ವೀರಾಜಪೇಟೆ, ಜು. ೯: ರೋಟರಿ ಸಂಸ್ಥೆಯು ಹಲವಾರು ವರ್ಷ ಗಳಿಂದಲೂ ಜನರ ಹಿತಕ್ಕಾಗಿ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದೆ ಎಂದು ರೋಟರಿ ಸಂಸ್ಥೆಯ ಜಿಲ್ಲಾ ಚೇರ್ಮ್ಯಾನ್ ಎಂ.ಎಸ್. ರಘು ಹೇಳಿದರು. ನಗರದ ತಾಲೂಕು ಮೈದಾನ ಬಳಿಯಿರುವ ರೋಟರಿ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರೋಟರಿ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಅನೇಕ ಯೋಜನೆಗಳನ್ನು ರೋಟರಿ ಸಂಸ್ಥೆಯಿAದ ಮಾಡಲಾಗಿದೆ ಎಂದು ರಘು ತಿಳಿಸಿದರು.
ಅತಿಥಿಯಾಗಿ ಆಗಮಿಸಿದ್ದ ದೇವಣಿರ ಎಂ.ಕಿರಣ್ ಮಾತನಾಡಿ ರೋಟರಿ ಸಂಸ್ಥೆ ಜನರಿಗೆ ಸಂಧ್ಯಾ ಸುರಕ್ಷ ಯೋಜನೆ ಹಾಗೂ ಕ್ಯಾನ್ಸರ್ ಕಾಯಿಲೆಯನ್ನು ಗುರುತಿಸಿ ಚುಚ್ಚುಮದ್ದು ನೀಡುವುದು ಮತ್ತು ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಎಂದರು. ಸಭೆಯ ಅಧ್ಯಕ್ಷತೆಯನ್ನು ಎಂ.ಎA. ಪೂವಣ್ಣ ವಹಿಸಿದ್ದರು. ೨೦೨೪-೨೫ನೇ ಸಾಲಿಗೆ ಅಧ್ಯಕ್ಷರಾಗಿ ಪ್ರಣವ್ ಚಿತ್ರಭಾನು ಅವರಿಗೆ ವೇದಿಕೆಯಲ್ಲಿ ಎಂ. ಎಸ್. ರಘು ಅಧಿಕಾರ ಹಸ್ತಾಂತರಿಸಿದರು. ರೋಟರಿ ಸಂಸ್ಥೆಯ ಚಂಗಪ್ಪ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಬಿ.ಬಿ.ಮಾದಪ್ಪ ಹಾಜರಿದ್ದರು. ಈ ವೇಳೆ ಮುಂದಿನ ಅವಧಿಗೆ ಸದಸ್ಯರುಗಳಾಗಿ ೧೭ ಮಂದಿಯ ಆಯ್ಕೆ ನಡೆಯಿತು.