ಮಡಿಕೇರಿ, ಜು. ೭: ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ ನೆರವಾಗುವ ಪ್ರಮುಖ ಧ್ಯೇಯದೊಂದಿಗೆ ಕೊಡಗು ಪತ್ರಿಕಾ ಭವನ ಟ್ರಸ್ಟ್ನಿಂದ ಜಿಲ್ಲಾ ವ್ಯಾಪ್ತಿಯ ಪತ್ರಕರ್ತರ ಮಕ್ಕಳು ಹಾಗೂ ಸಾರ್ವಜನಿಕ ಮನವಿಗಳನ್ನು ಪುರಸ್ಕರಿಸಿ ಒಟ್ಟು ೩೨ ಮಕ್ಕಳಿಗೆ ವಿದ್ಯಾನಿಧಿಯನ್ನು ವಿತರಿಸಲಾಯಿತು.

ನಗರದ ರೆಡ್‌ಬ್ರಿಕ್ಸ್ನ ಸತ್ಕಾರ ಸಭಾಂಗಣದಲ್ಲಿ ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ. ಕೇಶವ ಕಾಮತ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿತ ವಿದ್ಯಾನಿಧಿ ವಿತರಣಾ ಕಾರ್ಯ ಕ್ರಮದಲ್ಲಿ ಪತ್ರಕರ್ತರ ೨೨ ಮಕ್ಕಳು ಹಾಗೂ ನೆರವು ಬಯಸಿದ್ದ ಇತರೆ ೧೦ ವಿದ್ಯಾರ್ಥಿಗಳಿಗೆ ತಲಾ ೫ ಸಾವಿರ ರೂ.ಗÀಳಂತೆ ಒಟ್ಟು ೧.೬೦ ಲಕ್ಷ ರೂ. ವಿದ್ಯಾನಿಧಿಯನ್ನು ವಿತರಿಸಲಾಯಿತು.

ಕೇಶವ ಕಾಮತ್ ಒಳಗೊಂಡAತೆ ಟ್ರಸ್ಟಿಗಳು ಜ್ಯೋತಿಯನ್ನು ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಟ್ರಸ್ಟಿ ಟಿ.ಪಿ. ರಮೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳ ಶಿಕ್ಷಣಕ್ಕೆ ನೆರವು ಮತ್ತು ಪ್ರೋತ್ಸಾಹ ನೀಡಬೇಕೆನ್ನುವ ಚಿಂತನೆಯಡಿ ವಿದ್ಯಾನಿಧಿಯ ಮೂಲಕ ಮಕ್ಕಳ ಶಿಕ್ಷಣಕ್ಕೆ ನೆರವಾಗಲು ಟ್ರಸ್ಟ್ ನಿರ್ಧರಿಸಿದ್ದು, ಮುಂಬರುವ ದಿನಗಳಲ್ಲಿ ಈ

(ಮೊದಲ ಪುಟದಿಂದ) ಕಾರ್ಯವನ್ನು ಮತ್ತಷ್ಟು ವ್ಯಾಪಕವಾಗಿ ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು. ಪತ್ರಿಕಾ ಕ್ಷೇತ್ರದಲ್ಲಿ ತೊಡಗಿಸಿ ಕೊಂಡು ಕಾರ್ಯ ನಿರ್ವಹಿಸಿಕೊಂಡು ಬರುತ್ತಿರುವ ಜಿಲ್ಲಾ ವ್ಯಾಪ್ತಿಯ ಪತ್ರಕರ್ತರಿಗೆ, ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುವುದು ವಿದ್ಯಾನಿಧಿಯ ಪ್ರಮುಖ ಉದ್ದೇಶ. ವಿದ್ಯಾನಿಧಿ ವಿತರಣೆಯಲ್ಲಿ ಬಡವ ಬಲ್ಲಿದನೆನ್ನುವ ಯಾವುದೇ ತಾರತಮ್ಯ ಭಾವವಿಲ್ಲವೆಂದು ಸ್ಪಷ್ಟಪಡಿಸಿ, ಇದೊಂದು ಪತ್ರಕರ್ತರ ಕುಟುಂಬದ ಕಾರ್ಯಕ್ರಮವೇ ಆಗಿದ್ದು, ನಾವೆಲ್ಲ ಸೌಹಾರ್ದ ಭಾವದಿಂದ ಒಂದಾಗಿ ಮಕ್ಕಳ ಶಿಕ್ಷಣಕ್ಕೆ ಬೆನ್ನೆಲುಬಾಗಿ ನಿಲ್ಲಬೇಕೆನ್ನುವ ಆಶಯ ವ್ಯಕ್ತಪಡಿಸಿದರು. ಟ್ರಸ್ಟಿ ಹಾಗೂ ‘ಶಕ್ತಿ’ ಸಂಪಾದಕ ಜಿ. ಚಿದ್ವಿಲಾಸ್ ಮಾತನಾಡಿ, ಪತ್ರ‍್ರಿಕಾ ಭವನ ಟ್ರಸ್ಟ್ನ ರಚನೆಯ ಸಂದರ್ಭವೇ ಅದಕ್ಕೆ ಬರುವ ಆದಾಯದಿಂದ ಪತ್ರಕರ್ತರು ಮತ್ತು ಸಾರ್ವಜನಿಕರ ಹಿತಕ್ಕಾಗಿ ಬಳಕೆ ಮಾಡಬೇಕೆನ್ನುವ ಮೂಲ ಚಿಂತನೆಯನ್ನು ಹೊಂದಲಾಗಿತ್ತು. ಮುಂಬರುವ ದಿನಗಳಲ್ಲಿ ವಿದ್ಯಾನಿಧಿಯ ಮೂಲ ಮೊತ್ತವನ್ನು ಹೆಚ್ಚಿಸಿಕೊಳ್ಳುವ ಮೂಲಕ ಮತ್ತಷ್ಟು ನೆರವನ್ನು ನೀಡಲು ಇಂದಿನ ಕಾರ್ಯಕ್ರಮ ಪ್ರೇರಣೆಯನ್ನು ನೀಡಿದೆಯೆಂದು ನುಡಿದರು.

ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ಬೆಂಬಲ ನೀಡುವ ಈ ವಿದ್ಯಾನಿಧಿಯ ಸದುಪಯೋಗ ಪಡೆಯುವುದಕ್ಕೆ ಯಾವುದೇ ಜಾತಿ, ಮತ, ಧರ್ಮಗಳ ಭೇದವಿಲ್ಲ. ನಾವೆಲ್ಲ ಮನುಷ್ಯರೇ ಎನ್ನುವ ಉದಾತ್ತ ಚಿಂತನೆಯಡಿ, ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಒದಗಿಸಲು ಸಾಧ್ಯವಾದ ನೆರವನ್ನು ಒದಗಿಸುವ ಮೂಲಕ ಅವರನ್ನು ರಾಷ್ಟçದ ಸತ್ಪçಜೆಗಳನ್ನಾಗಿ ರೂಪಿಸುವುದಷ್ಟೆ ನಮ್ಮೆಲ್ಲರ ಮೂಲ ಸಂಕಲ್ಪವಾಗಿದೆಯೆAದು ಹೇಳಿದರು.

ಸಭಾಧ್ಯಕ್ಷತೆ ವಹಿಸಿದ್ದ ಕೇಶವ ಕಾಮತ್ ಮಾತನಾಡಿ, ಕೊಡಗು ಪತ್ರಿಕಾ ಭವನ ಟ್ರಸ್ಟ್ನ ವಿದ್ಯಾನಿಧಿಯ ಮೂಲಕ ನೆರವು ಪಡೆದವರು, ಮುಂಬರುವ ದಿನಗಳಲ್ಲಿ ತಮ್ಮ ಶಿಕ್ಷಣಕ್ಕೆ ಸಮಾಜ ತಮಗೆ ನೆರವಾಗಿದೆ ತಾನು ಸಹ ಸಮಾಜಕ್ಕೆ ಕೊಡುಗೆಯನ್ನು ನೀಡಬೇಕೆನ್ನುವ ಉದಾತ್ತ ಚಿಂತನೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನಿಡಿದರು.

ವಿದ್ಯಾನಿಧಿ ವಿತರಣೆ: ವಿದ್ಯಾನಿಧಿಯನ್ನು ಇದೇ ಸಂದರ್ಭ ಮಕ್ಕಳಿಗೆ ವಿತರಿಸಿ ಪ್ರೋತ್ಸಾಹಿಸಲಾಯಿತು. ಇದೇ ಸಂದರ್ಭ ನೆರವನ್ನು ಪಡೆದುಕೊಂಡ ಮಕ್ಕಳ ಪೋಷಕರು ಹಾಗೂ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರಳೀಧರ್, ಶ್ರೀಧರ ನೆಲ್ಲಿತ್ತಾಯ, ಉಷಾ ಪ್ರೀತಂ ಮಾತನಾಡಿ ವಿದ್ಯಾನಿಧಿಯ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದರು.

ಕಾರ್ಯಕ್ರಮದ ನಡುವೆ ಜಿ. ಚಿದ್ವಿಲಾಸ್, ವಿದ್ಯಾರ್ಥಿನಿ ಕೀರ್ತಿ, ಎಸ್.ಎ. ಮುರಳೀಧರ್ ಹಾಡುವ ಮೂಲಕ ಸಭಿಕರ ಮನಗೆದ್ದರು.

ಟ್ರಸ್ಟಿ ಮುಲ್ಲೇಂಗಡ ಮಧೋಶ್ ಪೂವಯ್ಯ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ತಾನ್ಯ ಮುರಳೀಧರ್ ಪ್ರಾರ್ಥಿಸಿ, ಟ್ರ‍್ರಸ್ಟಿ ಅನಿಲ್ ಎಚ್.ಟಿ. ಕಾರ್ಯಕ್ರಮ ನಿರೂಪಿಸಿದರೆ, ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಎಸ್.ಜಿ. ಉಮೇಶ್ ಸ್ವಾಗತಿಸಿದರು. ಖಜಾಂಚಿ ಕೆ. ತಿಮ್ಮಪ್ಪ ವಂದಿಸಿದರು.