ನಾಪೋಕ್ಲು, ಜು. ೫: ಸ್ಥಳೀಯ ಲಯನ್ಸ್ ಮತ್ತು ಲಿಯೋ ಕ್ಲಬ್ನ ೨೦೨೪-೨೫ರ ಸಾಲಿನ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭ ಇಲ್ಲಿನ ಕೊಡವ ಸಮಾಜದಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ಬಿದ್ದಾಟಂಡ ಮೇರಿ ಚಿಟ್ಟಿಯಪ್ಪ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಕುಂಚೆಟ್ಟಿರ ರೇಷ್ಮಾ ಉತ್ತಪ್ಪ, ಖಜಾಂಚಿಯಾಗಿ ಕಾಂಡAಡ ರೇಖಾ ಪೊನ್ನಣ್ಣ ಆಯ್ಕೆಯಾದರೆ, ಲಿಯೋ ಕ್ಲಬ್ನ ನೂತನ ಅಧ್ಯಕ್ಷರಾಗಿ ಅಂಕುರ್ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿನಿ ಉಮ್ಮು ಹಬೀಬ, ಕಾರ್ಯದರ್ಶಿ ಯಾಗಿ ನವಲ್ ನಾಚಪ್ಪ ಬಿ.ಸಿ. ಹಾಗೂ ಖಜಾಂಚಿಯಾಗಿ ದ್ರುವ್ ದೇವಯ್ಯ ನೇಮಕಗೊಂಡರು.
ಲಯನ್ಸ್ ಕ್ಲಬ್ ಅಧ್ಯಕ್ಷ ಕನ್ನಂಬಿರ ಸುಧಿ ತಿಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಬಡ್ಡೀರ ನಳಿನಿ ಪೂವಯ್ಯ ಅವರು ನೂತನ ಸದಸ್ಯರಾಗಿ ಸೇರ್ಪಡೆಗೊಂಡರು. ಉಪ ರಾಜ್ಯಪಾಲ ಕುಡುಪಿ ಅರವಿಂದ್ ಶೆಣೈ ಪದಗ್ರಹಣ ಅಧಿಕಾರಿಗಳಾಗಿ ಪಾಲ್ಗೊಂಡು ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ವೇದಿಕೆಯಲ್ಲಿ ಖಜಾಂಚಿ ಅಪ್ಪುಮಣಿಯಂಡ ಬನ್ಸಿ ಭೀಮಯ್ಯ, ನಿರ್ಗಮಿತ ಕಾರ್ಯದರ್ಶಿ ಮಾದೆಯಂಡ ಬಿ. ಕುಟ್ಟಪ್ಪ, ಪ್ರಾಂತೀಯ ಅಧ್ಯಕ್ಷೆ ಕುಟ್ಟಂಡ ಕನ್ನಿಕಾ ಅಯ್ಯಪ್ಪ, ವಲಯ ಅಧ್ಯಕ್ಷ ಕನ್ನಂಡ ಬೊಳ್ಳಪ್ಪ, ನಾಪೋಕ್ಲು ಲಿಯೋ ಸಂಸ್ಥೆಯ ನಿರ್ಗಮಿತ ಅಧ್ಯಕ್ಷೆ ಕೇಟೋಳಿರ ಗಾಯನ ಗೌರಮ್ಮ, ಪ್ರಮುಖರಾದ ಕೇಟೋಳಿರ ಎಸ್. ಕುಟ್ಟಪ್ಪ, ಕೋಟೆರ ಡಾ. ಪಂಚಮ್ ತಿಮ್ಮಯ್ಯ, ಕುಂಡ್ಯೋಳAಡ ರಮೇಶ್ ಮುದ್ದಯ್ಯ, ಮುಕ್ಕಾಟಿರ ವಿನಯ್, ಕೇಟೋಳಿರ ರತ್ನ ಚರ್ಮಣ, ಕುಂಡ್ಯೋಳAಡ ಗಣೇಶ್ ಮುತ್ತಪ್ಪ, ಅಪ್ಪಾರಂಡ ಸುಭಾಷ್ ತಿಮ್ಮಯ್ಯ, ಶಿವಚಾಳಿಯಂಡ ಲವ ಕಾಳಪ್ಪ, ಕಾಂಡAಡ ಪೊನ್ನಣ್ಣ, ಕುಂಚೆಟ್ಟಿರ ಸುಧಿ, ಅಪ್ಪಚೆಟ್ಟೋಳಂಡ ನವೀನ್, ವಸಂತ, ಮಂದಪAಡ ಪುಷ್ಪ ಅಪ್ಪಚ್ಚು, ತಿಮ್ಮಯ್ಯ, ಅಪ್ಪಚ್ಚು, ಮಂದಪ್ಪ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಅಂಕುರ್ ಪಬ್ಲಿಕ್ ಶಾಲೆಯ ಆವರಣದಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.