ನಾಪೋಕ್ಲು, ಜು. ೭: ಕರ್ನಾಟಕ ಅರೆಭಾಷೆ ಅಕಾಡೆಮಿ ಸದಸ್ಯ ಸ್ಥಾನವನ್ನು ನಿರಾಕರಿಸುವದಾಗಿ ನೂತನ ಸದಸ್ಯ ಸೂದನ ಈರಪ್ಪ ಹೇಳಿದ್ದಾರೆ.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಗೆ ಲೋಕಸಭಾ ಚುನಾವಣೆಗೆ ಮುನ್ನ ನಡೆದಿದ್ದ ಆಯ್ಕೆ ಸಂದರ್ಭದಲ್ಲಿ ಕೊಡಗಿನವರಿಗೆ ಅವಕಾಶ ನೀಡಿಲ್ಲವೆಂದು ಆಕ್ರೋಶ ವ್ಯಕ್ತವಾಗಿತ್ತು. ಚುನಾವಣಾ ಸಂದರ್ಭದಲ್ಲಿ ಈ ಪ್ರಕ್ರಿಯೆಯಾದ ಕಾರಣ ಅಲ್ಲಿಗೆ ತಣ್ಣಗಾಗಿತ್ತು. ಇತ್ತೀಚೆಗೆ ನೂತನ ಅಧ್ಯಕ್ಷರಾದ ಸದಾನಂದ ಮಾವಜಿ ಮತ್ತು ಉಳಿದ ಸದಸ್ಯರು ಅಧಿಕಾರ ಸ್ವೀಕರಿಸಿದ್ದರು. ಇದೀಗ ಶನಿವಾರ ಸೂದನ ಈರಪ್ಪ ಪಾಲೂರು, ಲೋಕೇಶ್ ಉರಬೈಲ್ ಮತ್ತು ಪಿ.ಯಂ ಸಂದೀಪ್

ಅಕಾಡೆಮಿ ಸದಸ್ಯತ್ವ : ಸೂದನ ಈರಪ್ಪ ನಿರಾಕರಣೆ

(ಮೊದಲ ಪುಟದಿಂದ) ಈ ಮೂವರನ್ನು ಕೊಡಗಿನಿಂದ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಈ ಬಗ್ಗೆ ನೂತನ ಸದಸ್ಯ ಸೂದನ ಈರಪ್ಪ ಸ್ಥಳೀಯ ಕಾಂಗ್ರೆಸ್ ಶಾಸಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎರಡು ಜನ ಕಾಂಗ್ರೆಸ್ ಶಾಸಕರಿದ್ದು ಕೊಡಗು ಭಾಗವನ್ನು ಕಡೆಗಣಿಸಿ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಮುಖ ಅವಕಾಶ ನೀಡಲಾಗಿದ್ದು, ಅರೆಭಾಷೆ ಅಕಾಡೆಮಿ ತೆಕ್ಕಿಲ್ ಮತ್ತು ಯು.ಟಿ. ಖಾದರ್ ಅವರ ಪ್ರಭಾವಕ್ಕೆ ಒಳಗಾಗಿದೆ. ಈ ಆಡಳಿತ ಮಂಡಳಿಯಲ್ಲಿ ನಾನಿರುವುದಿಲ್ಲ ವೆಂದು ಸೂದನ ಈರಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಮ್ಮ ನಿಲುವು ವ್ಯಕ್ತಪಡಿಸಿದ್ದಾರೆ.