ಮಡಿಕೇರಿ, ಜು. ೭ : ಮನುಷ್ಯ ಜೀವನ ಅಂದ ಮೇಲೆ ಸುಖಃ-ದುಖB., ನೋವು-ನಲಿವು, ಬಡತನ- ಸಿರಿತನ., ಮೋಜು ಮಸ್ತಿ ಇವೆಲ್ಲವೂ ಸಾಮಾನ್ಯ. ಮನುಷ್ಯನ ದೇಹ ಕೇವಲ ಒಂದು ಮೂಳೆ-ಮಾಂಸಗಳ ತಡಿಕೆಯಷ್ಟೇ., ಅದರೊಳಗೆ ಏನೇನು ಕಾಯಿಲೆಗಳು ಅಡಗಿವೆ ಎಂಬುದು ಯಾರಿಗೂ ತಿಳಿಯುವುದಿಲ್ಲ. ಒಳಗಿರುವದು ಹೊರ ಬಂದಾಗಲೇ ಗೊತ್ತಾಗುವುದು ಅದೆಂತಹ ಕಾಯಿಲೆ ಎಂಬುದು., ಇತ್ತೀಚೆಗಂತೂ ಕೂಸು ಹುಟ್ಟಿದಾಗಿನಿಂದಲೇ ಕಾಯಿಲೆಗಳೂ ಹುಟ್ಟಿಕೊಳ್ಳುತ್ತವೆ. ಅದರ ಚಿಕಿತ್ಸೆ, ಪರೀಕ್ಷೆ ಹೀಗೇ ಲೆಕ್ಕಾಚಾರ ಹಾಕಿದರೆ ಸಾವಿರ, ಲಕ್ಷಾಂತರ ಹಣ ಖರ್ಚು ಮಾಡಬೇಕಾದ ಪರಿಸ್ಥಿತಿ ಎದುರಾಗುತ್ತದೆ. ವಿಧಿಯಿಲ್ಲದೆ ದೊಡ್ಡ ದೊಡ್ಡ ಆಸ್ಪತ್ರೆಗೆ ಸೇರಿಸಿ ಕಾಯಿಲೆ ವಾಸಿ ಮಾಡಿಕೊಳ್ಳುವುದೊಂದೇ ಗುರಿಯಾಗಿರುತ್ತದೆ. ಬಿಪಿಎಲ್ ಕಾರ್ಡ್, ಯಶಸ್ವಿನಿ, ಆರೋಗ್ಯ ಕಾರ್ಡ್ ಯೋಜನೆಯಡಿ ನೋಂದಾವಣೆ ಮಾಡಿಕೊಂಡವರಿಗೆ ಒಂದಿಷ್ಟು ರಿಯಾಯಿತಿ ದೊರಕುತ್ತದೆ. ಉಳಿದವರು ಆರೋಗ್ಯ ಸುಧಾರಣೆಗಾಗಿ ಲಕ್ಷಗಟ್ಟಲೆ ಹಣ ಖರ್ಚು ಮಾಡಲೇಬೇಕು. ಆದರೆ, ಕೇಂದ್ರ ಸರಕಾರದ ಯೋಜನೆಯಾಗಿರುವ ಪಂಚಕರ್ಮ ಚಿಕಿತ್ಸೆಯಡಿ ಆಯುಷ್ ಆಸ್ಪತ್ರೆಯಲ್ಲಿ ಬಹುತೇಕ ಕಾಯಿಲೆಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಮಾಹಿತಿ ಇಲ್ಲದ ಜನರು ಕಾಯಿಲೆ ಬಂದಾಗ ಸಂಕಷ್ಟ ಅನುಭವಿಸುತ್ತಿದ್ದಾರೆ. ಬಡ ಹಾಗೂ ಸಾಮಾನ್ಯ ವರ್ಗದ ಜನತೆಗೆ ಈ ಆಯುಷ್ ಆಸ್ಪತ್ರೆಗಳು ಆಯುಷ್ಯವನ್ನು ವೃದ್ಧಿ ಮಾಡುವ ಸಂಜೀವಿನಿಯAತೆ ಕಾರ್ಯನಿರ್ವಹಿಸುತ್ತಿವೆ.

