(ಕಾಯಪAಡ ಶಶಿ ಸೋಮಯ್ಯ)

ಮಡಿಕೇರಿ, ಜು. ೮: ಇಂದಿನ ಸಮಾಜದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಡಾಕ್ಟರ್, ಇಂಜಿನಿಯರ್, ಐಎಎಸ್, ವಕೀಲರು ಹೀಗೆ... ಬೇರೆ ಬೇರೆ ಕ್ಷೇತ್ರದತ್ತ ತೊಡಗಿಸಲು ಹೆಚ್ಚು ಆಸಕ್ತಿ ತೋರುತ್ತಾರೆ. ಎರಡು - ಮೂರು ಮಕ್ಕಳಿದ್ದಲ್ಲಿ ಒಬ್ಬೊಬ್ಬರು ಒಂದೊAದು ಕ್ಷೇತ್ರದಲ್ಲಿ ಮುಂದೆ ಬರಲಿ ಎಂಬ ನಿಟ್ಟಿನಲ್ಲೇ ಹೆಚ್ಚಿನ ಒಲವು ಸಹಜ.

ಆದರೆ ಇಲ್ಲೊಬ್ಬರು ವ್ಯಕ್ತಿ ಇದಕ್ಕೆ ಹೊರತಾಗಿದ್ದಾರೆ. ತಮ್ಮ ಮೂವರು ಗಂಡು ಮಕ್ಕಳನ್ನೂ ದೇಶ ಸೇವೆಗೆ ಮುಡಿಪಾಗಿಟ್ಟವರು ಇವರು. ಅಷ್ಟಕ್ಕೂ ಇವರೂ ಸಹ ದೇಶಸೇವೆಗೈದವರೇ ಎಂಬುದು ಮತ್ತೊಂದು ವಿಶೇಷ. ಈ ಸೇನಾ ಕುಟುಂಬ ತಮ್ಮ ಆಯ್ಕೆಯ ಈ ಕ್ಷೇತ್ರದ ಬಗ್ಗೆ ಅಪಾರ ಗೌರವವನ್ನೂ ಹೊಂದಿದೆ. ಅನಿವಾರ್ಯತೆ ಎಂಬAತೆಯೂ ಸೇನೆಗೆ ಸೇರಲಿಲ್ಲ. ಬದಲಿಗೆ ಈ ಕ್ಷೇತ್ರವನ್ನೇ ಬಯಸಿ... ಇದರತ್ತಲೇ ಆಸಕ್ತಿ ತೋರಿ ಅಗತ್ಯ ಪ್ರಯತ್ನವನ್ನೂ ನಡೆಸಿ ಸೇರ್ಪಡೆಗೊಂಡಿದ್ದಾರೆ ಎಂಬುದು ಹೆಮ್ಮೆಯ ವಿಚಾರ.

ದಕ್ಷಿಣ ಕೊಡಗಿನ ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿಗೆ ಸೇರಿದ ತಾವಳಗೇರಿ ಗ್ರಾಮದ ಕುಟುಂಬವೊAದರ ಕಥೆಯಿದು. ಅಲ್ಲಿನ ನಿವಾಸಿ ದಿವಂಗತ ಮಾಂಗುಟ್ಟಿರ ಸೋಮಯ್ಯ ಅವರು ಈ ಹಿಂದೆ ಕೂರ್ಗ್ ರೆಜಿಮೆಂಟ್‌ನಲ್ಲಿ ಕರ್ತವ್ಯಕ್ಕೆ ಸೇರಿದ್ದರು. ಆದರೆ ಇವರು ಕಾರಣಾಂತರಗಳಿAದ ಮುಂದುವರಿಯಲಾಗದೆ ಹಿಂತಿರುಗಿದ್ದರು. ಇವರ ಕಿರಿಯ ಪುತ್ರ ಉತ್ತಪ್ಪ ಅವರು, ನಂತರದಲ್ಲಿ ಬಿಎಸ್‌ಎಫ್‌ಗೆ ಸೇರಿ ದೇಶದ ವಿವಿಧೆಡೆ ಸುಮಾರು ೨೦ ವರ್ಷಗಳಿಗೂ ಅಧಿಕ ಸಮಯ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಇವರು ತಮ್ಮ ಮೂವರು ಗಂಡು ಮಕ್ಕಳನ್ನೂ ಸೇನೆಗೇ ಸೇರಿಸಿದ್ದಾರೆ. ಸ್ವತಃ ಯೋಧರಾಗಿದ್ದ ಉತ್ತಪ್ಪ ಮಕ್ಕಳನ್ನು ಚಿಕ್ಕಪ್ರಾಯದಲ್ಲೇ ಸೇನೆಯತ್ತ ಆಕರ್ಷಿಸಲು ಪ್ರಯತ್ನ ನಡೆಸಿದ್ದು, ಇದರಲ್ಲಿ ಯಶಸ್ವಿಯೂ ಆಗಿದ್ದಾರೆ. ನಿವೃತ್ತಿ ಬಳಿಕ ಮಕ್ಕಳಿಗೆ ಮನೆಯಲ್ಲೇ ಪೂರ್ವ ತರಬೇತಿಯನ್ನೂ ನೀಡಿದ್ದು (ದೈಹಿಕ ಕ್ಷಮತೆ) ಸೇನೆ ಸೇರ್ಪಡೆಗೆ ನೆರವಾಗಿದೆ. ‘ಶಾಲಾ ದಿನಗಳಲ್ಲೇ ನನಗೆ ಸೇನೆ ಎಂದರೆ ಆಸಕ್ತಿ ಇತ್ತು. ಇದರಂತೆ ಬಿಎಸ್‌ಎಫ್‌ಗೆ ಸೇರಿ ಸೇವೆ ಸಲ್ಲಿಸಿದ್ದೇನೆ. ದೇಶಕ್ಕಾಗಿ ಕರ್ತವ್ಯ ನಿರ್ವಹಿಸುವುದು ಸಂತಸ ಹಾಗೂ ಹೆಮ್ಮೆಯ ವಿಚಾರ. ಇದರಂತೆ ಮಕ್ಕಳಿಗೂ ಪ್ರೇರಣೆ ನೀಡಿದ್ದಾಗಿ’ ಉತ್ತಪ್ಪ ಅವರು ‘ಶಕ್ತಿ’ಯೊಂದಿಗೆ ಹರ್ಷ ವ್ಯಕ್ತಪಡಿಸಿದರು.

