ಪೊನ್ನAಪೇಟೆ, ಜು. ೭: ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಸಮೀಪದ ಕುರ್ಚಿ ಗ್ರಾಮದಲ್ಲಿ ಕಾಡಾನೆಯೊಂದು ಕಾರಿಗೆ ತನ್ನ ದಂತದಿAದ ತಿವಿದು ಹಾನಿಗೊಳಿಸಿದ ಘಟನೆ ನಡೆದಿದ್ದು, ಕಾರಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕುರ್ಚಿ ಶ್ರೀಮಂಗಲ ರಸ್ತೆಯಲ್ಲಿರುವ ಅಂಗನವಾಡಿ ಸಮೀಪ ಮಧ್ಯಾಹ್ನ ೧೨.೩೦ ರ ಸಮಯದಲ್ಲಿ ಘಟನೆ ನಡೆದಿದ್ದು, ಗ್ರಾಮಸ್ಥರು ಆತಂಕಗೊAಡಿದ್ದಾರೆ.

ವೀರಾಜಪೇಟೆಯ ಕೊಕ್ಕಲೇರ ಯಶವಂತ್‌ಕುಮಾರ್ ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳ ಸಮೇತ ತಮ್ಮ ಕಾರಿನಲ್ಲಿ ಇರ್ಪು ಗ್ರಾಮದಲ್ಲಿರುವ ತಮ್ಮ ಸಂಬAಧಿ ಬೊಳ್ಳೆರ ವಿಪಿನ್ ಮನೆಗೆ ತೆರಳುತ್ತಿದ್ದ ಸಂದರ್ಭ ಕುರ್ಚಿ ಗ್ರಾಮದ ಅಂಗನವಾಡಿ ಬಳಿ ಕಾರಿನ ಮುಂಭಾಗ ಆನೆಯೊಂದು ಎದುರಾದ ಕಾರಣ ಕಾರು ನಿಲ್ಲಿಸಿದ್ದಾರೆ. ಇದೇ ಸಂದರ್ಭ ಮತ್ತೊಂದು ಆನೆ ಕಾರಿನ ಹಿಂಭಾಗದಿAದ ಬಂದು ಹಿಂಭಾಗದ ಡೋರ್ ಸಮೀಪ ತನ್ನ ದಂತಗಳಿAದ ಗುದ್ದಿದೆ. ಈ ಸಂದರ್ಭ ಹಿಂಭಾಗದ ಸೀಟ್‌ನಲ್ಲಿ ಕುಳಿತಿದ್ದ ಮಕ್ಕಳು ನಿದ್ರಿಸುತ್ತಿದ್ದರು. ಭಯಭೀತರಾದ ದಂಪತಿ ಜೀವ ಕೈಯಲ್ಲಿ ಹಿಡಿದು ಕಾರಿನಲ್ಲಿ ಕುಳಿತ್ತಿದ್ದರು. ನಂತರ ಆನೆ ಅಲ್ಲಿಂದ ತೋಟ ಸೇರಿಕೊಂಡಿದೆ. ಬಳಿಕ ಯಶವಂತ್‌ರವರು ತಮ್ಮ ಕಾರನ್ನ ಚಲಾಯಿಸಿಕೊಂಡು ಸಂಬAಧಿಕರ ಮನೆಗೆ ತೆರಳಿದ್ದಾರೆ.

(ಮೊದಲ ಪುಟದಿಂದ) ಅಲ್ಲಿಂದಲೇ ಕರೆ ಮಾಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಶ್ರೀಮಂಗಲ ಅರಣ್ಯ ವಲಯ ಡಿ.ಆರ್.ಎಫ್.ಓ ನವೀನ್ ಹಾಗೂ ಆರ್‌ಆರ್‌ಟಿ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಕಾಡಾನೆಯಿಂದ ಕಾರಿಗೆ ಉಂಟಾಗಿರುವ ಹಾನಿಗೆ ಕಾರಿನ ದಾಖಲೆಗಳನ್ನು ಪರಿಶೀಲಿಸಿ ಅರಣ್ಯ ಇಲಾಖೆಯಿಂದ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ. -ಚನ್ನನಾಯಕ