ಚೆಟ್ಟಳ್ಳಿ, ಜು. ೬: ಮಳೆ - ಗಾಳಿಯಿಂದ ಚೆಟ್ಟಳ್ಳಿ- ಮಡಿಕೇರಿ ಮುಖ್ಯ ರಸ್ತೆಗೆ ಮರ ಅಡ್ಡಲಾಗಿ ಬಿದ್ದ ಪರಿಣಾಮ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಚೆಟ್ಟಳ್ಳಿ ಪೊಲೀಸ್ ಠಾಣಾಧಿಕಾರಿ ದಿನೇಶ್, ಸಿಬ್ಬಂದಿಗಳಾದ ಮಂಜು, ಮೀನುಕೊಲ್ಲಿ ಮೀಸಲು ಅರಣ್ಯ ವಿಭಾಗದ ಡಿಆರ್ಎಫ್ಓ ಸುಬ್ರಾಯ ಹಾಗೂ ಸಿಬ್ಬಂದಿ ಮರ ತೆರವು ಕಾರ್ಯ ನಡೆಸಿದರು.