ಕಣಿವೆ, ಜು. ೭: ಇಲ್ಲಿಗೆ ಸಮೀಪದ ತೊರೆನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ವಿದ್ಯಾರ್ಥಿ ಸಂಸತ್ ರಚನೆಗೊಂಡಿತು.

ಶಾಲೆಯ ಕಾವೇರಿ ವಿದ್ಯಾರ್ಥಿ ಸಂಘದ ವತಿಯಿಂದ ನಡೆದ ಚುನಾವಣೆಯಲ್ಲಿ ಚುನಾವಣಾ ಆಯುಕ್ತರಾಗಿ ಶಾಲಾ ಮುಖ್ಯ ಶಿಕ್ಷಕ ಬಿ.ಆರ್. ಸತ್ಯನಾರಾಯಣ ಕಾರ್ಯನಿರ್ವಹಿಸಿದರು.

ಹಾಗೆಯೇ ಚುನಾವಣಾ ಉಸ್ತುವಾರಿಯಾಗಿ ಶಾಲೆಯ ಹಿರಿಯ ಶಿಕ್ಷಕಿ ವಾಂಚಿರ ದಿವ್ಯಾ ನಂಜುAಡ ಕಾರ್ಯನಿರ್ವಹಿಸಿದರು.

ನಲವತ್ತು ವಿದ್ಯಾರ್ಥಿಗಳು ಇರುವ ಶಾಲೆಯಲ್ಲಿ ಪ್ರಧಾನಮಂತ್ರಿಯಾಗಿ ಟಿ.ಬಿ. ಗೌತಮ್, ಉಪಪ್ರಧಾನಿಯಾಗಿ ಟಿ.ಎ. ಪುಷ್ಪ, ಗೃಹಮಂತ್ರಿಯಾಗಿ ಆದರ್ಶ, ಕ್ರೀಡಾ ಹಾಗೂ ಶಿಕ್ಷಣ ಮಂತ್ರಿಯಾಗಿ ಎ.ಎಂ. ರಶ್ಮಿ, ಆಹಾರ ಹಾಗೂ ಆರೋಗ್ಯ ಮಂತ್ರಿಯಾಗಿ ಪೂರ್ವಿಕ, ತೋಟಗಾರಿಕಾ ಹಾಗೂ ನೀರಾವರಿ ಮಂತ್ರಿಯಾಗಿ ಟಿ.ಆರ್. ನಂದೀಶ್, ಸ್ವಚ್ಛತಾ ಮಂತ್ರಿಯಾಗಿ ಜೀವನಕುಮಾರ್, ಸಾಂಸ್ಕೃತಿಕ ಹಾಗೂ ವಾರ್ತಾ ಮಂತ್ರಿಯಾಗಿ ವರಲಕ್ಷ್ಮಿ, ವಿರೋಧ ಪಕ್ಷದ ನಾಯಕನಾಗಿ ಮಾದೇಶ ಮತ್ತು ನಾಯಕಿಯಾಗಿ ಪಲ್ಲವಿ ಆಯ್ಕೆಯಾದರು.

ಈ ಸಂದರ್ಭ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಗೀತಾ ಹಾಗೂ ಸಿದ್ದೇಶಿ ಮಾತನಾಡಿದರು. ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಣ್ಣಯ್ಯ, ಹೆಬ್ಬಾಲೆ ಕ್ಲಸ್ಟರ್ ಸಂಪನ್ಮೂಲ ಶಿಕ್ಷಕ ಆದರ್ಶ, ಶಾಲಾ ಶಿಕ್ಷಕರಾದ ಟಿ.ಬಿ. ಮಂಜುನಾಥ, ಶ್ರೀಹರ್ಷ, ಸವಿತಾ ಶಿವಕುಮಾರ್, ಶೈಲಾ ಗಿರೀಶ್, ಸುಕನ್ಯ ಇದ್ದರು.