ಮಡಿಕೇರಿಯ ಕೆಎಸ್‌ಆರ್‌ಟಿಸಿ ಡಿಪೋ ಬಳಿ ಇರುವ ಆಯುಷ್ ಆಸ್ಪತ್ರೆ ಪಂಚಕರ್ಮ ಚಿಕಿತ್ಸಾ ಪದ್ಧತಿಯಡಿ ಕಾರ್ಯನಿರ್ವಹಿಸುತ್ತಿದ್ದು,

(ಮೊದಲ ಪುಟದಿಂದ) ರೋಗಿಗಳಿಗೆ ಹಲವು ಆರೋಗ್ಯ ಸೇವೆಗಳನ್ನು ಉಚಿತವಾಗಿ ಒದಗಿಸುತ್ತಾ ಮುಂದುವರಿಯುತ್ತಿದೆ. ತುರ್ತು ಆರೋಗ್ಯ ಪ್ರಕರಣಗಳನ್ನು ಹೊರತು ಪಡಿಸಿ ಉಳಿದೆಲ್ಲಾ ರೀತಿಯ ಕಾಯಿಲೆಗಳಿಗೂ ಇಲ್ಲಿ ಚಿಕಿತ್ಸೆ ಲಭ್ಯವಿದೆ.

ಪಂಚಕರ್ಮ ಚಿಕಿತ್ಸಾ ಪದ್ಧತಿ ಯಡಿ ವಮನ, ವಿರೇಚನ, ಬಸ್ತಿ, ನಸ್ಯ, ರಕ್ತಮೋಕ್ಷಣ ಕ್ರಮಗಳನ್ನು ಅನುಸರಿಸಿ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವಮನ ಎಂದರೆ ವಾಂತಿ ಮಾಡಿಸುವ ಕ್ರಮವಾಗಿದ್ದು, ಇದನ್ನು ಅಸ್ತಮ, ಅಪಸ್ಮಾರ, ಸೋರಿಯಾಸಿಸ್ ಮುಂತಾದ ಚರ್ಮವ್ಯಾಧಿಗಳಲ್ಲಿ ಅನುಸರಿಸಲಾಗುತ್ತದೆ. ವಿರೇಚನ ಎಂದರೆ ಭೇದಿ ಮಾಡಿಸುವ ಕ್ರಮವಾಗಿದ್ದು, ಇದನ್ನು ಕುಷ್ಟ, ಚರ್ಮರೋಗ, ಜಾಂಡೀಸ್, ಅಸ್ತಮಾ ಮುಂತಾದ ಪಿತ್ಥ ಪ್ರಧಾನ ರೋಗಗಳಲ್ಲಿ ಬಳಸಲಾಗುತ್ತದೆ. ಬಸ್ತಿ ಎಂದರೆ ಔಷಧ ಸಿದ್ಧ ತೈಲ, ಕಷಾಯಗಳನ್ನು ಗುದದ್ವಾರದ ಮೂಲಕ ನೀಡುವ ಕ್ರಮವಾಗಿದ್ದು, ಇದನ್ನು ವಾತ ಸಂಬAಧಿ ಕಾಯಿಲೆ ಪಾರ್ಶ್ವವಾಯು, ಶಿರ ಸಂಬAಧಿತ ಹಾಗೂ ನರ ರೋಗಗಳಿಗೆ ಉಪಯೋಗಿಸಲಾಗುತ್ತದೆ. ನಶ್ಯ ಎಂದರೆ ಮೂಗಿಗೆ ಔಷಧಿ ಹಾಕುವ ಕ್ರಮವಾಗಿದ್ದು ಇದನ್ನು ಮೈಗ್ರೇನ್, ಮೂಗು ಕಟ್ಟುವುದು, ತಲೆ ನೋವು, ಶೀತ, ನೆಗಡಿ, ಹಣೆಯ ಒಳಭಾಗದಲ್ಲಿ ಕಫಕಟ್ಟಿ ಸೈನಸೈಟಿಸ್ ಸೋಂಕು ಉಂಟಾಗಿದ್ದರೆ ಅನುಸರಿಸಲಾಗುತ್ತದೆ. ರಕ್ತ ಮೋಕ್ಷಣ ಎಂದರೆ ರಕ್ತಸ್ರಾವ ಉಂಟಾಗುವAತೆ ಮಾಡುವ ವಿಧಾನವಾಗಿದ್ದು, ಇದನ್ನು ವಿಶೇಷವಾಗಿ ಚರ್ಮ ರೋಗಗಳಲ್ಲಿ, ವಿಷಪ್ರಯೋಗಗಳಲ್ಲಿ ರಕ್ತ ದುಷ್ಟಿಯಿಂದಾದ ರೋಗಗಳಲ್ಲಿ,ಸರ್ಪ ಸುತ್ತು, ಕುರ ಇತ್ಯಾದಿಗಳಲ್ಲಿ ಅಶುದ್ಧ ರಕ್ತವನ್ನು ಹೊರ ಹಾಕಬೇಕಾದ ಅನಿವಾರ್ಯತೆ ಕಂಡು ಬಂದಾಗ ಪ್ರಯೋಗ ಮಾಡಲಾಗುತ್ತದೆ.

