ಶ್ರೀಮAಗಲ, ಜು. ೮: ಆಚರಣೆ ಗಳನ್ನು ಮಾಡದೇ ನಾವು ಹೇಳಿ ಕೊಡುವುದಕ್ಕಿಂತ ನಮ್ಮ ನಡೆಯನ್ನು ನೋಡಿ ಮಕ್ಕಳು ಕಲಿಯುವುದು ಹೆಚ್ಚು. ಆದ್ದರಿಂದ ನಮ್ಮ ಸಂಸ್ಕೃತಿ, ಸಂಸ್ಕಾರ, ಧಾರ್ಮಿಕ ಪದ್ಧತಿ, ಹಬ್ಬಗಳ ಆಚರಣೆಗಳಲ್ಲಿ ನಮ್ಮ ನಡೆಯನ್ನು ನೋಡಿ, ಮಕ್ಕಳು ಅನುಕರಣೆ ಮಾಡು ತ್ತಾರೆ ಎಂದು ಗೋಣಿಕೊಪ್ಪ ಕಾವೇರಿ ಕಾಲೇಜು ಸಹಾಯಕ ಪ್ರಾಧ್ಯಾಪಕರಾದ ಡಾ. ಮುಲ್ಲೇಂಗಡ ರೇವತಿ ಪೂವಯ್ಯ ಅಭಿಮತ ವ್ಯಕ್ತಪಡಿಸಿದರು.

ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಪೊನ್ನಂಪೇಟೆ ಕೊಡವ ಸಮಾಜ ಹಾಗೂ ಪೊಮ್ಮಕ್ಕಡ ಕೂಟ ಆಯೋಜಿಸಿದ್ದ ನಡೆದ ‘ಕೊಡವಾಮೆ ಬೆಳೆಸುವಲ್ಲಿ ಕೊಡವ ಮಹಿಳೆಯ ಜವಾಬ್ದಾರಿ’ ವಿಷಯದ ವಿಚಾರಗೋಷ್ಠಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ವಿಚಾರ ಮಂಡಿಸಿದರು.

ತಾಯಿ ಮಕ್ಕಳ ಮೊದಲ ಗುರುವಾಗಿದ್ದು ಕೊಡವ ಸಂಸ್ಕೃತಿ ಸಂಸ್ಕಾರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮನೆಯಲ್ಲಿಯೇ ಕೊಡವ ಭಾಷೆಯನ್ನು ಮಕ್ಕಳಿಗೆ ಕಲಿಸಬೇಕು. ತಾಯಿ-ತಂದೆ ಕೊಡವ ಭಾಷೆಯಲ್ಲಿ ಮನೆಯಲ್ಲಿ ಮಾತನಾಡುವುದ್ದನ್ನು ನೋಡಿ ಮಗು ಸಹ ಕೊಡವ ಭಾಷೆ ಮಾತಾಡಲು ಕಲಿಯುತ್ತದೆ. ಹಾಗೆಯೇ ಪೋಷಕರ ನಡೆ ನುಡಿಯನ್ನು ಮಕ್ಕಳು ಅನುಕರಣೆ ಮಾಡುತ್ತಾರೆ. ಪೋಷಕರು ಸಂಸ್ಕೃತಿ -ಸಂಸ್ಕಾರದಲ್ಲಿ ನಡೆದುಕೊಂಡಾಗ ಮಾತ್ರ ಮಕ್ಕಳು ಅನುಸರಿಸುತ್ತಾರೆ. ಹೇಳಿ ಕೊಡುವುದಕ್ಕಿಂತ ನಡೆದುಕೊಳ್ಳುವುದ್ದನ್ನು ನೋಡಿ ಸ್ವಾಭಾವಿಕವಾಗಿ ಮಕ್ಕಳು ಕಲಿಯುತ್ತಾರೆ ಎಂದು ಡಾ. ರೇವತಿ ಪೂವಯ್ಯ ಪ್ರತಿಪಾದಿಸಿದರು

ಹಿರಿಯರಿಗೆ ಗೌರವಿಸುವುದು, ಸಾಂಪ್ರದಾಯಿಕ ಉಟೋಪಾಚಾರ ಕಲಿಸಬೇಕು, ಸಂಸ್ಕೃತಿಗೆ ಬೆಂಬಲವಾಗಿರುವ ಪರಿಸರ, ಭೂಮಿ, ಕೊಡವ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳಾದ ಐನ್‌ಮನೆ, ಕೈಮಡ, ಮಂದ್ ಪ್ರಾಮುಖ್ಯತೆಗಳ ಬಗ್ಗೆ ಮಕ್ಕಳಿಗೆ ಕಲಿಸಿ ಕೊಡಬೇಕು, ಹೀಗಾದಾಗ ಮಕ್ಕಳಲ್ಲಿಯೂ ಸ್ವಾಭಾವಿಕವಾಗಿ ಕೊಡವ ಸಂಸ್ಕೃತಿ ಬಗ್ಗೆ ಗೌರವ ಹಾಗೂ ಅಭಿಮಾನ ಮೂಡುತ್ತದೆ ಎಂದು ಹೇಳಿದರು.

