ವೀರಾಜಪೇಟೆ, ಜು. ೯: ಜಿಲ್ಲೆಯ ವೀರಾಜಪೇಟೆ ಮತ್ತು ಕುಶಾಲನಗರದಲ್ಲಿ ಮಾತ್ರ ಸಿಎನ್‌ಜಿ ಬಂಕ್‌ಗಳಿದ್ದು ಜಿಲ್ಲೆಯ ವಿವಿಧ ಭಾಗಗಳಿಂದ ಆಟೋಗಳು ಗ್ಯಾಸ್ ತುಂಬಿಸಲು ವೀರಾಜಪೇಟೆಗೆ ಬರುತ್ತಿದ್ದು ದಾರಿ ಮಧ್ಯೆ ಅನಾಹುತಗಳು ಸಂಭವಿಸಿದರೆ ಯಾವುದೇ ವಿಮೆ ದೊರೆಯುವುದಿಲ್ಲ. ಆದ ಕಾರಣ ಆಟೋಗಳು ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸಲು ಜಿಲ್ಲಾ ಪರವಾನಗಿ ನೀಡಬೇಕು ಎಂದು ಜೈ ಭಾರತ್ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಎನ್.ಎನ್. ಶಿವು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ವೀರಾಜಪೇಟೆ ಪ್ರೆಸ್‌ಕ್ಲಬ್‌ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಾಕಷ್ಟು ಸಿ.ಎನ್.ಜಿ ಆಟೋಗಳು ರಸ್ತೆಗೆ ಇಳಿಯುತ್ತಿವೆ. ಅವುಗಳು ಅನಿಲ ತುಂಬಿಸಲು ವೀರಾಜಪೇಟೆ ಅಥವಾ ಕುಶಾಲನಗರಕ್ಕೆ ತೆರಳಬೇಕು. ಪೊನ್ನಂಪೇಟೆ ಗೋಣಿಕೊಪ್ಪ ಮೂರ್ನಾಡು ಮುಂತಾದ ಕಡೆಗಳಿಂದ ಆಟೋಗಳು ವೀರಾಜಪೇಟೆಗೆ ಬರುತ್ತಿವೆ. ಈ ರೀತಿ ಬರುವ ಆಟೋಗಳು ಅಪಘಾತವಾದರೆ ಯಾವುದೇ ವಿಮೆ ಲಭಿಸುವುದಿಲ್ಲ. ಪರವಾನಗಿಯಲ್ಲಿ ಪಟ್ಟಣ ವ್ಯಾಪ್ತಿಯಿಂದ ೧೫ ಕಿ.ಮೀ. ಮಿತಿ ಇರುವುದರಿಂದ ಜಿಲ್ಲಾ ಮಟ್ಟದ ಪರವಾನಗೆ ಆಟೋಗಳಿಗೆ ನೀಡಬೇಕು.
ವೀರಾಜಪೇಟೆ ವ್ಯಾಪ್ತಿಯಲ್ಲಿ ವಾರಕ್ಕೆ ನಿತ್ಯ ೩-೪ ಹೊಸ ಆಟೋಗಳು ಬರುತ್ತಿವೆ, ಬಜಾಜ್ ಸಂಸ್ಥೆಯವರೇ ಈ ಆಟೋಗಳಿಗೆ ಸಾರಿಗೆ ಇಲಾಖೆ ವತಿಯಿಂದ ನೋಂದಾಯಿತ ಪತ್ರಗಳನ್ನು ನೀಡುತ್ತಿದೆ. ಆಟೋಗಳು ರಸ್ತೆಗಿಳಿದರೂ ಪರವಾನಗಿ ಪತ್ರ ನೀಡಲು ಸುಮಾರು ನಾಲ್ಕು ತಿಂಗಳಾದರೂ ಕಾಯಬೇಕಾಗಿದೆ. ನೋಂದಾಯಿತ ಪತ್ರ ಇಲ್ಲದೆ ವಾಹನ ಚಾಲನೆ ಮಾಡದಂತೆ ಪೊಲೀಸರು ತಡೆಯುತ್ತಿದ್ದಾರೆ. ಬಾಡಿಗೆ ಇಲ್ಲದೆ ಹಣಕಾಸು ಸಂಸ್ಥೆಗಳಿAದ ಪಡೆದ ಸಾಲ ಪಾವತಿಗೂ ತೊಂದರೆ ಆಗುತ್ತಿದೆ. ಆದರಿಂದ ಸಂಸ್ಥೆಯವರು ಎರಡು ವಾರದಲ್ಲಿ ನೋಂದಾಯಿತ ಪತ್ರ ನೀಡುವಂತೆ ಆಗ್ರಹಿಸಿದರಲ್ಲದೆ ನೋಂದಾಯಿತ ಪತ್ರ ಇಲ್ಲದರಿಂದ ವೀರಾಜಪೇಟೆ ನಗರ ಠಾಣೆಯಲ್ಲಿ ವಿ.ಟಿ.ಪಿ.ಎಸ್ ಸಂಖ್ಯೆಯನ್ನು ಪೊಲೀಸರು ಆಟೋಗಳಿಗೆ ನೀಡುತ್ತಿಲ್ಲ. ಇನ್ನು ಕೆಲವು ಆಟೋಗಳು ನಗರದ ವಿ.ಟಿ.ಪಿ.ಎಸ್ ಸಂಖ್ಯೆ ಪಡೆದು ಇಲಾಖಾ ಮಿತಿ ದಾಟಿ ಕಡಂಗ, ಬೆೆÃತ್ರಿ ಬಿಟ್ಟಂಗಾಲದAತಹ ಗ್ರಾಮಾಂತರದಲ್ಲಿ ವಾಹನ ಚಲಾಯಿಸುತ್ತಿವೆ.
