ಮಡಿಕೇರಿ, ಜು. ೮ : ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ(ಮೂಡ)ದ ನೂತನ ಅಧ್ಯಕ್ಷರನ್ನಾಗಿ ನಗರಸಭಾ ಸದಸ್ಯ ಬಿ.ವೈ.ರಾಜೇಶ್ ಹಾಗೂ ನಾಲ್ವರು ಸದಸ್ಯರನ್ನು ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.

ಸದಸ್ಯರುಗಳಾಗಿ ಸುದಯ್ ಎಂ.ಎನ್., ಮೊಣ್ಣಪ್ಪ ಕೆ.ಎ., ಮಿನಾಜ್ ಫಾತಿಮಾ ಹಾಗೂ ಚಂದ್ರಶೇಖರ್ ಆರ್.ಪಿ. ನಿಯುಕ್ತಿಗೊಂಡಿದ್ದಾರೆ.