ಪೊನ್ನAಪೇಟೆ, ಜು . ೭: ಪೊನ್ನಂಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೪ ನೇ ವಾರ್ಡ್ನ ಟಿ.ಆರ್. ರಸ್ತೆಯಲ್ಲಿರುವ (ತೊರೆಬೀದಿ) ಕಟ್ಟಡವೊಂದು ಶಿಥಿಲಾವಸ್ಥೆಯಲ್ಲಿದ್ದು, ಕಟ್ಟಡ ಒಂದು ಭಾಗ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಕಳೆದ ಎರಡು ವರ್ಷಗಳ ಹಿಂದೆ ಮಳೆಗಾಲದಲ್ಲಿ ಕಟ್ಟಡದ ಗೋಡೆಯೊಂದು ಕುಸಿದು ಬಿದ್ದಿತ್ತು. ಆದರೂ ಕೂಡ ಕಟ್ಟಡದ ಮಾಲೀಕರು ಅದನ್ನು ಸರಿ ಪಡಿಸುವ ಗೋಜಿಗೆ ಹೋಗಿಲ್ಲ. ಶಿಥಿಲಾವಸ್ಥೆಯಲ್ಲಿರುವ ಕಟ್ಟಡದ ಮತ್ತೊಂದು ಕೊಠಡಿಯಲ್ಲಿ ಬಾಡಿಗೆಗೆ ಜನರು ವಾಸವಾಗಿದ್ದಾರೆ. ಈ ಕಟ್ಟಡಕ್ಕೆ ಹೊಂದಿಕೊAಡAತೆ ಇರುವ ಮನೆಯಲ್ಲಿಯೂ ಕೂಡ ಜನ ವಾಸವಾಗಿದ್ದರೆ, ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿದ್ದು, ಕುಸಿದು ಬೀಳುವ ಸ್ಥಿತಿಯಲ್ಲಿರುವ ಕಟ್ಟಡದ ಸಮೀಪದಲ್ಲಿ ವಿದ್ಯುತ್ ಪರಿವರ್ತಕ ಕೂಡ ಇದ್ದು, ಕಟ್ಟಡ ಅದರ ಮೇಲೆ ಬಿದ್ದಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಕಟ್ಟಡಕ್ಕೆ ಹೊಂದಿಕೊAಡAತೆ ಇರುವ ಮನೆಗಳಲ್ಲಿ ಜನರು ವಾಸವಿರುವ ಕಾರಣ ಸಾವು ನೋವು ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ಅಪಾಯ ಸಂಭವಿಸುವ ಮುನ್ನ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಎಚ್ಚೆತ್ತುಕೊಂಡು ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವುದೇ ಎಂಬುದನ್ನು ಕಾದು ನೋಡಬೇಕಿದೆ..? - ಚನ್ನನಾಯಕ