ಸೋಮವಾರಪೇಟೆ, ಜು .೬: ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಬೆಟ್ಟದಳ್ಳಿ ಹಾಗೂ ಶಾಂತಳ್ಳಿ ಭಾಗದಲ್ಲಿ ಆಯೋಜನೆಗೊಂಡಿದ್ದ ಮಾನ್ಸೂನ್ ಮಡ್ವೆಂಚರ್ ಡ್ರೆöÊವ್-೨೦೨೪ ರ್ಯಾಲಿ, ನೋಡುಗರ ಮೈ ನವಿರೇಳುವಂತೆ ಮಾಡಿತು.
ಕಡಿದಾದ ರಸ್ತೆ, ಕೆಸರುಮಯವಾಗಿದ್ದ ಕಚ್ಚಾ ರಸ್ತೆಯಲ್ಲಿ ಫೋರ್ ವೀಲ್ ಜೀಪ್ಗಳು ಒಂದರ ಹಿಂದೊAದರAತೆ ತೆರಳಿ ತೋಟ ಗದ್ದೆ, ಬೆಟ್ಟ-ಗುಡ್ಡಗಳನ್ನು ಇಳಿದು ಚಾಲನೆಯ ಹೊಸ ಅನುಭವಕ್ಕೆ ಸಾಕ್ಷಿಯಾದವು.
ಜಿಲ್ಲೆ ಮಾತ್ರವಲ್ಲದೆ ರಾಜ್ಯದ ವಿವಿಧ ಭಾಗಗಳಿಂದ, ನೆರೆಯ ಕೇರಳ, ತಮಿಳುನಾಡಿನಿಂದಲೂ ಆಗಮಿಸಿದ್ದ ಜೀಪ್ಗಳು ಕೆಸರುಮಯ ರಸ್ತೆಯಲ್ಲಿ ಸಾಗಿ ಸಾಹಸಮಯ ಚಾಲನೆಯ ಸವಾಲನ್ನು ಸಮರ್ಥವಾಗಿ ಎದುರಿಸಿದವು.
ಹಲವಷ್ಟು ವಾಹನಗಳು ಕೆಸರಿನ ಹೊಂಡಗಳಲ್ಲಿ ಸಿಲುಕಿಕೊಂಡ ಸಂದರ್ಭ ಟ್ರಾö್ಯಕ್ಟರ್ಗಳ ಮೂಲಕ ಹೊರಗೆಳೆಯಲಾಯಿತು.
ಅರಣ್ಯಾಧಿಕಾರಿಗಳಿಂದ ತಡೆ: ಶಾಂತಳ್ಳಿ, ಬೆಟ್ಟದಳ್ಳಿ ಭಾಗದಲ್ಲಿರುವ ಅರಣ್ಯ ಇಲಾಖೆಗೆ ಸೇರಿದ ಸ್ಥಳದ ಮೂಲಕ ಹಾದುಹೋಗಿದ್ದ ರಸ್ತೆಯಲ್ಲಿ ಸಾಹಸಮಯ ಚಾಲನೆಗೆ ಅರಣ್ಯಾಧಿಕಾರಿಗಳು ತಡೆಯೊಡ್ಡಿದರು. ಎರಡೂ ಬದಿಯಲ್ಲಿ ಸ್ಥಳೀಯರ ತೋಟ, ನಡುವೆ ಅರಣ್ಯ ಇಲಾಖೆಗೆ ಸೇರಿದ ಜಾಗವಿದ್ದ ಸ್ಥಳಗಳಲ್ಲಿ ಅಡ್ವೆಂಚರ್ ಡ್ರೆöÊವ್ಗೆ ಅವಕಾಶ ನೀಡಲಿಲ್ಲ.
ವಲಯಾರಣ್ಯಾಧಿಕಾರಿ ಚೇತನ್ ಸೇರಿದಂತೆ ಇಲಾಖೆಯ ಇತರ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳದಲ್ಲಿ ಬೀಡುಬಿಟ್ಟು, ವಾಹನಗಳನ್ನು ತಡೆದರು. ಈ ಸಂದರ್ಭ ಸ್ಥಳೀಯರು ಹಾಗೂ ಅಧಿಕಾರಿಗಳ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಅಂತಿಮವಾಗಿ ಖಾಸಗಿ ಜಮೀನಿನ ಮೂಲಕ ಡ್ರೆöÊವ್ ಮುಂದುವರೆಯಿತು.
ಪ್ರವಾಸೋದ್ಯಮಕ್ಕೆ ಸಹಕಾರಿ: ಇದಕ್ಕೂ ಮುನ್ನ ಶಾಂತಳ್ಳಿ ಶ್ರೀಕುಮಾರಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿ ಮಾನ್ಸೂನ್ ಮಡ್ವೆಂಚರ್ ಡ್ರೆöÊವ್ಗೆ ಪ್ರಮುಖರು ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಮಾಜೀ ಎಂಎಲ್ಸಿ ಎಸ್.ಜಿ. ಮೇದಪ್ಪ, ತಾಲೂಕಿನಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಹೆಚ್ಚಿನ ಯೋಜನೆಗಳ ಅಗತ್ಯವಿದೆ. ಪರಿಸರಕ್ಕೆ ಪೂರಕವಾದ ಪ್ರವಾಸೋದ್ಯಮದಿಂದ ಅಭಿವೃದ್ಧಿಯನ್ನೂ ನಿರೀಕ್ಷಿಸಬಹುದಾಗಿದೆ ಎಂದು ಅಭಿಪ್ರಾಯಿಸಿದರು.
ತಾ.ಪಂ. ಮಾಜಿ ಅಧ್ಯಕ್ಷ ಕೆ.ಎಂ. ಲೋಕೇಶ್ ಮಾತನಾಡಿ, ಗ್ರಾಮೀಣ ಭಾಗದ ರೈತರು ತಮ್ಮ ತೋಟ, ಗದ್ದೆಗಳಿಗೆ ತೆರಳಲು ರಸ್ತೆಯ ಸಮಸ್ಯೆ ಇದ್ದು, ಇಂತಹ ಸಾಹಸಮಯ ಚಾಲನೆಗಾಗಿ ರಸ್ತೆ ನಿರ್ಮಿಸುವುದರಿಂದ ಸ್ಥಳೀಯರಿಗೂ ಅನುಕೂಲವಾಗುತ್ತದೆ. ಈ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾದ ವಾತಾವರಣವಿದ್ದು, ಇನ್ನಷ್ಟು ಬೆಳಕು ಚೆಲ್ಲಬೇಕಿದೆ ಎಂದರು.
ಮಾನ್ಸೂನ್ ಮಡ್ವೆಂಚರ್ ಡ್ರೆöÊವ್ನಲ್ಲಿ ೮೦ಕ್ಕೂ ಅಧಿಕ ವಾಹನಗಳು ಭಾಗಿಯಾಗಿದ್ದವು.