ಇವರ ಹಿರಿಯ ಪುತ್ರ ಎಂ.ಯು. ದಿಲೀಪ್ ಮೆಡ್ರಾಸ್ ರೆಜಿಮೆಂಟ್ (ಎಂಆರ್‌ಸಿ)ಗೆ ಸೇರಿ ೧೭ ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ಇದೀಗ ಹಾಸನದ ಕೆಎಂಎಫ್‌ನಲ್ಲಿ ಕೆಲಸದಲ್ಲಿದ್ದಾರೆ. ಹಿರಿಯ ಸಹೋದರನ ಹಾದಿಯಲ್ಲೇ ತಮ್ಮಂದಿಯರಾದ ಸಂತೋಷ್ ಹಾಗೂ ನಿಶಾಂತ್ ಕೂಡ ಎಂಆರ್‌ಸಿಗೆ ಸೇರಿದ್ದಾರೆ. ಸಂತೋಷ್ ೧೩ ವರ್ಷ ಹಾಗೂ ನಿಶಾಂತ್ ೧೧ ವರ್ಷ ಕೆಲಸ ನಿರ್ವಹಿಸಿದ್ದು, ಈಗಲೂ ಸೇನೆಯಲ್ಲಿ ಮುಂದುವರೆದಿದ್ದಾರೆ.

ಲೆಬನಾನ್‌ಗೆ ಸಹೋದರರ ಪಯಣ

ಇದೀಗ ಕರ್ತವ್ಯದ ಹಾದಿ ಯಲ್ಲಿ ಸಂತೋಷ್ ಹಾಗೂ ನಿಶಾಂತ್ ಸಹೋದರರು ಇತ್ತೀಚೆಗೆ ಒಟ್ಟಿಗೆ ಲೆಬನಾನ್‌ಗೆ ತೆರಳಿರುವುದು ವಿಶೇಷವಾಗಿದೆ. ಇಬ್ಬರೂ ಎಂಆರ್‌ಸಿಯಲ್ಲೇ ಇದ್ದರೂ ಬೇರೆ-ಬೇರೆ ಬೆಟಾಲಿಯನ್‌ನವರು. ಒಬ್ಬರು ೭ನೇ ಮೆಡ್ರಾಸ್ ಹಾಗೂ ಮತ್ತೊಬ್ಬರು ೨೬ನೇ ಮೆಡ್ರಾಸ್ ರೆಜಿಮೆಂಟ್‌ನಲ್ಲಿದ್ದಾರೆ. ಆದರೆ ಸುಯೋಗ ಎಂಬAತೆ ಸಿಪಾಯಿ ಆಗಿರುವ ಸಂತೋಷ್ ಹಾಗೂ ನಾಯಕ್ ಆಗಿರುವ ನಿಶಾಂತ್ ಇದೀಗ ಲೆಬನಾನ್‌ಗೆ ತೆರಳಿರುವ ಭಾರತೀಯ ಯೋಧರ ಯೂನಿಟ್‌ನಲ್ಲಿ ಒಟ್ಟಿಗೇ ತೆರಳುವ ಅವಕಾಶ ಲಭಿಸಿದೆ. ಈ ಬಗ್ಗೆ ತಂದೆ ಉತ್ತಪ್ಪ ಹಾಗೂ ತಾಯಿ ಬಿ.ಯು. ಸರೋಜ ಅವರಿಗೆ ಅಪಾರ ಹೆಮ್ಮೆಯಿದೆ. ಸಂತೋಷ್ ಅವರ ಪತ್ನಿ ಲಿಶಾ ಹಾಗೂ ನಿಶಾಂತ್ ಅವರ ಪತ್ನಿ ದರ್ಶಿನಿ. ಅವರುಗಳು ತಮ್ಮ ಗಂಡAದಿರ ಬಗ್ಗೆ, ಸೇನೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಟಿ. ಶೆಟ್ಟಿಗೇರಿಯರಾದ ಮಾಜಿ ಸೈನಿಕ ಉತ್ತಪ್ಪ ಅವರ ಸಹಪಾಠಿ ಅಪ್ಪಚಂಗಡ ಮೋಟಯ್ಯ ಅವರೂ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಒಂದೇ ಸಂಸಾರದವರಾಗಿ ಅಪ್ಪ, ಮಕ್ಕಳೆಲ್ಲರೂ ದೇಶ ಸೇವೆಯಂತಹ ಮಹತ್ವದ ಜವಾಬ್ದಾರಿ ನಿರ್ವಹಿಸುವುದು ಇಂದಿನ ದಿನಗಳಲ್ಲಂತೂ ಅಪರೂಪದ ವಿಚಾರವಾಗಿದ್ದು, ಇತರರಿಗೆ ಪ್ರೇರಣೆಯೂ ಆಗಿದೆ. ಇವರುಗಳಿಗೊಂದು ಸಲಾಂ.