ಇವುಗಳಲ್ಲದೆ ಕಣ್ಣು, ಕಿವಿ, ಮೂಗು ಇತ್ಯಾದಿ ಕುತ್ತಿಗೆಯ ಮೇಲ್ಭಾಗದಲ್ಲಿ ತೊಂದರೆ ಇದ್ದರೆ, ಮೆದುಳು, ನರಮಂಡಲಕ್ಕೆ ಸಂಬAಧಿಸಿದ ರೋಗಗಳಿಗೆ ಶಿರೋಬಸ್ತಿ ಎಂಬ ಚಿಕಿತ್ಸಾ ಕ್ರಮವನ್ನು ಅನುಸರಿಸಲಾಗುತ್ತದೆ. ಈ ಕ್ರಮದಲ್ಲಿ ತಲೆಯ ಸುತ್ತ ನಾಲ್ಕು ಅಂಗುಲ ಎತ್ತರವಾಗಿ ಕಟ್ಟೆಯಂತೆ ಚರ್ಮದ ಪಟ್ಟಿ ಸುತ್ತಿ ಒಳಭಾಗದಲ್ಲಿ ರೋಗಾನುಸಾರ ಔಷಧ ದ್ರವ್ಯ ಸಿದ್ಧ ತೈಲ ಹಾಕಿ ಸ್ವಲ್ಪ ಸಮಯದ ನಂತರ ನಿಧಾನವಾಗಿ ತೈಲ ತೆಗೆಯಲಾಗುತ್ತದೆ. ಈ ಚಿಕಿತ್ಸೆ ನರರೋಗಗಳು, ಪಾರ್ಕಿನ್‌ಸನ್ ಕಾಯಿಲೆ, ಇಂದ್ರಿಯ ದೌರ್ಬಲ್ಯ, ನಿದ್ರೆ ಇಲ್ಲದಿರುವುದು ಇವುಗಳಿಗೆ ಪರಿಣಾಮಕಾರಿ ಚಿಕಿತ್ಸೆಯಾಗಿದೆ. ರಕ್ತದ ಒತ್ತಡ, ಮಾನಸಿಕ ಒತ್ತಡಗಳಿಗೆ, ಮೆದುಳು, ನರಮಂಡಲ ದೌರ್ಬಲ್ಯತೆಗೆ ರೋಗಿಯನ್ನು ಮಂಚದ ಮೇಲೆ ಮಲಗಿಸಿ ಹುಬ್ಬುಗಳ ನಡುವೆ, ಹಣೆಯ ಮೇಲೆ ಔಷಧಿ ಸಿದ್ಧ ತೈಲ ಕಷಾಯವನ್ನು ಶಿರೋಧಾರ ಯಂತ್ರದ ಮೂಲಕ ನಿಧಾನವಾಗಿ ಹರಿಸಲಾಗುತ್ತದೆ. ಒಂದು ವಾರಗಳ ಕಾಲ ಈ ಚಿಕಿತ್ಸೆ ಪಡೆಯಬೇಕಾಗುತ್ತದೆ. ಸೊಂಟ, ಕುತ್ತಿಗೆ, ಬೆನ್ನು, ಕಾಲು ನೋವುಗಳಿಗೆ, ಮಧುಮೇಹ ಸೇರಿದಂತೆ ಬಹುತೇಕ ಎಲ್ಲಾ ತರದ ವ್ಯಾಧಿಗಳಿಗೂ ಇಲ್ಲಿ ತೈಲ, ಕಷಾಯ, ಪುಡಿ, ಮಾತ್ರೆಗಳ ಚಿಕಿತ್ಸೆ ಲಭ್ಯವಿದ್ದು, ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಬಹುತೇಕ ಎಲ್ಲಾ ಔಷಧಿಗಳು ಆಯುಷ್ ಆಸ್ಪತ್ರೆಯಲ್ಲಿಯೆ ಲಭ್ಯವಿದೆ. ಏಳೆಂಟು ವರ್ಷಗಳಿಂದ ವೆರಿಕೋಸ್ ಸಮಸ್ಯೆಯಿಂದಾಗಿ ಗುಣವಾಗದ ಗಾಯಕ್ಕೆ ಎಲ್ಲಾ ಕಡೆ ಚಿಕಿತ್ಸೆ ಪಡೆದು ಫಲಕಾರಿಯಾಗದೆ ಕೊನೆಗೆ ಈ ಆಯುಷ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದವರಿದ್ದಾರೆ. ದೀರ್ಘಕಾಲದ ಚರ್ಮ ಮತ್ತಿತರ ವ್ಯಾಧಿಗಳನ್ನೂ ಇಲ್ಲಿನ ಔಷಧಿಯಿಂದ ಗುಣ ಪಡಿಸಲಾಗಿದೆ ಎನ್ನುತ್ತಾರೆ ಇಲ್ಲಿನ ವೈದ್ಯರುಗಳಾದ ಡಾ.ಸರಸ್ವತಿ ಹಾಗೂ ಡಾ. ಪಲ್ಲವಿ. ಪ್ರತಿನಿತ್ಯ ೭೦ ರಿಂದ ೮೦ ಮಂದಿ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು,೮ ರಿಂದ ೧೦ ಮಂದಿ ಪಂಚಕರ್ಮ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಆಯುಷ್ ಆಸ್ಪತ್ರೆಯಲ್ಲಿ ಖಾಯಂ ವೈದ್ಯರು ಹಾಗೂ ಸಿಬ್ಬಂದಿಯ ಕೊರತೆಯಿರುವ ಹಿನ್ನೆಲೆಯಲ್ಲಿ ರೋಗಿಗಳನ್ನು ದಾಖಲು ಮಾಡಿಕೊಳ್ಳುತ್ತಿಲ್ಲ. ಬರುವ ರೋಗಿಗಳಿಗೆ ಚಿಕಿತ್ಸೆ ನೀಡಿ ಆರೈಕೆ ಮಾಡಿ ಮನೆಗೆ ಕಳುಹಿಸಲಾಗುತ್ತಿದೆ.ಈ ಬಗ್ಗೆ ಸಂಬAಧಿಸಿದವರು ಗಮನ ಹರಿಸಬೇಕಿದೆ

