ಮಡಿಕೇರಿ, ಜು. ೭: ಯೂತ್ ರೆಡ್‌ಕ್ರಾಸ್ ಸೊಸೈಟಿ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ರಾಷ್ಟಿçÃಯ ವೈದ್ಯಕೀಯ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಸುಂಟಿ ಕೊಪ್ಪದ ವಿಶೇಷ ಸಾಮರ್ಥ್ಯವುಳ್ಳ ಸ್ವಸ್ಥ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರದ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿತ್ತು. ಯೂತ್ ರೆಡ್‌ಕ್ರಾಸ್ ಮತ್ತು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗಳ ಕಾರ್ಯಕ್ರಮ ಅಧಿಕಾರಿ ಡಾ. ಕರುಂಬಯ್ಯ, ಸದಸ್ಯ ಡಾ. ಶಶಾಂಕ್, ಘಟಕದ ವಿದ್ಯಾರ್ಥಿ ಕಾರ್ಯದರ್ಶಿ ಡಾ. ಹರಿ ನಾರಾಯಣ್, ೨೬ ವೈದ್ಯರುಗಳ ತಂಡದೊAದಿಗೆ ಸಾಮಾನ್ಯ ದೈಹಿಕ, ವ್ಯವಸ್ಥಿತ ಪರೀಕ್ಷೆ, ದೃಷ್ಟಿ ಮತ್ತು ಶ್ರವಣ ಪರೀಕ್ಷೆಗಳು ಮತ್ತು ಮನರಂಜನಾ ಚಟುವಟಿಕೆ ಗಳನ್ನು ನಡೆಸಲಾಯಿತು. ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಕೊಡಗು ಅಧ್ಯಕ್ಷ ಬಿ.ಕೆ. ರವೀಂದ್ರ ರೈ, ಯೂತ್ ರೆಡ್‌ಕ್ರಾಸ್ ಸೊಸೈಟಿ ಅಧ್ಯಕ್ಷ ಎಂ. ಧನಂಜಯ, ಯೂತ್ ರೆಡ್‌ಕ್ರಾಸ್ ಕಾರ್ಯಕ್ರಮದ ಸಂಯೋಜಕ ಎಂ.ಆರ್. ಜಗದೀಶ್, ನ್ಯಾಷನಲ್ ಮೆಡಿಕೋಸ್ ಆರ್ಗನೈಸೇಷನ್ ಕರ್ನಾಟಕ ದಕ್ಷಿಣ ವಲಯ ಸಹ ಪ್ರಮುಖ ಡಾ. ಹರಿನಾರಾಯಣ್, ಸ್ವಸ್ಥ ನಿರ್ದೇಶಕಿ ಆರತಿ ಸೋಮಯ್ಯ ಹಾಜರಿದ್ದರು. ಎನ್‌ಎಂಒ ತಂಡವು ಸ್ವಸ್ಥದ ವಿಶೇಷ ವಿದ್ಯಾರ್ಥಿಗಳಿಗೆ ಸ್ಟೇಷನರಿ ಕಿಟ್‌ಗಳನ್ನು ವಿತರಿಸಿತು.