ವೀರಾಜಪೇಟೆ, ಜು. ೮: ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರ ೫೦ನೇ ವರ್ಷದ ಜನ್ಮದಿನದ ಅಂಗವಾಗಿ ಸುವರ್ಣ ಮಹೋತ್ಸವ ಸಂಭ್ರಮ ಕಾರ್ಯಕ್ರಮವು ತಾ. ೯ರಂದು (ಇಂದು) ಬಿಟ್ಟಂಗಾಲದ ಕೂರ್ಗ್ ಎಥ್ನಿಕ್ ಸಭಾಂಗಣದಲ್ಲಿ ಬೆಳಿಗ್ಗೆ ೧೧.೩೦ ಗಂಟೆಗೆ ನಡೆಯಲಿದೆ.

ಸುವರ್ಣ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಾಜಪೇಟೆಯ ಹಿರಿಯ ವಕೀಲರಾದ ಮೇರಿಯಂಡ ಕೆ. ಪೂವಯ್ಯ ವಹಿಸಲಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಅರಮೇರಿ ಕಳಂಚೇರಿ ಮಠದ ಮಠಾಧೀಶರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಸಂತ ಅನ್ನಮ್ಮ ದೇವಾಲಯದ ಧರ್ಮಗುರುಗಳಾದ ಜೇಮ್ಸ್ ಡೋಮಿನಿಕ್, ಕೊಡಗು ಜಿಲ್ಲಾ ಖಾಝಿ ಎಂ.ಎA. ಅಬ್ದುಲ್ಲಾ ಫೈಜಿ ಎಡಪಾಲ, ಎಸ್.ವೈ.ಎಸ್. ರಾಜ್ಯಾಧ್ಯಕ್ಷ ಹಫೀಲ್ ಸಹದಿ ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ಮಾಜಿ ಎಂ.ಎಲ್.ಸಿ. ವೀಣಾ ಅಚ್ಚಯ್ಯ, ಕೆಪಿಸಿಸಿ ವಕ್ತಾರರಾದ ಲಕ್ಷ÷್ಮಣ್ ಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ. ಚಂದ್ರಕಲಾ, ಫೆಡರೇಷನ್ ಆಫ್ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಡಿಎಸ್‌ಎಸ್ ಅಧ್ಯಕ್ಷ ದಿವಾಕರ, ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಅರೆಭಾಷೆ ಗೌಡ ಸಮಾಜ ಅಧ್ಯಕ್ಷ ಜಯಾನಂದ, ಮಾಜಿ ಎಂ.ಎಲ್.ಸಿ. ಅರುಣ್ ಮಾಚಯ್ಯ, ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ, ಕೊಡವ ಭಾಷಿಕ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಡಾ. ಮೇಚಿರ ಸುಭಾಷ್ ನಾಣಯ್ಯ, ವೀರಾಜಪೇಟೆ ಬ್ಲಾಕ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

(ಮೊದಲ ಪುಟದಿಂದ) ಹುಟ್ಟುಹಬ್ಬದ ಪ್ರಯುಕ್ತ ಬೆಳಿಗ್ಗೆ ೧೦ ಗಂಟೆಗೆ ರಕ್ತದಾನ ಶಿಬಿರ ಮತ್ತು ಆರೋಗ್ಯ ಶಿಬಿರ ನಡೆಯಲಿದೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ೧೨೦ ಕುಟುಂಬಕ್ಕೆ ಮನೆಯ ಮೇಲ್ಛಾವಣಿ ಶೀಟ್‌ಗಳ ವಿತರಣೆ ನಡೆಯಲಿದೆ.

ಎಎಸ್‌ಪಿ ಅಸೋಸಿಯೇಟ್ ವತಿಯಿಂದ ವೀರಾಜಪೇಟೆ ಸರಕಾರಿ ಆಸ್ವತ್ರೆಗೆ ಅಗತ್ಯ ಉಪಕರಣ ಖರೀದಿಸಲು ೫ ಲಕ್ಷ ರೂ ಗಳನ್ನು ನೀಡಲಾಗುತ್ತದೆ. ಬಳಿಕ ಅಪರಾಹ್ನ ೧.೩೦ ಕ್ಕೆ ಅನ್ನದಾನ ಕಾರ್ಯಕ್ರಮ ನಡೆಯಲಿದೆ.

ಭಾಗಮಂಡಲದಲ್ಲಿ ವಿವಿಧ ಕಾರ್ಯಕ್ರಮ

ಎ.ಎಸ್. ಪೊನ್ನಣ್ಣ ಅವರ ಜನ್ಮದಿನಾಚರಣೆ ಅಂಗವಾಗಿ ತಾ.೯ ರಂದು (ಇಂದು) ಭಾಗಮಂಡಲದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ ೭ ಗಂಟೆಯಿAದ ೭.೩೦ರವರೆಗೆ ತಲಕಾವೇರಿಯಲ್ಲಿ ವಿಶೇಷ ಪೂಜೆ, ೮ ಗಂಟೆಗೆ ತಲಕಾವೇರಿಯಲ್ಲಿ ಪತ್ರಿಕಾಗೋಷ್ಠಿ, ೮.೩೦ಕ್ಕೆ ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ತುಲಾಭಾರ, ೯ ಗಂಟೆಗೆ ಭಾಗಮಂಡಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತಾ ಅರಿವಿನ ಮೂಲಕ ಮಕ್ಕಳೊಂದಿಗೆ ಜನ್ಮದಿನಾಚರಣೆ, ೯.೩೦ ಗಂಟೆಗೆ ಭಾಗಮಂಡಲದ ಮಾರುಕಟ್ಟೆಯಿಂದ ಸ್ವಚ್ಛತಾ ಅಭಿಯಾನ ನಡೆಯಲಿದೆ ಎಂದು ವಲಯ ಕಾಂಗ್ರೆಸ್ ಅಧ್ಯಕ್ಷ ಕೋಳಿಬೈಲು ವೆಂಕಟೇಶ್ ತಿಳಿಸಿದ್ದಾರೆ.