ಕೊಡಗಿನ ಭೂಸ್ವರೂಪ ಬದಲಾಗುತ್ತಿದ್ದು, ಇದು ಕೊಡವ ಸಂಸ್ಕೃತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ, ಮೂಲ ಭೂಸ್ವರೂಪ ಉಳಿಸಿಕೊಂಡು ಭೂಮಿ ಉಳಿಸಿಕೊಳ್ಳಲು ಮಹಿಳೆಯರು ಮಕ್ಕಳಲ್ಲಿ ಜಾಗೃತಿ ಬೆಳೆಸಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಅವರು ಕೊಡವ ಸಮಾಜಗಳು ಕಲ್ಯಾಣ ಮಂಟಪಕ್ಕೆ ಸೀಮಿತವಾಗಬಾರದು ಹಾಗೂ ಇಂತಹ ಅಪವಾದದಿಂದ ಹೊರಬರಲು ನಿರ್ಣಯ ಕೈಗೊಂಡು ಕೊಡವ ಸಂಸ್ಕೃತಿ ಅರಿವು, ಜಾಗೃತಿ, ಕಲಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಹಲವು ಸುತ್ತಿನ ಕಾರ್ಯಕ್ರಮ ನಡೆಸಲಾಗಿದೆ. ಅದರಂತೆ ಐದನೇ ಸುತ್ತಿನ ಕಾರ್ಯಕ್ರಮವಾಗಿ ವಿಚಾರಗೋಷ್ಠಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೆಣ್ಣು ಸಂಸಾರದಲ್ಲಿ ಸಂಸ್ಕಾರ ಕಲಿಸುವ ಸೇತುವೆಯಾಗಿದ್ದು, ಕೊಡವ ಮಹಿಳೆಯರು ಕೊಡಗಿನ ಸಂಸ್ಕೃತಿ ಬೆಳೆಸಲು, ಭೂಮಿ ಉಳಿಸಲು ಸಂಘಟಿತರಾಗಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.

ಹಿರಿಯ ಪತ್ರಕರ್ತೆ ಚೆಕ್ಕೇರ ಮೀನಾ ಸಂಜಯ್, ಪೊಮ್ಮಕ್ಕಡ ಕೂಟದ ಉಪಾಧ್ಯಕ್ಷೆ ಮೀದೇರಿರ ಕವಿತಾ ರಾಮು, ಪ್ರೊ. ಇಟ್ಟೀರ ಕಮಲಾಕ್ಷಿ ಬಿದ್ದಪ್ಪ, ಕೋಳೆರ ಭಾರತಿ, ಕೊಡವ ಸಮಾಜ ನಿರ್ದೇಶಕ ಚೀರಂಡ ಕಂದಾ ಸುಬ್ಬಯ್ಯ ಅವರು ಮಾತನಾಡಿ ಸಲಹೆ ನೀಡಿದರು.

ವೇದಿಕೆಯಲ್ಲಿ ಕೊಡವ ಸಮಾಜದ ಉಪಾಧ್ಯಕ್ಷೆ ಚಿರಿಯಪಂಡ ಇಮ್ಮಿ ಬೋಜಮ್ಮ, ಕಾರ್ಯದರ್ಶಿ ಕೋಟೆರ ಕಿಶನ್ ಉತ್ತಪ್ಪ, ನಿರ್ದೇಶಕರಾದ ಮೂಕಳಮಾಡ ಅರಸು ನಂಜಪ್ಪ,ಚೊಟ್ಟೆಕಾಳಪAಡ ಆಶಾ ಪ್ರಕಾಶ್,ಚೀರಂಡ ಕಂದಾ ಸುಬ್ಬಯ್ಯ, ಮೂಕಳೇರ ಕಾವ್ಯ ಮಧು, ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕೊಣಿಯಂಡ ಕಾವ್ಯ ಸೋಮಯ್ಯ ಹಾಜರಿದ್ದರು.

ಚೊಟ್ಟೆಕಾಳಪಂಡ ಆಶಾ ಪ್ರಕಾಶ್ ಪ್ರಾರ್ಥಿಸಿ, ಮೂಕಳೇರ ಕಾವ್ಯ ಮಧು ಸ್ವಾಗತಿಸಿ, ಬಲ್ಲಡಿಚಂಡ ಕಸ್ತೂರಿ ಕಾರ್ಯಕ್ರಮ ನಿರ್ವಹಿಸಿ, ಬಲ್ಯಮೀದೇರಿರ ಆಶಾ ಶಂಕರ ಸಂಪನ್ಮೂಲ ವ್ಯಕ್ತಿಗಳ ಪರಿಚಯಿಸಿ, ಪೊಮ್ಮಕ್ಕಡ ಕೂಟದ ಜಂಟಿ ಕಾರ್ಯದರ್ಶಿ ಮೂಕಳೇರ ಆಶಾ ಪೂಣಚ್ಚ ವಂದಿಸಿದರು.