ಕೂಡಿಗೆ, ಜು. ೮: ಪ್ರಜಾಪ್ರಭುತ್ವದ ಮಹತ್ವ ಸರಿಯಾಗಿ ಅರ್ಥ ಮಾಡಿಕೊಂಡು ಬಲಿಷ್ಠ ರಾಷ್ಟç ಕಟ್ಟಲು ಶಾಲಾ ಸಂಸತ್ತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತದೆ ಎಂದು ನಂಜರಾಯಪಟ್ಟಣ ವಿದ್ಯಾಸಂಸ್ಥೆ ಕಾರ್ಯದರ್ಶಿ ಐಯ್ಯಂಡ್ರ ಲೋಕನಾಥ್ ಹೇಳಿದರು.

ನಂಜರಾಯಪಟ್ಟಣ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಶಾಲಾ ಸಂಸತ್ತು, ನಿಸರ್ಗ ಇಕೋ ಕ್ಲಬ್, ಮತದಾರರ ಸಾಕ್ಷರತಾ ಕ್ಲಬ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಾಯಕನು ಶಾಲೆಯ ನಾಲ್ಕು ಗೋಡೆಗಳ ನಡುವೆ ಹುಟ್ಟುತ್ತಾನೆ. ಅದಕ್ಕೆ ಶಿಕ್ಷಕರ ಪರಿಶ್ರಮ ಕೊಡುಗೆಯೂ ಅಷ್ಟೇ ಮಹತ್ವವಾದುದು. ಶಾಲೆಯ ನಾಯಕತ್ವ ವಹಿಸಿ ಜವಾಬ್ದಾರಿಯನ್ನು ನಿಭಾಯಿಸುವ ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯದ ಗುರಿಯು ಸ್ಪಷ್ಟವಾಗುತ್ತದೆ ಎಂದರು.

ನಂಜರಾಯಪಟ್ಟಣ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಅಧ್ಯಕ್ಷ ಎ.ಎಂ.ಯತೀಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತಿನಿಂದ ಕಾರ್ಯನಿರ್ವಹಿಸಬೇಕು. ಆಂತರಿಕ ಶಿಸ್ತು ಬೆಳೆಸಲು ಶಾಲಾ ಸಂಸತ್ತು ಅವಶ್ಯಕ ಎಂದರು.

ರAಗಸಮುದ್ರ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಲೀಲಾವತಿ ಮಾತನಾಡಿ, ಶಾಲಾ ವಿದ್ಯಾರ್ಥಿ ಸಂಘದ ಚುನಾವಣೆಯು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ. ವಿದ್ಯಾರ್ಥಿಗಳು ಅದರ ಸದುಪಯೋಗವನ್ನು ಪಡೆದು ಬದುಕಿನಲ್ಲಿ ಯಶಸ್ಸನ್ನು ಗಳಿಸಬೇಕೆಂದರು.

ನAಜರಾಯಪಟ್ಟಣ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಚ್.ಬಿ.ಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಯಕನಾದವನಿಗೆ ಶಿಸ್ತು, ಸಂಯಮ,ಧೈರ್ಯ ಬಹಳ ಮುಖ್ಯ ಎಂದರು.

ಶಿಕ್ಷಕ ಅರುಣ್‌ಕುಮಾರ್ ವಿದ್ಯಾರ್ಥಿ ಸಂಸತ್‌ಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು. ವಿದ್ಯಾಸಂಸ್ಥೆ ನಿರ್ದೇಶಕ ಪಿ.ಬಿ. ಅಶೋಕ್ ಪ್ರಮಾಣ ಪತ್ರ ವಿತರಿಸಿದರು.

ಈ ಸಂದರ್ಭ ನಂಜರಾಯಪಟ್ಟಣ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸರಳಾರಾಣಿ, ಜ್ಞಾನವಾಹಿನಿ ಕಾನ್ವೆಂಟ್ ಮುಖ್ಯ ಶಿಕ್ಷಕ ಕಾಮೇಶ್, ವಾಲ್ನೂರು ಶಾಲೆ ಮುಖ್ಯಶಿಕ್ಷಕ ವಸಂತಕುಮಾರ್, ಶಿಕ್ಷಕರಾದ ಪೂರ್ಣಿಮಾ, ರಂಜಿನಿ, ಬಾಳಗೋಡು ಶಿಕ್ಷಕಿ ಇಂದ್ರಾಣಿ, ಬಸವನಹಳ್ಳಿ ಗಿರಿಜನ ಆಶ್ರಮ ಶಾಲೆಯ ಮುಖ್ಯ ಶಿಕ್ಷಕ ರವಿ, ಪ್ರೌಢಶಾಲಾ ಶಿಕ್ಷಕರಾದ ನಾಗರಾಜು, ಶ್ವೇತಾ, ಕೆ.ಟಿ. ಗೀತಾ, ಪ್ರಸಾದ್ ಉಪಸ್ಥಿತರಿದ್ದರು.

೮ನೇ ತರಗತಿ ವಿದ್ಯಾರ್ಥಿಗಳಿಗೆ ಹೂ ಹಾಗೂ ಪೆನ್ನು ನೀಡುವ ಮೂಲಕ ಹಿರಿಯ ವಿದ್ಯಾರ್ಥಿಗಳು ಆತ್ಮೀಯವಾಗಿ ಸ್ವಾಗತಿಸಿದರು. ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಿತು.