ಕುಶಾಲನಗರ, ಜು. ೮: ವೇಶ್ಯಾವಾಟಿಕೆ ಹೆಸರಿನಲ್ಲಿ ದಂಧೆ ನಡೆಸಿ ಅಮಾಯಕರನ್ನು ವಂಚಿಸುತ್ತಿದ್ದ ಅಂತರ ಜಿಲ್ಲಾ ತಂಡವನ್ನು ಕುಶಾಲನಗರ ಪೊಲೀಸರು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಲ್ಲಿ ಯಶಸ್ವಿಯಾಗಿ ದ್ದಾರೆ. ಒಟ್ಟು ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದು, ಎರಡು ಕಾರು ೧೭ ಮೊಬೈಲ್, ಒಂದು ಟ್ಯಾಬ್, ಒಂದು ಲ್ಯಾಪ್‌ಟಾಪ್ ಹಾಗೂ ರೂ. ೨೪,೮೦೦ ನಗದು ವಶಪಡಿಸಿ ಕೊಂಡಿದ್ದಾರೆ.

ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಕುಶಾಲನಗರದ - ಮಡಿಕೇರಿ ರಸ್ತೆಯಲ್ಲಿರುವ ಲಾಡ್ಜ್ ಹೆಸರು ಹೇಳಿಕೊಂಡು ಹಲವು ಜನರಿಗೆ ವಂಚಿಸಿ ಆರೋಪಿಗಳು ೩ ಲಕ್ಷಕ್ಕೂ ಹೆಚ್ಚು ಹಣವನ್ನು ಪಡೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದರು.

ಹಾಸನ ಜಿಲ್ಲೆಯ ಸಕಲೇಶಪುರದ ಎಂಟು ಜನ ಆರೋಪಿಗಳನ್ನು ಬೆಂಗಳೂರಿಗೆ ತೆರಳಿ ಬಂಧಿಸಲಾಗಿದೆ. ಸಕಲೇಶಪುರದ ಮಂಜುನಾಥ (೨೯), ಸಂದೀಪ್ ಕುಮಾರ್ ಸಿಎಸ್ (೨೫), ಸಿ. ಬಿ. ರಾಕೇಶ್ (೨೪), ಕೆ. ಜಯಲಕ್ಷಿö್ಮ (೨೯), ಸಹನ (೧೯), ಪಲ್ಲವಿ (೩೦), ಅಭಿಷೇಕ್ (೨೪) ಮತ್ತು ಅಪ್ರಾಪ್ತ ಬಾಲಕಿಯೊಬ್ಬಳನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಅಂತರ್ಜಾಲ ಮೂಲಕ ಮಹಿಳೆಯರಿಂದ ಸೆಕ್ಸ್ ಮಸಾಜ್ ವೇಶ್ಯಾವಾಟಿಕೆ ಸೇವೆಗಳು ಲಭ್ಯ ಎಂಬುದಾಗಿ ಮೊಬೈಲ್ ಸಂಖ್ಯೆಯನ್ನು ನೀಡಿ ಕರೆ ಮಾಡುವಂತೆ ಸೃಷ್ಟಿಸಿರುವ ವೆಬ್‌ಸೈಟ್ ಮೂಲಕ ಅಮಾಯಕರನ್ನು ವಂಚನೆಗೆ ಒಳಗಾಗುವಂತೆ ಮಾಡುವ ಜಾಲ ಇದಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಲೊಕ್ಯಾಂಟೋ ಆ್ಯಪ್ ಮೂಲಕ ಕುಶಾಲನಗರದಲ್ಲಿ ವೇಶ್ಯಾವಾಟಿಕೆಗೆ ಮಹಿಳೆಯರು ದೊರೆಯುತ್ತಾರೆ ಎಂದು ವೆಬ್‌ಸೈಟ್ ಮೂಲಕ ಜಾಹೀರಾತು ನೀಡುತ್ತಿರುವುದು ಈ ಜಾಲದ ದಂಧೆಯಾಗಿತ್ತು. ಕುಶಾಲನಗರ ಲಾಡ್ಜ್ ಒಂದರ ಹೆಸರು ಹೇಳಿಕೊಂಡು ವಂಚಕರು ಕಾರ್ಯಾಚರಣೆ ಮಾಡುತ್ತಿದ್ದರು.

ಈ ಹಿನೆÀ್ನಲೆಯಲ್ಲಿ ಮಾಹಿತಿ ದೊರೆತ ಜಿಲ್ಲಾ ಪೊಲೀಸ್ ಇಲಾಖೆ ಸ್ಥಳೀಯ ಪೊಲೀಸ್ ಅಪರಾಧ ಪತ್ತೆ ತಂಡದ ಮೂಲಕ ವಂಚಕರನ್ನು ಪತ್ತೆ ಮಾಡುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ ಎಂದು ರಾಮರಾಜನ್ ತಿಳಿಸಿದರು.

