ಸುಂಟಿಕೊಪ್ಪ, ಜು. ೬: ಮಾದಾಪುರದಲ್ಲಿ ಶನಿವಾರ ದಿನ ಸಂತೆ ದಿನವಾಗಿದ್ದು, ಬೇರೆಡೆಯಿಂದ ಬಂದ ವರ್ತಕರು ಮಾರ್ಕೆಟ್ ರಸ್ತೆ ಬದಿ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ನಡೆಸುವುದರಿಂದ ಜನ ಸಾಮಾನ್ಯರಿಗೆ ವಾಹನ ಸಂಚಾರಕ್ಕೆ ತೊಂದರೆಯಾಗಿರುವುದರ ಬಗ್ಗೆ ಸಾರ್ವಜನಿಕರು ಗ್ರಾಮ ಪಂಚಾಯಿತಿಗೆ ದೂರು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಇಂದು ಮಾದಾಪುರ ಗ್ರಾ.ಪಂ. ಪಿಡಿಓ ಬಾಲಕೃಷ್ಣ ರೈ ಕಾರ್ಯದರ್ಶಿ ಅನಿತಾ, ಗ್ರಾ.ಪಂ.ಉಪಾಧ್ಯಕ್ಷ ಸುರೇಶ್‌ಭಾವೆ, ಸದಸ್ಯರಾದ ಪಿ.ಡಿ. ಅಂತೋಣಿ, ಕೆ.ಎ. ಲತೀಫ್ ಇವರುಗಳು ಸ್ಥಳಕ್ಕೆ ತೆರಳಿ ರಸ್ತೆ ಬದಿ ಅಂಗಡಿಯಿಟ್ಟ ವರ್ತಕರೊಂದಿಗೆ ಮಾತುಕತೆ ನಡೆಸಿ ಮಾರುಕಟ್ಟೆ ಆವರಣದಲ್ಲಿ ಮುಂದಿನ ವಾರದಿಂದ ಅಂಗಡಿ ತೆರೆಯಬೇಕೆಂದು ತಾಕೀತು ಮಾಡಿದರು.
ಸುಂಕ ಎತ್ತಾವಳಿ ಗುತ್ತಿಗೆ ಪಡೆದವರು ರಶೀತಿ ಕೊಡುತ್ತಿಲ್ಲವೆಂದು ತರಕಾರಿ ವ್ಯಾಪಾರಿಯೊಬ್ಬರು ಹೇಳಿದರು. ರಶೀತಿ ಕೊಡುವಂತೆ ಪಿಡಿಓ ಹಾಗೂ ಪೊಲೀಸ್ ಪೇದೆ ಅಬ್ದುಲ್ ರೆಹೆಮಾನ್ ಸುಂಕ ಎತ್ತಾವಳಿಗಾರರಿಗೆ ಸೂಚಿಸಿದರು.
ಇದೇ ಸಂದರ್ಭ ಮಾದಾಪುರ ಮಾರುಕಟ್ಟೆ ರಸ್ತೆಯಲ್ಲಿ ಅಂಗಡಿ ವಾಣಿಜ್ಯ ಮಳಿಗೆ ನಿರ್ಮಿಸಿದವರು ರಸ್ತೆಜಾಗ ಒತ್ತುವರಿ ಮಾಡಿಕೊಂಡಿದ್ದನ್ನು ಗಮನಿಸಿದ ಪಂಚಾಯಿತಿ ಆಡಳಿತ ಮಂಡಳಿ ಸಂಬAಧಿಸಿದವರಿಗೆ ನೋಟಿಸ್ ಜಾರಿ ಮಾಡಿ ಒತ್ತುವರಿಯನ್ನು ತೆರವುಗೊಳಿಸುವುದಾಗಿ ತಿಳಿಸಿತು. ಇದೇ ಸಂದರ್ಭ ಮಾದಾಪುರ ಮಾರುಕಟ್ಟೆ ರಸ್ತೆಯಲ್ಲಿ ಅಂಗಡಿ ವಾಣಿಜ್ಯ ಮಳಿಗೆ ನಿರ್ಮಿಸಿದವರು ರಸ್ತೆಜಾಗ ಒತ್ತುವರಿ ಮಾಡಿಕೊಂಡಿದ್ದನ್ನು ಗಮನಿಸಿದ ಪಂಚಾಯಿತಿ ಆಡಳಿತ ಮಂಡಳಿ ಸಂಬAಧಿಸಿದವರಿಗೆ ನೋಟಿಸ್ ಜಾರಿ ಮಾಡಿ ಒತ್ತುವರಿಯನ್ನು ತೆರವುಗೊಳಿಸುವುದಾಗಿ ತಿಳಿಸಿತು.