ಗ್ಯಾರಂಟಿ ಯೋಜನೆಗೆ ದಲಿತರ ಅಭಿವೃದ್ಧಿ ಹಣ ಬಳಕೆ: ಆರೋಪದಲ್ಲಿ ಹುರುಳಿಲ್ಲ
ಬೆಂಗಳೂರು, ಜು. ೫: ರಾಜ್ಯ ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳಿಗೆ ದಲಿತರ ಅಭಿವೃದ್ಧಿ ಮೀಸಲಿಟ್ಟಿರುವ ಅನುದಾನ ಬಳಕೆ ಮಾಡುತ್ತಿದೆ ಎಂಬ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಶುಕ್ರವಾರ ಸ್ಪಷ್ಟನೆ ನೀಡಿದ್ದು, ಆರೋಪದಲ್ಲಿ ಹುರುಳಿಲ್ಲ ಎಂದು ಹೇಳಿದ್ದಾರೆ. ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟು ಉಪ ಹಂಚಿಕೆ ರಾಜ್ಯ ಪರಿಷತ್ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ದಲಿತ ಸಮುದಾಯದ ಕಲ್ಯಾಣಕ್ಕಾಗಿ ಮೀಸಲಿಟ್ಟಿರುವ ಎಸ್ಸಿಎಸ್ಪಿ-ಟಿಎಸ್ಪಿ ಅಡಿ ಅನುದಾನ ಆಯಾ ವರ್ಷವೇ ಖರ್ಚು ಮಾಡಬೇಕು. ಈ ಸಂಬAಧ ನಿರ್ಲಕ್ಷ್ಯ ತೋರಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳನ್ನು ಎಚ್ಚರಿಸಿದ್ದಾರೆ. ಅಂತೆಯೇ ಇಡೀ ದೇಶದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಮೀಸಲಿಡಲು ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಮಾಡಿರುವುದು ನಮ್ಮ ಸರ್ಕಾರ ಮಾತ್ರ. ಇದರಿಂದ ೨೦೨೪-೨೫ನೆ ಸಾಲಿಗೆ ಎಸ್ಸಿಎಸ್ಪಿ-ಟಿಎಸ್ಪಿ ಅಡಿ ಒಟ್ಟಾರೆ ರೂ. ೩೯,೧೨೧ ಕೋಟಿ ಅನುದಾನ ಒದಗಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಇದು ಶೇ. ೧೧ರಷ್ಟು ಅಂದರೆ ರೂ. ೩,೮೯೭ ಕೋಟಿ ಹೆಚ್ಚಳವಾಗಿದೆ. ಎಸ್ಸಿಎಸ್ಪಿ ಅಡಿ ರೂ. ೨೭,೬೭೩.೯೬ ಕೋಟಿ ಹಾಗೂ ಟಿಎಸ್ಪಿ ಅಡಿ ರೂ. ೧೧೪೪೭.೫೦ ಕೋಟಿ ಒದಗಿಸಲಾಗಿದೆ. ಈ ವರ್ಷದ ಕ್ರಿಯಾ ಯೋಜನೆಯಲ್ಲಿ ಮುಖ್ಯವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ರೂ. ೮,೪೮೦ ಕೋಟಿ, ಇಂಧನ ಇಲಾಖೆಗೆ ರೂ. ೫೦೨೬ ಕೋಟಿ, ಸಮಾಜ ಕಲ್ಯಾಣ ಇಲಾಖೆಗೆ ರೂ. ೪,೧೭೪ ಕೋಟಿ, ಕಂದಾಯ ಇಲಾಖೆಗೆ ರೂ. ೩,೪೦೩ ಕೋಟಿ, ಗ್ರಾಮೀಣಾಭಿವೃದ್ಧಿ ಇಲಾಖೆಗೆ ರೂ. ೩,೧೬೩ ಕೋಟಿ ಒದಗಿಸಲಾಗಿದೆ ಎಂದರು. ಅಲ್ಲದೆ ಕಳೆದ ವರ್ಷ ರೂ. ೩೫೨೨೧.೮೪ ಕೋಟಿ ಆಯವ್ಯಯ ಹಂಚಿಕೆಗೆ ಎದುರಾಗಿ ಶೇ. ೯೭.೨೩ ರಷ್ಟು ಹಣ ಬಿಡುಗಡೆಗೆಯಾಗಿದ್ದು, ಅದರಲ್ಲಿ ಶೇ. ೯೯.೬೪ ರಷ್ಟು ಸಾಧನೆಯಾಗಿದೆ. ಈ ಅನುದಾನ ಯಾವ ಕಾರಣಕ್ಕೂ ಬಳಕೆಯಾಗದಂತೆ ಎಚ್ಚರಿಕೆ ವಹಿಸಬೇಕು. ಇನ್ನೂ, ಉಳಿಕೆ ಹಣ ವ್ಯಯವಾಗಬಾರದು. ಅದೇ ವರ್ಷ ವೆಚ್ಚವಾಗಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನಿಗಮಗಳಲ್ಲಿ ಹಣ ವೆಚ್ಚವಾಗಿಲ್ಲ ಎಂದು ಹೇಳಿದರು.
ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಮುಂದಕ್ಕೆ
ಬೆAಗಳೂರು, ಜು. ೫: ಅಶ್ಲೀಲ ವೀಡಿಯೋ ಹಗರಣಕ್ಕೆ ಸಂಬAಧಿಸಿದAತೆ ಪ್ರಮುಖ ಆರೋಪಿ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಎರಡು ವಾರಗಳ ಕಾಲ ಮುಂದೂಡಿದೆ. ಈ ಅರ್ಜಿ ವಿಚಾರಣೆಯನ್ನು ತ್ವರಿತಗತಿಯಲ್ಲಿ ನಡೆಸುವ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ನ್ಯಾಯ ಪೀಠ ಹೇಳಿತು. ಹೊಳೆನರಸೀಪುರ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬAಧಿಸಿದAತೆ ಅರ್ಜಿ ಸಲ್ಲಿಸಿದ್ದ ಪ್ರಜ್ವಲ್ ಪರ ವಕೀಲರು, ಈ ಪ್ರಕರಣವನ್ನು ತ್ವರಿತಗತಿಯಲ್ಲಿ ಪರಿಶೀಲಿಸುವಂತೆ ನ್ಯಾಯ ಪೀಠಕ್ಕೆ ಮನವಿ ಮಾಡಿದರು. ಪ್ರಕರಣವನ್ನು ಕೈಗೆತ್ತಿಕೊಂಡ ನ್ಯಾಯ ಪೀಠ, ಜಾಮೀನು ಅರ್ಜಿಯನ್ನು ಈಗ ಪರಿಶೀಲಿಸುವ ಅಗತ್ಯವಿಲ್ಲ. ತನಿಖೆ ಮುಂದುವರಿಯಲಿ, ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸಲಿ ಎಂದು ಹೇಳಿತು. ಈ ಹಿಂದೆ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿರುವ ಪ್ರಜ್ವಲ್ ಅವರ ಜಾಮೀನು ಅರ್ಜಿಯನ್ನು ರದ್ದುಗೊಳಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಾ. ೮ ರವರೆಗೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
೧೦ ಲಕ್ಷ ವಿದ್ಯಾರ್ಥಿಗಳಿಗೆ ಡಿಜಿಟಲ್ ಸುರಕ್ಷತೆ ಕೌಶಲ್ಯ ತರಬೇತಿ
ಬೆಂಗಳೂರು, ಜು. ೫: ರಾಜ್ಯ ಸರ್ಕಾರವು ೨೦೨೫ ರೊಳಗೆ ರಾಜ್ಯಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಶಿಕ್ಷಕರು ಮತ್ತು ೧೦ ಲಕ್ಷ ವಿದ್ಯಾರ್ಥಿಗಳಿಗೆ ಡಿಜಿಟಲ್ ಸುರಕ್ಷತೆ ಮತ್ತು ವರ್ಧಿತ ರಿಯಾಲಿಟಿ, ವರ್ಚುವಲ್ ರಿಯಾಲಿಟಿ ತರಬೇತಿ ನೀಡಲು ಮೆಟಾ ಕಂಪೆನಿಯೊAದಿಗೆ ಒಪ್ಪಂದ ಮಾಡಿಕೊಂಡಿದೆ. ಡಿಜಿಟಲ್ ನಾಗರಿಕ್ ಮತ್ತು ಎಆರ್-ವಿಆರ್ ಕೌಶಲ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಮೆಟಾ ಕಂಪೆನಿ ಜೊತೆಗೂಡಿ ೧೦ ಲಕ್ಷ ಮಕ್ಕಳಿಗೆ ತರಬೇತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಇಂತಹ ಉಪಕ್ರಮದಲ್ಲಿ ಮೆಟಾದೊಂದಿಗೆ ಸಹಕರಿಸುತ್ತಿರುವ ಭಾರತದ ಮೊದಲ ರಾಜ್ಯ ಕರ್ನಾಟಕವಾಗಿದೆ. ವಿದ್ಯಾರ್ಥಿಗಳಿಗೆ ಡಿಜಿಟಲ್ ಶಿಕ್ಷಣ ಮತ್ತು ಆನ್‌ಲೈನ್ ಸುರಕ್ಷತೆಯನ್ನು ಉತ್ತೇಜಿಸಲು ಎರಡು ವರ್ಷಗಳ ಪಾಲುದಾರಿಕೆಗೆ ನವೆಂಬರ್ ೨೦೨೩ ರಲ್ಲಿ ಸಹಿ ಹಾಕಲಾಗಿದೆ. ಈ ಕಾರ್ಯಕ್ರಮವು ೧೮ ರಿಂದ ೨೪ ವರ್ಷ ವಯಸ್ಸಿನ ಶಾಲಾ ಮತ್ತು ಪಿಯು ವಿದ್ಯಾರ್ಥಿಗಳಿಗೆ ಡಿಜಿಟಲ್ ಜಾಗೃತಿ ತರಬೇತಿಯನ್ನು ನೀಡುತ್ತದೆ ಎಂದರು. ಈ ಉಪಕ್ರಮವು ರಾಜ್ಯದಾದ್ಯಂತ ೧೦೦ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಒಳಗೊಳ್ಳುತ್ತದೆ. ತರಬೇತಿಯು ಡಿಜಿಟಲ್ ಸುರಕ್ಷತೆ ಮತ್ತು ಅರಿವಿನ ಮೇಲೆ ಕೇಂದ್ರೀಕರಿಸುತ್ತದೆ ಎಂದು ಹೇಳಿದರು.
ಜಮ್ಮು-ಕಾಶ್ಮೀರ: ಒಳನುಸುಳುವಿಕೆ ಹೊಸ ಪಡೆ ನಿಯೋಜನೆ
ಶ್ರೀನಗರ, ಜು. ೫: ಜಮ್ಮು ಪ್ರದೇಶದಲ್ಲಿ ಇತ್ತೀಚಿಗೆ ಉಗ್ರ ದಾಳಿಗಳು ಮತ್ತು ಒಳನುಸುಳುವಿಕೆ ಹೆಚ್ಚುತ್ತಿದ್ದು, ಇದನ್ನು ತಡೆಯಲು ಜಮ್ಮ ಮತ್ತು ಕಾಶ್ಮೀರ ಪೊಲೀಸರು ಕೇಂದ್ರಾಡಳಿತ ಪ್ರದೇಶದ ಗಡಿ ಗ್ರಾಮಗಳಿಂದ ೯೬೦ ಯುವ ನೇಮಕಾತಿಗಳ ಹೊಸ ಪಡೆಯನ್ನು ರಚಿಸಿದ್ದಾರೆ ಮತ್ತು ಅಂತಹ ಘಟನೆಗಳನ್ನು ಪರಿಶೀಲಿಸಲು ಅವರನ್ನು ಗಡಿಗಳಲ್ಲಿ ನಿಯೋಜಿಸಿದ್ದಾರೆ. ಹೊಸದಾಗಿ ನೇಮಕಗೊಂಡ ೯೬೦ ಪೊಲೀಸರಲ್ಲಿ ೫೬೦ ಮಂದಿಯನ್ನು ಜಮ್ಮುವಿನ ಗಡಿ ಪ್ರದೇಶಗಳಲ್ಲಿ ಮತ್ತು ಉಳಿದವರನ್ನು ಕಣಿವೆಯ ಗಡಿ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ಈ ಯುವಕರು ಇತ್ತೀಚೆಗೆ ಪೊಲೀಸ್ ತರಬೇತಿ ಕೇಂದ್ರಗಳಿAದ ಉತ್ತೀರ್ಣರಾಗಿದ್ದಾರೆ. ಅವರು ಗಡಿ ಗ್ರಾಮಗಳ ನಿವಾಸಿಗಳಾಗಿದ್ದು, ನಿರ್ದಿಷ್ಟ ಸ್ಥಳಕ್ಕೆ ಅನುಗುಣವಾಗಿ ಅವರ ನೇಮಕಾತಿಯನ್ನು ಮಾಡಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಆರ್.