ಸೋಮವಾರಪೇಟೆ, ಜು. ೮: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಮಲ್ಲಳ್ಳಿ ಜಲಪಾತದಲ್ಲಿ ಕೆಲ ಪ್ರವಾಸಿಗರು ಮದ್ಯ ಸೇವನೆ ಮಾಡಿ ಮೋಜು ಮಸ್ತಿಯಲ್ಲಿ ತೊಡಗಿರುವುದು ಕಂಡುಬAದಿದೆ.

ಪ್ರವಾಸಿ ತಾಣದಲ್ಲಿ ಪ್ರವಾಸಿ ಮಿತ್ರ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿದ್ದರೂ ಸಹ ಇವರುಗಳ ಕಣ್ತಪ್ಪಿಸಿ ಕೆಲವರು ಮದ್ಯದ ಬಾಟಲಿಗಳನ್ನು ಕೆಳ ಭಾಗಕ್ಕೆ ತೆಗೆದುಕೊಂಡು ಹೋಗಿ, ತಳಭಾಗದಲ್ಲಿ ಮದ್ಯ ಸೇವನೆ ಮಾಡುತ್ತಿದ್ದಾರೆ.

ಜಲಪಾತಕ್ಕೆ ಇಳಿಯದಂತೆ ಫೆನ್ಸಿಂಗ್ ಅಳವಡಿಸಿದ್ದು, ಕೆಲವರು ಇದನ್ನೂ ಮುರಿದು ಒಳ ನುಗ್ಗಿ ನೀರಿಗೆ ಇಳಿಯಲು ಪ್ರಯತ್ನಿಸುತ್ತಿದ್ದಾರೆ. ಸಂಜೆ ೫.೩೦ಕ್ಕೆ ಪ್ರವಾಸಿ ಮಿತ್ರ ಪೊಲೀಸರ ಕರ್ತವ್ಯ ಮುಗಿಯಲಿದ್ದು, ಅವರುಗಳು ಸ್ಥಳದಿಂದ ವಾಪಸ್ಸಾದ ನಂತರ ಆಗಮಿಸುವ ಪ್ರವಾಸಿಗರು ಇಂತಹ ಕೃತ್ಯಕ್ಕೆ ಕೈಹಾಕುತ್ತಿದ್ದಾರೆ ಎನ್ನಲಾಗಿದೆ.

ಜಲಪಾತದ ಕೆಳಭಾಗದಲ್ಲಿ ಮದ್ಯ ಸೇವನೆ ಮಾಡುತ್ತಿರುವ ಪ್ರವಾಸಿಗರಿಗೆ ಸ್ಥಳೀಯರು ಬುದ್ದಿವಾದ ಹೇಳಿ ಕಳುಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಸಂಬAಧಿಸಿದ ಬೆಟ್ಟದಳ್ಳಿ ಗ್ರಾ.ಪಂ. ಆಡಳಿತ ಮುಂದಾಗಬೇಕೆAದು ನಗರಳ್ಳಿ ಗ್ರಾಮದ ರಮೇಶ್ ಒತ್ತಾಯಿಸಿದ್ದಾರೆ.