ಮೊಬೈಲ್ ಯೂನಿಟ್ ತಾತ್ಕಾಲಿಕ ಸ್ಥಗಿತ

ಮನೆಮನೆಗೆ ತೆರಳಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಆಯುಷ್ ಇಲಾಖೆಯಿಂದ ಮೊಬೈಲ್ ಯೂನಿಟ್ ವ್ಯವಸ್ಥೆಯೂ ಇದೆ.ಪ್ರತಿನಿತ್ಯ ಸುಮಾರು ೬೦ ಮಂದಿ ಇದರಿಂದ ಚಿಕಿತ್ಸೆ ಪಡೆಯುತಿದ್ದರಾದರೂ ರಾಜ್ಯ ಮಟ್ಟದಲ್ಲಿ ಗುತ್ತಿಗೆ ನವೀಕರಣ ಪ್ರಕ್ರಿಯೆ ವಿಳಂಬದಿAದಾಗಿ ಈ ವ್ಯವಸ್ಥೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ವೈದ್ಯರ ಸಲಹೆ ಪಾಲಿಸಬೇಕು

ಆಯುಷ್ ಆಸ್ಪತ್ರೆಯಲ್ಲಿ ಮಧುಮೇಹದಿಂದ ಗ್ಯಾಂಗ್ರಿನ್‌ಗೆ ಒಳಗಾದ ರೋಗಿಯನ್ನು ಕೂಡ ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡಲಾಗಿದೆ. ಇಲ್ಲಿ ನೀಡುವ ಔಷಧಗಳು ದೇಹದಲ್ಲಿ ಕೊಂಚ ನಿಧಾನವಾಗಿ ಕೆಲಸ ಮಾಡುತ್ತಿವೆಯಾದರೂ, ಉತ್ತಮ ಫಲಿತಾಂಶ ಸಿಗುತ್ತದೆ. ಆದರೆ ಚಿಕಿತ್ಸೆ ವೇಳೆ ವೈದ್ಯರು ಸಲಹೆ ನೀಡುವ ಆಹಾರ ಕ್ರಮವನ್ನು ರೋಗಿಗಳು ತಪ್ಪದೆ ಅನುಸರಿಸಬೇಕಾಗುತ್ತದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಸಿ.ರೇಣುಕಾದೇವಿ ತಿಳಿಸಿದ್ದಾರೆ. ವರದಿ : ಉಜ್ವಲ್ ರಂಜಿತ್