ಆರ್. ಸ್ವೈನ್ ಅವರು ತಿಳಿಸಿದ್ದಾರೆ. ಅವರನ್ನು ಉಗ್ರ ವಿರೋಧಿ ಮತ್ತು ಒಳನುಸುಳುವಿಕೆ ವಿರೋಧಿ ಕರ್ತವ್ಯಗಳಿಗಾಗಿ ಮಾತ್ರ ನಿಯೋಜಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಕೇರಳದಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆ
ತಿರುವನಂತಪುರ, ಜು. ೫: ಕೇರಳದ ತ್ರಿಶ್ಶೂರ್ ಜಿಲ್ಲೆಯ ಹಳ್ಳಿಯೊಂದರ ಜಮೀನಿನಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆಯಾಗಿದೆ. ಸೋಂಕಿತ ಹಂದಿಯಿAದ ನೇರ ಸಂಪರ್ಕದ ಮೂಲಕ ಹಂದಿ ಜ್ವರವು ಒಂದು ಹಂದಿಯಿAದ ಮತ್ತೊಂದು ಹಂದಿಗೆ ಸುಲಭವಾಗಿ ಹರಡುವ ಕಾರಣ, ತ್ರಿಶೂರ್ ಜಿಲ್ಲೆಯ ಮಡಕ್ಕತಾರಾ ಪಂಚಾಯತ್‌ನ ಖಾಸಗಿ ಜಮೀನಿನಲ್ಲಿ ೩೧೦ ಹಂದಿಗಳನ್ನು ಕೊಲ್ಲಲು ತ್ರಿಶೂರ್ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ೧೪ನೇ ವಾರ್ಡ್ನ ವೆಲಿಯಂತರ ಕುಟ್ಟಲಪುಳಬಾಬು ಎಂಬುವವರ ಮಾಲೀಕತ್ವದ ಹಂದಿಗಳಲ್ಲಿ ರೋಗ ದೃಢಪಟ್ಟಿದ್ದು, ಹಂದಿಗಳನ್ನು ಕೊಂದು ಹೂಳಲು ಜಿಲ್ಲಾಧಿಕಾರಿಗಳು ಜಿಲ್ಲಾ ಪಶುಸಂಗೋಪನಾ ಅಧಿಕಾರಿಗೆ ಸೂಚಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ವೈದ್ಯರು, ಜಾನುವಾರು ನಿರೀಕ್ಷಕರು ಮತ್ತು ಪರಿಚಾರಕರನ್ನು ಒಳಗೊಂಡ ತಂಡವು ಕೊಲ್ಲುವ ಪ್ರಕ್ರಿಯೆಗೆ ಮುಂದಾಗಿದೆ. ಮುಂದಿನ ಪ್ರಾಥಮಿಕ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅದು ಹೇಳಿದೆ. ಹಾನಿಗೊಳಗಾದ ಜಮೀನಿನ ಒಂದು ಕಿಲೋಮೀಟರ್ ವ್ಯಾಪ್ತಿಯ ಪ್ರದೇಶವನ್ನು ರೋಗ ಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ ಮತ್ತು ೧೦ ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಕಣ್ಗಾವಲು ಪ್ರದೇಶವೆಂದು ಘೋಷಿಸಲಾಗಿದೆ.