ಈ ದಂಧೆಗೆ ಕೆಲವರು ಮಾರು ಹೋಗಿ ಮೊಬೈಲ್ ಮೂಲಕ ಬೇಡಿಕೆ ಇಟ್ಟ ಹಣವನ್ನು ನೀಡಿ ವಂಚನೆಗೆ ಒಳಗಾಗಿದ್ದಾರೆ. ಜಿಲ್ಲೆ ಸೇರಿದಂತೆ ನೆರೆಯ ಮೈಸೂರು, ಬೆಂಗಳೂರು ಮತ್ತಿತರ ಕಡೆ ಕೂಡ ಇದೇ ರೀತಿ ಈ ತಂಡ ವಂಚನೆ ನಡೆಸಿದೆ ಎಂದು ರಾಮರಾಜನ್ ವಿವರ ನೀಡಿದರು.

ಪ್ರಕರಣದ ಬೆನ್ನು ಬಿದ್ದ ಪೊಲೀಸ್ ಕಾರ್ಯಾಚರಣೆ ತಂಡ ಕುಶಾಲನಗರ ಡಿವೈಎಸ್‌ಪಿ ಆರ್.ವಿ. ಗಂಗಾಧರಪ್ಪ, ವೃತ್ತ ನಿರೀಕ್ಷಕ ಬಿ.ಜಿ. ಪ್ರಕಾಶ್, ಠಾಣಾಧಿಕಾರಿಗಳಾದ ಎಚ್.ವಿ. ಚಂದ್ರಶೇಖರ್, ಹೆಚ್.ಟಿ. ಗೀತಾ ಮತ್ತು ಸಿಬ್ಬಂದಿಗಳು ವಿಶೇಷ ತಂಡ ರಚಿಸಿ ಅಪರಾಧ ಕೃತ್ಯಕ್ಕೆ ಸಂಬAಧಿಸಿದ ಮಾಹಿತಿ ಮತ್ತು

(ಮೊದಲ ಪುಟದಿಂದ) ಹುಟ್ಟುಹಬ್ಬದ ಪ್ರಯುಕ್ತ ಬೆಳಿಗ್ಗೆ ೧೦ ಗಂಟೆಗೆ ರಕ್ತದಾನ ಶಿಬಿರ ಮತ್ತು ಆರೋಗ್ಯ ಶಿಬಿರ ನಡೆಯಲಿದೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ೧೨೦ ಕುಟುಂಬಕ್ಕೆ ಮನೆಯ ಮೇಲ್ಛಾವಣಿ ಶೀಟ್‌ಗಳ ವಿತರಣೆ ನಡೆಯಲಿದೆ.

ಎಎಸ್‌ಪಿ ಅಸೋಸಿಯೇಟ್ ವತಿಯಿಂದ ವೀರಾಜಪೇಟೆ ಸರಕಾರಿ ಆಸ್ವತ್ರೆಗೆ ಅಗತ್ಯ ಉಪಕರಣ ಖರೀದಿಸಲು ೫ ಲಕ್ಷ ರೂ ಗಳನ್ನು ನೀಡಲಾಗುತ್ತದೆ. ಬಳಿಕ ಅಪರಾಹ್ನ ೧.೩೦ ಕ್ಕೆ ಅನ್ನದಾನ ಕಾರ್ಯಕ್ರಮ ನಡೆಯಲಿದೆ.

ಭಾಗಮಂಡಲದಲ್ಲಿ ವಿವಿಧ ಕಾರ್ಯಕ್ರಮ

ಎ.ಎಸ್. ಪೊನ್ನಣ್ಣ ಅವರ ಜನ್ಮದಿನಾಚರಣೆ ಅಂಗವಾಗಿ ತಾ.೯ ರಂದು (ಇಂದು) ಭಾಗಮಂಡಲದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ ೭ ಗಂಟೆಯಿAದ ೭.೩೦ರವರೆಗೆ ತಲಕಾವೇರಿಯಲ್ಲಿ ವಿಶೇಷ ಪೂಜೆ, ೮ ಗಂಟೆಗೆ ತಲಕಾವೇರಿಯಲ್ಲಿ ಪತ್ರಿಕಾಗೋಷ್ಠಿ, ೮.೩೦ಕ್ಕೆ ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ತುಲಾಭಾರ, ೯ ಗಂಟೆಗೆ ಭಾಗಮಂಡಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತಾ ಅರಿವಿನ ಮೂಲಕ ಮಕ್ಕಳೊಂದಿಗೆ ಜನ್ಮದಿನಾಚರಣೆ, ೯.೩೦ ಗಂಟೆಗೆ ಭಾಗಮಂಡಲದ ಮಾರುಕಟ್ಟೆಯಿಂದ ಸ್ವಚ್ಛತಾ ಅಭಿಯಾನ ನಡೆಯಲಿದೆ ಎಂದು ವಲಯ ಕಾಂಗ್ರೆಸ್ ಅಧ್ಯಕ್ಷ ಕೋಳಿಬೈಲು ವೆಂಕಟೇಶ್ ತಿಳಿಸಿದ್ದಾರೆ.