿಸಿದ ವಾಹನಗಳ ಮೇಲೆ ಕ್ರಮ ಕೈಗೊಳ್ಳುವಂತೆ ಈಗಾಗಲೇ ಇಲಾಖೆಯಿಂದ ಆದೇಶ ಬಂದಿದೆ. ವಾಹನ ಚಾಲಕರು ಹಾಗೂ ಮಾಲೀಕರು ತಮ್ಮ ವಾಹನಗಳ ಕಂಪೆನಿಗಳ ಗಮನಕ್ಕೆ ತಂದು ಎಲ್‌ಇಡಿ ಬಲ್ಬ್ಗಳನ್ನು ತೆರೆವುಗೊಳಿಸಬೇಕೆಂದು ಸೂಚಿಸಿದರು.
ಈ ಸಂದರ್ಭ ನಾಪೋಕ್ಲು ಠಾಣೆಯ ಸಿಬ್ಬಂದಿಗಳು ಹಾಜರಿದ್ದರು.