ಮಡಿಕೇರಿ, ಜು. ೭: ಇನ್ನರ್ ವ್ಹೀಲ್ ಸಂಸ್ಥೆಯು ಅರ್ಥಪೂರ್ಣ ಶತಮಾನ ಆಚರಿಸಿದ್ದು, ಈ ಸಂದರ್ಭ ಜಿಲ್ಲಾ ಚೇರ್‌ಪರ್ಸನ್ ಆಗಿ ನೂರಾರು ಯೋಜನೆಗಳನ್ನು ಕೈಗೊಂಡ ತೃಪ್ತಿ ತನ್ನದು ಎಂದು ನಿರ್ಗಮಿತ ಚೇರ್‌ಪರ್ಸನ್ ಪೂರ್ಣಿಮಾ ರವಿ ನುಡಿದರು.

ನಿನ್ನೆ ದಿನ ಮಡಿಕೇರಿ ಇನ್ನರ್ ವ್ಹೀಲ್ ಅಧ್ಯಕ್ಷೆಯಾಗಿ ಆಗ್ನೇಸ್ ಮುತ್ತಣ್ಣ ಮತ್ತು ಕಾರ್ಯದರ್ಶಿಯಾಗಿ ರಶ್ಮಿ ಪ್ರವೀಣ್, ಖಜಾಂಚಿಯಾಗಿ ದಿವ್ಯ ಮುತ್ತಣ್ಣ ಅವರುಗಳಿಗೆ ಅಧಿಕಾರ ಪದಗ್ರಹಣ ನೆರವೇರಿಸಿ ಅವರು ಮಾತನಾಡಿದರು. ಜಿಲ್ಲಾಮಟ್ಟದಲ್ಲಿ ಹೆಣ್ಣುಮಕ್ಕಳಿಗೆ ೧೦೪ ಸೈಕಲ್‌ಗಳನ್ನು ವಿತರಿಸಿದಲ್ಲದೆ ಸುಮಾರು ಇಪ್ಪತ್ತೇಳು ಸಾವಿರ ಸಣ್ಣ ಹಾಗೂ ದೊಡ್ಡ ಯೋಜನೆಗಳನ್ನು ಕೈಗೊಂಡಿರುವು ದಾಗಿ ಹೇಳಿದರು. ಈ ಬಾರಿ ಇನ್ನರ್‌ವ್ಹೀಲ್ ಅಂರ‍್ರಾಷ್ಟಿçÃಯ ಅಧ್ಯಕ್ಷೆ, ಕೊಲ್ಕತ್ತಾ ಮೂಲದ ಮಮತಾ ಗುಪ್ತಾ ‘‘ಹಾರ್ಟ್ ಬೀಟ್ ಆಫ್ ಹ್ಯೂಮಾನಿಟಿ’’ ಎಂಬ ಮೂಲಮಂತ್ರ ನೀಡಿರುವುದಾಗಿ ಹೇಳಿದರು.

ಸಮಾರಂಭದಲ್ಲಿ ಪೌರಕಾರ್ಮಿಕ ರಾದ ಲಕ್ಷಿö್ಮ ಹಾಗೂ ಲಕ್ಷö್ಮಮ್ಮ ಅವರನ್ನು ಸನ್ಮಾನಿಸಲಾಯಿತು. ನಿರ್ಗಮಿತ ಅಧ್ಯಕ್ಷೆ ಕಣ್ಣು ದೇವಯ್ಯ, ಅವರ ಪುತ್ರಿ - ಕಾರ್ಯದರ್ಶಿ ದಿವ್ಯಾ ಮುತ್ತಣ್ಣ, ನೂತನ ಕಾರ್ಯದರ್ಶಿ ರಶ್ಮಿ ಪ್ರವೀಣ್ ಅವರುಗಳು ವೇದಿಕೆಯಲ್ಲಿದ್ದರು.

ಡಾ|| ರೇಣುಕಾ ಪ್ರಾರ್ಥಿಸಿ, ಶಫಾಲಿ ರೈ, ರಾಧಿಕಾ ವಿಶ್ವನಾಥ್, ಗುಲಾಬಿ ಜನಾರ್ಧನ್ ಪರಿಚಯ ಮಾಡಿದರು. ಲತಾ ಚೆಂಗಪ್ಪ ಧ್ಯೇಯ ವಾಚಿಸಿದರು. ಬೊಳ್ಳು ಮೇದಪ್ಪ ವಂದನಾರ್ಪಣೆ ಮಾಡಿದರು. ರೋಟರಿ ಅಧ್ಯಕ್ಷ ಸುದಯ್ ನಾಣಯ್ಯ ‘ಗಿರಿಶೃಂಗ’ ಬುಲೆಟಿನ್ ಬಿಡುಗಡೆ ಮಾಡಿದರು.