ಮಡಿಕೇರಿ, ಜು. ೫: ಜಿಲ್ಲಾ ಕೇಂದ್ರವಾದ ಮಡಿಕೇರಿ ನಗರದ ಹೃದಯ ಭಾಗದಲ್ಲಿರುವ
ಇದೀಗ ಗ್ರೇಟರ್ ರಾಜಾಸೀಟ್ ಎಂದು ಪರಿವರ್ತಿಸಲಾಗಿರುವ ಉದ್ಯಾನವನದ ಸ್ಥಳದಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಾಣಕ್ಕೆ ಪ್ರಯತ್ನ ನಡೆದಿರುವ ಕುರಿತು ‘ಶಕ್ತಿ’ಗೆ ತಿಳಿದು ಬಂದಿದೆ. ಈ ಪ್ರಯತ್ನದ ಹಿಂದೆ ಕೆಲವು ಪ್ರಭಾವಿಗಳ ಪಾತ್ರವಿರುವ ಕುರಿತು ಮಾತು ಕೇಳಿ ಬಂದಿದೆ.
ಇದರAತೆ ಉನ್ನತ ಮಟ್ಟದಲ್ಲಿ ಇದಕ್ಕೆ ಸಂಬAಧಿಸಿದ ಪೂರ್ವ ತಯಾರಿಯೂ ನಡೆಯುತ್ತಿದೆ ಎನ್ನಲಾಗಿದೆ. ಈ ತನಕ ಇದನ್ನು ಯಾರೂ ಖಚಿತಪಡಿಸಿಲ್ಲವಾದರೂ ಇದೇ ವಿಚಾರಕ್ಕೆ ಸಂಬAಧಿಸಿದAತೆ ಕೇವಲ ಅಧಿಕಾರಿ ವರ್ಗದವರೇ ಭಾಗವಹಿಸಿರುವ ಸಭೆಯಲ್ಲಿ ಮಾತುಕತೆ ನಡೆದಿರುವುದು ‘ಶಕ್ತಿ’ಗೆ ಕೆಲವು ಮೂಲಗಳಿಂದ ತಿಳಿದು ಬಂದಿದೆ.
ಎರಡು ವಾರದ ಹಿಂದೆ ವೀಡಿಯೋ ಸಂವಾದದ ಮೂಲಕ ಈ ಸಭೆ ನಡೆದಿದೆ ಎನ್ನಲಾಗಿದೆ. ಈ ಸಭೆಯಲ್ಲಿ ತೋಟಗಾರಿಕಾ ಇಲಾಖೆಯ ಸರಕಾರದ ಹಿರಿಯ ಅಧಿಕಾರಿಗಳು ಸೇರಿದಂತೆ ಜಿಲ್ಲೆಯ ಪ್ರಮುಖ ಅಧಿಕಾರಿಗಳು ಪಾಲ್ಗೊಂಡಿದ್ದು, ಗ್ಲಾಸ್ ಬ್ರಿಡ್ಜ್ ನಿರ್ಮಾಣದ ಬಗ್ಗೆ ಚರ್ಚೆ ನಡೆಸಲಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ ಮಾದರಿ) ಇದರ ನಿರ್ಮಾಣದ ಉದ್ದೇಶ ಹೊಂದಲಾಗಿದ್ದು, ಕೆಲವು ಪ್ರಭಾವಿಗಳ ಒತ್ತಡದಂತೆ ಇದರ ಪ್ರಯತ್ನಕ್ಕೆ ಮುಂದಾಗಲಾಗಿದೆ ಎಂಬ ಮಾತು ಕೇಳಿ ಬಂದಿದೆ.
ಇAತಹ ಹಲವು ಯೋಜನೆಗಳಿಗೆ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸುತ್ತಾರೆ ಎಂಬ ವಿಚಾರವೂ ಸಭೆಯಲ್ಲಿ ಪ್ರಸ್ತಾಪಕ್ಕೆ ಬಂದಿತ್ತು ಎಂದೂ ಹೇಳಲಾಗಿದೆ. ರಾಜಾಸೀಟ್ನಲ್ಲಿ ಇಂತಹ ಕಾಮಗಾರಿ ನಡೆಸಬೇಕಾಗಿದ್ದರೆ ಇದಕ್ಕೆ ಪುರಾತತ್ವ ಇಲಾಖೆಯ ಅನುಮತಿ ಕೂಡಬೇಕಿದೆ.
ಈ ಬಗ್ಗೆ ‘ಶಕ್ತಿ’ ಜಿಲ್ಲಾಧಿಕಾರಿಗಳ ಪ್ರತಿಕ್ರಿಯೆ ಕೇಳಿದಾಗ ಕೆಲವಾರು ಸಂದರ್ಭದಲ್ಲಿ ಹಲವರಿಂದ ನೂರಾರು ಮಾತುಗಳು ಕೇಳಿಬರುತ್ತವೆ. ಇದು ಸಹಜ ಆದರೆ ತಮ್ಮ ಬಳಿ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ ಎಂದಿ ದ್ದಾರೆ. ರಾಜಾಸೀಟು ಇರುವ ಸ್ಥಳ ಭೌಗೋಳಿಕವಾಗಿ ವಿಭಿನ್ನ ವಾಗಿದ್ದು, ಇದು ತೀರಾ ಇಳಿಜಾರು ಪ್ರದೇಶವು ಆಗಿದೆ. ಇಲ್ಲಿ ಗ್ಲಾಸ್ಬ್ರಿಡ್ಜ್ ನಿರ್ಮಾಣ ಎಷ್ಟು ಸೂಕ್ತ ಎಂಬ ವಿಚಾರದ ಬಗ್ಗೆ ಇಲ್ಲಿ ಗಂಭೀರ ಚಿಂತನೆಯAತೂ ಅಗತ್ಯವಾಗಿದೆ.