ಪಟ್ಟಣದ ರಸ್ತೆಗಳು ಕಿರಿದಾಗಿದ್ದು ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಅಂಗಡಿ ಮಾಲೀಕರು ತಮ್ಮ ವಾಹನಗಳನ್ನು ಅಂಗಡಿ ಮುಂದೆ ನಿಲ್ಲಿಸುತ್ತಾರೆ. ಗ್ರಾಮಾಂತರ ಕಡೆಗಳಿಂದ ಬರುವ ವಾಹನಗಳಿಗೆ ಸ್ಥಳಾವಕಾಶ ಇರುವುದಿಲ್ಲ. ಆಟೋ ನಿಲ್ದಾಣದಲ್ಲಿ ಪಾರ್ಕಿಂಗ್ ಮಾಡುವುದರಿಂದ ಪ್ರತಿದಿನ ಕಿರಿಕಿರಿ ಅನುಭವಿಸಬೇಕಾಗಿದೆ ಎಂದರು.
ಪಟ್ಟಣದ ಚಿಕ್ಕಪೇಟೆಯ ಬಳಿ ಸರಕಾರಿ ಜೂನಿಯರ್, ಪದವಿ ಕಾಲೇಜು ಎ.ಪಿ.ಸಿ ಎಂ.ಎಸ್, ಬ್ಯಾಂಕ್, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು, ಆಟೋ ನಿಲ್ದಾಣ ಬಸ್ ತಂಗುದಾಣ ಇವೆ. ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಶೌಚಗೃಹ ಅಗತ್ಯ ಇದೆ. ಈ ಕುರಿತು ಕಳೆದ ಗೌರಿ ಗಣೇಶ ಉತ್ಸವ ಸಮಯದಲ್ಲಿ ಶಾಸಕರಿಗೆ ನಾವು ಮನವಿ ನೀಡಿದ ಹಿನ್ನಲೆಯಲ್ಲಿ ಜಾಗ ಗುರುತಿಸಿಕೊಟ್ಟರೆ ಕೂಡಲೆ ಶೌಚಗೃಹ ನಿರ್ಮಾಣ ಮಾಡಿ ಕೊಡುವ ಭರವಸೆ ನೀಡಿದರು. ನಾವು ಜಾಗ ಗುರುತಿಸಿ ಕೊಟ್ಟರೂ ಈವರೆಗೆ ಶಾಸಕರು ಅಸಕ್ತಿ ವಹಿಸಿಲ್ಲ. ಸದಾ ಜನಜಂಗುಳಿಯ ಜಾಗದಲ್ಲಿ ಹೈಟೆಕ್ ಶೌಚಾಲಯ ನಿರ್ಮಿಸುವಂತೆ ಶಾಸಕರನ್ನು ಮತ್ತೆ ಈ ಮೂಲಕ ಒತ್ತಾಯಿಸುತ್ತೇವೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಜೀವನ್, ಸಹ ಕಾರ್ಯದರ್ಶಿ ಜಾಕೋಬ್ ನರೋನÀ, ಉಪಾಧ್ಯಕ್ಷ ಜಗದೀಶ್, ಸಲಹೆಗಾರ ಪ್ರವೀಣ್, ನಿರ್ದೇಶಕರುಗಳಾದ ದಿನೇಶ್, ಭಾಗೇಷ್, ಕುಶಾಲಪ್ಪ, ವಸಂತ, ಸುನೀಲ್, ಸಂದೀಪ್ ಬೆಳ್ಯಪ್ಪ ಉಪಸ್ಥಿತರಿದ್ದರು.