ಸೋಮವಾರಪೇಟೆ, ಜು. ೮ : ಸಮೀಪದ ಗಾಂಧಿನಗರದಲ್ಲಿರುವ ಶ್ರೀ ದೊಡ್ಡ ಮಾರಿಯಮ್ಮ ದೇವಾಲಯದಲ್ಲಿ ಆಷಾಢ ಮಾಸದ ಪೂಜೆ ಆರಂಭ

ಗೊಂಡಿದ್ದು, ಆಗಸ್ಟ್ ೨ ರವರೆಗೆ ಪ್ರತಿ ಮಂಗಳವಾರ ಮತ್ತು ಶುಕ್ರವಾರ ವಿಶೇಷ ಪೂಜೆ ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಗಂಗಾಧರ್ ತಿಳಿಸಿದ್ದಾರೆ.

ಪ್ರತಿ ಮಂಗಳವಾರ ಮತ್ತು ಶುಕ್ರವಾರ ಬೆಳಿಗ್ಗೆ ದೇವರಿಗೆ ಫಲಪಂಚಾಮೃತ ಅಭಿಷೇಕ ಸೇವೆ, ವಿಶೇಷ ದ್ರವ್ಯಗಳಿಂದ ಅಲಂಕಾರ ಸೇವೆ, ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗವಿರುತ್ತದೆ. ಆಷಾಢÀ ಮಾಸದ ಪ್ರತಿ ಶುಕ್ರವಾರ ಪೂರ್ವಾಹ್ನ ೧೦.೩೦ ರಿಂದ ೧೨ ರವರೆಗಿನ ರಾಹುಕಾಲದಲ್ಲಿ ನಿಂಬೆಹಣ್ಣಿನ ದೀಪ ಆರಾಧನೆ ಮತ್ತು ಸಾಮೂಹಿಕ ಕುಂಕುಮಾರ್ಚನೆ ನಡೆಯಲಿದೆ. ಆಗಸ್ಟ್ ೨ ರಂದು ಆಷಾಢ ಮಾಸದ ಕೊನೆಯ ದಿನದ ಪೂಜೆ ಅಂಗವಾಗಿ ಅಮ್ಮನವರ ಸನ್ನಿಧಾನದಲ್ಲಿ ಸಂಜೆ ೬ ಗಂಟೆಗೆ ರಂಗಪೂಜೆ, ೭ ಗಂಟೆಗೆ ಮಹಾ ಮಂಗಳಾರತಿ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ ಎಂದು ಗಂಗಾಧರ್ ಮಾಹಿತಿ ನೀಡಿದ್ದಾರೆ.